ಬೆಂಗಳೂರು:ವಾಯು ಸೇನೆ ಅಧಿಕಾರಿ ಹೆಸರಿನಲ್ಲಿ ಡೀಸೆಲ್ ಸಗಟು ವ್ಯಾಪಾರಿಗೆ ಕರೆ ಮಾಡಿ 25 ಲಕ್ಷ ರೂ. ದೋಚಿದ್ದರೆ ಮತ್ತೊಂದೆಡೆ ರೈಲ್ವೆ ಟಿಕೆಟ್ ರದ್ದುಪಡಿಸಲು ಕರೆ ಮಾಡಿದ ವ್ಯಕ್ತಿಯಿಂದ 29 ಸಾವಿರ ರೂ. ಸುಲಿಗೆ ಮಾಡಿದ್ದಾರೆ. ಇದೇ ರೀತಿಯಾಗಿ ಇನ್​ಸ್ಟಾಗ್ರಾಂನಲ್ಲಿ ಐಪಿಎಲ್ ಟಿಕೆಟ್ ಖರೀದಿಗೆ ಮುಂದಾದ ಯುವಕನಿಂದ 2.94 ಲಕ್ಷ ರೂ. ಪಡೆದು ಮೋಸ ಮಾಡಿರುವುದು ವರದಿಯಾಗಿದೆ.
ಕಸವನಹಳ್ಳಿಯ ಉದ್ಯಮಿ ರಾಹುಲ್ ಕೆ. ವಿಜಯರಾಜನ್ ಎಂಬುವರು ಇದ್ದಲಿಗೆ ಡೀಸೆಲ್ ಡಿಲವರಿ ಕೊಡುವ ಕಂಪನಿ ನಡೆಸುತ್ತಿದ್ದಾರೆ. ಇವರಿಗೆ ಸಾಹಿಲ್ ಕುಮಾರ್ ಎಂಬಾತ ಕರೆ ಮಾಡಿ ಜಾಲಹಳ್ಳಿ ವಾಯು ಸೇನೆ ಘಟಕದಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದ. ತುರ್ತಾಗಿ 6 ಸಾವಿರ ಲೀಟರ್ ಡೀಸೆಲ್ ವಾಯುಸೇನೆಗೆ ಬೇಕಾಗಿದೆ ಎಂದಿದ್ದ. ಇದಾದ ಮೇಲೆ ಹಣ ವರ್ಗಾವಣೆಗೆ ಬ್ಯಾಂಕ್ ಖಾತೆ ಮಾಹಿತಿ ಬೇಕೆಂದು ಉದ್ಯಮಿ ಕಡೆಯಿಂದ ಪಡೆದುಕೊಂಡು ದೃಢೀಕರಣಕ್ಕಾಗಿ 5 ರೂ. ಪಾವತಿಸುವಂತೆ ಸೂಚಿಸಿದ್ದ. ಇದನ್ನು ನಂಬಿದ ಉದ್ಯಮಿ, ಅಪರಿಚಿತ ವ್ಯಕ್ತಿ ಹೇಳಿದ ಬ್ಯಾಂಕ್ ಖಾತೆಗೆ 5 ರೂ. ಜಮೆ ಮಾಡಿದ್ದರು. ಮತ್ತೆ ಮತ್ತೊಂದು ಖಾತೆಯಿಂದ 10 ರೂ. ವರ್ಗಾವಣೆಗೆ ಹೇಳಲಾಗಿತ್ತು. ಅದನ್ನೂ ಕಳುಹಿಸಿದ ಉದ್ಯಮಿಯಿಂದ ಸೈಬರ್ ಕಳ್ಳರು, ‘ಮೊದಲು 6 ಸಾವಿರ ಲೀಟರ್ ಡೀಸೆಲ್​ಗೆ 5.23 ಲಕ್ಷ ರೂ. ಪಾವತಿ ಮಾಡಬೇಕು. ಬಳಿಕ ವಾಯು ಸೇನೆಯಿಂದ ವಾಪಸ್ ಕಳುಹಿಸಲಾಗುತ್ತದೆ’ ಎಂದು ದಾರಿ ತಪ್ಪಿಸಿದ್ದರು. ಸೇನಾಧಿಕಾರಿ ಎಂದು ನಂಬಿ 5.23 ಲಕ್ಷ ರೂ. ಉದ್ಯಮಿ ಕಳುಹಿಸಿದ ಮೇಲೆ ವಾಪಸ್ ಕೊಡದೆ ತಾಂತ್ರಿಕ ದೋಷ ಎಂದು ಸಬೂಬು ಹೇಳಿಕೊಂಡು ಹಂತ ಹಂತವಾಗಿ 25.16 ಲಕ್ಷ ರೂ. ಪಡೆದುಕೊಂಡಿದ್ದರು.
