ಬಾಗಲಕೋಟೆ:ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕೈ ಟಿಕೆಟ್ ಘೋಷಣೆಯಾದ ದಿನದಿಂದಲೂ ಕಾಂಗ್ರೆಸ್​ನಲ್ಲಿ ಅಪಸ್ವರ ಕೇಳಿಬರುತ್ತಿದೆ. ಟಿಕೆಟ್ ವಂಚಿತ ವೀಣಾ ಕಾಶಪ್ಪನವರ್​ ಅಸಮಾಧಾನ ಇಂದಿಗೂ ಶಮನವಾಗದೆ ಇರುವುದು ಒಂದೆಡೆಯಾದರೆ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಅಖಾಡದಲ್ಲಿ ಕಣಕ್ಕಿಳಿಯುವುದು ಪಕ್ಕಾ ಎಂಬುದು ಮತ್ತೊಂದೆಡೆ. ವೀಣಾ ಕೊನೆಗೊಳ್ಳದ ಬೇಸರಕ್ಕೆ ಭಾರೀ ಸಿಟ್ಟಾದ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಇದೀಗ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ಪಕ್ಷೇತರ ಸ್ಪರ್ಧೆಗೆ ವಿನಯ್ ಒಲವು ಲೋಕ ಕಣಕ್ಕಿಳಿವ ಕುತೂಹಲಕ್ಕೆ ಶೀಘ್ರ ತೆರೆ   ಕಾಂಗ್ರೆಸ್‌ನ ಅಹಿಂದ ಮತ ಬುಟ್ಟಿಗೆ ಅಪಾಯ?
ಮುಧೋಳ ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ತಿಮ್ಮಾಪುರ, ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಹಾಗೂ ಅವರ ತಂದೆ ಸಚಿವ ಶಿವಾನಂದ ಪಾಟೀಲ ಬಗ್ಗೆ ವೀಣಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಷಯ ವೀಣಾಗೆ ನೆನಪಿರಲಿ. ಕಳೆದ ಸಲ ವೀಣಾ ಚುನಾವಣೆ ಬಗ್ಗೆ ಸಚಿವ ಶಿವಾನಂದ ಪಾಟೀಲ ಓಡಾಡಿದ್ದಾರೆ. ಶಿವಾನಂದರು ಸಂಯುಕ್ತಾ ಸಲುವಾಗಿ ಅಷ್ಟು ಓಡಾಡುತ್ತಿದ್ದರೋ ಇಲ್ವೊ ಗೊತ್ತಿಲ್ಲ. ಆದ್ರೆ ವೀಣಾಗೆ ಟಿಕೆಟ್ ಕೊಟ್ಟಾಗ ರಾತ್ರಿ ಎರಡು ಗಂಟೆಗೆ ನನ್ನ ಮನೆ ಬಾಗಿಲಿಗೆ ಬಂದಿದ್ದರು.
ವೀಣಾ ಬರ್ತಾಳೋ, ಇಲ್ಲವೋ? ಏನಾದ್ರೂ ತೊಂದರೆ ಇದೆಯಾ? ಎಲೆಕ್ಷನ್ ಖರ್ಚಿಗೆ ತೊಂದರೆ ಇದ್ಯಾ? ಏನಾದ್ರು ಮಾಡಿ ಗೆಲ್ಲಿಸೋಣ ಅಂದಿದ್ದರು. ಪುತ್ರಿ ಸಂಯುಕ್ತಾ ಮೇಲೆ ಎಷ್ಟು ಪ್ರೀತಿ ಇದೆಯೋ ಅದರ ದುಪ್ಪಟ್ಟು ಪ್ರೀತಿ ವೀಣಾ ಕಾಶಪ್ಪನವರ ಮೇಲಿತ್ತು. ಇನ್ನೊಬ್ಬರ ಸಲುವಾಗಿ ಓಡಾಡಿದ ಶಿವಾನಂದ ಪಾಟೀಲ, ಅವರ ಮಗಳಿಗೆ ಟಿಕೆಟ್ ಕೇಳೋದ್ರಲ್ಲಿ ತಪ್ಪೇನಿದೆ? ಸಂಯುಕ್ತಾ ಏನೂ ಧಿಡೀರ್ ಅಂತ ಬಂದಿಲ್ಲ ಎಂದರು.
ಇದನ್ನೂ ಓದಿ:ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸಂಸದೆ ಸುಮಲತಾ​: ಎಚ್​ಡಿಕೆಗೆ ಬೆಂಬಲ ಘೋಷಣೆ
ವಿದ್ಯಾರ್ಥಿ ಲೈಫ್​ನಿಂದ ಮದುವೆ ಆದ ಮೇಲೇನೂ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ಸಂಯುಕ್ತಾ ದಿಢೀರನೇ ಬಂದು ಟಿಕೆಟ್ ಪಡೆದಿದ್ದಾಳೆ ಎಂದು ಆರೋಪಿಸುವ ವೀಣಾಗೆ ಇದು ಗಮನದಲ್ಲಿರಲಿ ಎಂದ ತಿಮ್ಮಾಪುರ ನೇರವಾಗಿ ವೀಣಾ ಕಾಶಪ್ಪನವರ್​ಗೆ ಟಾಂಗ್ ಕೊಟ್ಟಿದ್ದಾರೆ.
2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
