ಬೆಂಗಳೂರು:ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರ ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಕೊಲಂಬಿಯಾ ಗ್ಯಾಂಗ್​ ಅನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ವಿಲಿಯನ್ ಪಡಿಲ್ಲಾ, ಸ್ಟೆಫಾನಿಯಾ ಹಾಗೂ ಕ್ರಿಶ್ಚಿಯನ್ ಇನಿಸ್ ಎಂದು ಗುರುತಿಸಲಾಗಿದೆ. ಸುಮಾರು 15 ಅಡಿ ಗೋಡೆಗಳನ್ನು ಸಹ ಸುಲಭವಾಗಿ ಜಿಗಿಯುವ ತರಬೇತಿ ಪಡೆದಿದ್ದರು. ಸೈಕಲ್‌ನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನ ಪತ್ತೆ ಮಾಡಿ ವಾಕಿಟಾಕಿ ಸೇರಿದಂತೆ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದರು.
ಇದನ್ನೂ ಓದಿ:ಬಿಗ್​ಬಾಸ್​ ಶೋ ಪ್ರತಿ ಎಪಿಸೋಡ್​ಗೆ ನಾಗಾರ್ಜುನ್​ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತಿರಾ!
ಅಚ್ಚರಿಯೆಂದರೆ ಆರೋಪಿಗಳ ವಿಚಾರಣೆ ವೇಳೆ ಪೊಲೀಸರೇ ಸ್ಪ್ಯಾನಿಷ್ ಭಾಷೆ ಕಲಿತಿದ್ದಾರೆ. ಯುವತಿ ಸ್ಟೆಫಾನಿಯಾ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದಳು. ಬಳಿಕ ಹೊರ ಬಂದ ವ್ಯಕ್ತಿಗಳಿಗೆ ಸ್ಪ್ರೇ ಮಾಡಿ ಮೂರ್ಚೆ ಹೋಗುವಂತೆ ಮಾಡುತ್ತಿದ್ದಳು. ನಂತರ ವಾಕಿಟಾಕಿಯಲ್ಲಿ ಸ್ನೇಹಿತರನ್ನು ಕರೆಸಿಕೊಂಡು ಕಳ್ಳತನ ಮಾಡುತ್ತಿದ್ದರು.
ಗ್ಯಾಸ್ ಕಟರ್​ನಿಂದ ಬಾಗಿಲುಗಳನ್ನು ಬ್ರೇಕ್ ಮಾಡಿ ಕಳ್ಳತನ ಮಾಡ್ತಿದ್ದರು. ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ ಮಾಡ್ತಿರುವಾಗ ಆರೋಪಿಗಳು ಪಿಪಿಇ ಕಿಟ್ ಧರಿಸಿದ್ದರು. ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿದೆ.
ಈ ಹಿಂದೆ ಜಯನಗರದಲ್ಲಿ ಕಳ್ಳತನ ಮಾಡಿ ಆರೋಪಿಗಳು ಸಿಕ್ಕಿ ಬಿದ್ದಿದ್ದರು. ಆರೋಪಿಗಳಿಂದ ಆರು ಕೆಜಿ ಚಿನ್ನ ಕಳುವಾಗಿರುವ ಬಗ್ಗೆ ಮಾಹಿತಿ ಇದೆ.(ದಿಗ್ವಿಜಯ ನ್ಯೂಸ್​)
ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಅಪ್​ಲೋಡ್​ ಮಾಡ್ತಿದ್ದ ಟೆಕ್ಕಿಗಳಿಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