ಮತ್ತೊಂದೆಡೆ 6 ಸಾವಿರ ಲೀಟರ್ ಡೀಸೆಲ್ ತುಂಬಿದ್ದ ಟ್ಯಾಂಕರ್ ಚಾಲಕ, ಜಾಲಹಳ್ಳಿ ವಾಯು ಸೇನೆ ಘಟಕದ ಮುಖ್ಯ ದ್ವಾರದ ಬಳಿಕ ಹೋಗಿ ಸಾಹಿಲ್ ಕುಮಾರ್ ಎಂಬಾತನಿಗೆ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದಾಗ ಅಂತಹ ಅಧಿಕಾರಿ ಯಾರೂ ಇಲ್ಲ. ಜತೆಗೆ ಖಾಸಗಿ ವ್ಯಕ್ತಿಗಳಿಂದ ಡೀಸೆಲ್ ಖರೀದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದಾಗ ಉದ್ಯಮಿಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ವೈಟ್​ಫೀಲ್ಡ್ ಸಿಇಎಲ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಟಿಕೆಟ್ ರದ್ದು ನೆಪದಲ್ಲಿ ಧೋಖಾ: ರೈಲ್ವೆ ಟಿಕೆಟ್ ರದ್ದುಪಡಿಸುವ ಉದ್ದೇಶಕ್ಕೆ ಹೆಲ್ಪ್​ಲೈನ್​ಗೆ ಕರೆ ಮಾಡಿದ ಪ್ರಯಾಣಿಕನಿಗೆ ಸಹಾಯ ಮಾಡುವ ನೆಪದಲ್ಲಿ ಸೈಬರ್ ಕಳ್ಳರು 29 ಸಾವಿರ ರೂ. ದೋಚಿದ್ದಾರೆ. ವಿವೇಕನಗರದ ನಿವಾಸಿ ವಿ.ಆರ್. ಮಂಜುನಾಥ್ ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೇ 16ರಂದು ರೈಲ್ವೆ ಟಿಕೆಟ್ ರದ್ದುಪಡಿಸುವ ಉದ್ದೇಶಕ್ಕೆ ಗೂಗಲ್​ನಲ್ಲಿ ಹೆಲ್ಪ್​ಲೈನ್ ಹುಡುಕಾಟ ನಡೆಸಿ ಅದರಲ್ಲಿ ಸಿಕ್ಕ ಮೊಬೈಲ್ ನಂಬರ್​ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ, ಪಿಎನ್​ಆರ್ ನಂಬರ್ ಪಡೆದು ಮತ್ತೊಂದು ಮೊಬೈಲ್ ನಂಬರ್ ಕೊಟ್ಟು ಇದಕ್ಕೆ ಕರೆ ಮಾಡುವಂತೆ ಸಲಹೆ ಕೊಟ್ಟಿದ್ದ. ಆ ಸಂಖ್ಯೆಗೆ ಕರೆ ಮಾಡಿದಾಗ ನಿಮ್ಮ ಹಣವನ್ನು ವಾಪಸ್ ಕಳುಹಿಸುತ್ತವೆ ಎಂದು ಹೇಳಿ ವಾಟ್ಸ್​ಆಪ್​ನಲ್ಲಿ ಲಿಂಕ್ ಕಳುಹಿಸಿ ಅದರಲ್ಲಿ ಮಾಹಿತಿ ತುಂಬುವಂತೆ ಹೇಳಿದ್ದಾರೆ. ಲಿಂಕ್ ಮೇಲೆ ಕ್ಲಿಕ್ ಮಾಡಿದ ಮಂಜುನಾಥ್, ಅದರಲ್ಲಿ ಕೇಳಿದ ಬ್ಯಾಂಕ್ ಖಾತೆ ವಿವರ ತುಂಬಿದಾಗ 9,915 ರೂ. ಕಡಿತವಾಗಿದೆ. ಗಾಬರಿಗೊಂಡ ಮಂಜುನಾಥ್, ಕರೆ ಮಾಡಿ ಪ್ರಶ್ನಿಸಿದಾಗ ತಪ್ಪಾಗಿ ಹಣ ಕಡಿತವಾಗಿ ಆ ಹಣವೂ ವಾಪಸ್ ಬರಲಿದೆ. ಅದಕ್ಕಾಗಿ ಎಟಿಎಂ ಕಾರ್ಡ್ ಮಾಹಿತಿ ಭರ್ತಿ ಮಾಡುವಂತೆ ದಾರಿ ತಪ್ಪಿಸಿದ್ದಾರೆ. ಅದರಂತೆ ಡೆಬಿಟ್ ಕಾರ್ಡ್ ನಂಬರ್ ತುಂಬಿದಾಗ ಹಂತ ಹಂತವಾಗಿ 29,745 ರೂ. ಕಡಿತವಾಗಿತ್ತು. ಮತ್ತೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ, ಮೊಬೈಲ್ ಆಫ್ ಆಗಿತ್ತು. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಪಿಎಲ್ ಟಿಕೆಟ್ ಕೇಳಿದವನಿಗೆ 2.94 ಲಕ್ಷ ರೂ. ವಂಚನೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಎಸ್​ಕೆ- ಆರ್​ಸಿಬಿ ನಡುವಿನ ಪಂದ್ಯಕ್ಕೆ ಆನ್​ಲೈನ್​ನಲ್ಲಿ ಟಿಕೆಟ್ ಖರೀದಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ 2.94 ಲಕ್ಷ ರೂ. ಸೈಬರ್ ಕಳ್ಳರು ವಂಚಿಸಿದ್ದಾರೆ. ಸುಧಾಮನಗರದ ಆರ್. ಶಶಾಂಕ್ ಮೋಸಕ್ಕೆ ಒಳಗಾದವರು. ಮೇ 11ರಂದು ಇನ್​ಸ್ಟಾಗ್ರಾಮ್ಲ್ಲಿ ಸಿಎಸ್​ಕೆ- ಆರ್​ಸಿಬಿ ನಡುವಿನ ಪಂಡ್ಯಕ್ಕೆ ಟಿಕೆಟ್ ಲಭ್ಯ ಇರುವುದಾಗಿ ಜಾಹೀರಾತನ್ನು ಶಶಾಂಕ್ ನೋಡಿ ಆನ್​ಲೈನ್​ನಲ್ಲಿಯೇ ಸಂಪರ್ಕ ಮಾಡಿದ್ದರು. ಅಪರಿಚಿತ ವ್ಯಕ್ತಿ, ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಕಳುಹಿಸಿ ಬ್ಯಾಂಕ್ ಖಾತೆಗೆ 3 ಟಿಕೆಟ್​ಗೆ 7,900 ರೂ. ಸಂದಾಯ ಮಾಡುವಂತೆ ಸೂಚಿಸಿದ್ದ. ನಿಜ ಇರಬೇಕೆಂದು ಶಶಾಂಕ್, ಹಣ ವರ್ಗಾವಣೆ ಮಾಡಿದಾಗ ಟಿಕೆಟ್ ಕೊಟ್ಟಿಲ್ಲ. ಇದನ್ನು ಪ್ರಶ್ನೆ ಮಾಡಿದಾಗ ಹಣ ರಿಫಂಡ್ ಮಾಡುವುದಾಗಿ ಹೇಳಿ ಹಂತ ಹಂತವಾಗಿ 2.94 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ಬಗ್ಗೆ ಶಶಾಂಕ್ ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

ಆರ್​ಸಿಬಿ ಗೆಲುವಿಗೆ ಅಲ್ಲಿಂದಲೇ ಶುಭಕೋರಿದ ವಿಜಯ್​​ ಮಲ್ಯ! ದಯವಿಟ್ಟು ಫೈನಲ್​ಗಾದ್ರೂ ಭಾರತಕ್ಕೆ ಬನ್ನಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
