ಹುಬ್ಬಳ್ಳಿ:ವಿಶ್ವಕ್ಕೆ ಮಾರಕವಾಗಿರುವ ಕರೊನಾ ಸೋಂಕಿನಿಂದ ಜೈನ ಮುನಿಗಳನ್ನು ರಕ್ಷಿಸಲು ಹಾಗೂ ಜಗತ್ತಿಗೆ ಆಯುರ್ವೆದದ ಮಹತ್ವ ತಿಳಿಸುವ ಉದ್ದೇಶದಿಂದ ಅ.3ರಂದು ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ‘ಶ್ರಮಣ ಸುರಕ್ಷಾ’ ಎಂಬ ವೆಬಿನಾರ್ ಅನ್ನು ಜ್ಯೂಮ್ ಆಪ್ ಮೂಲಕ ಆಯೋಜಿಸಲಾಗಿದೆ.
ಹುಬ್ಬಳ್ಳಿ ತಾಲೂಕು ವರೂರು ಬಳಿಯ ನವಗ್ರಹ ತೀರ್ಥದ ಎ.ಜಿ.ಎಂ. ಆಯುರ್ವೆದಿಕ್ ಮೆಡಿಕಲ್ ಕಾಲೇಜು ಆಯೋಜಿಸಿರುವ ಈ ವೆಬಿನಾರ್​ನಲ್ಲಿ ಯೋಗ ಗುರು ಬಾಬಾ ರಾಮದೇವ ಇತರ ಪ್ರಮುಖರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ. ದೇಶಾದ್ಯಂತ ನೂರಾರು ಜೈನ ಮುನಿಗಳು, ಆಚಾರ್ಯ ಸಂಘಗಳು, ಆಯುರ್ವೆದ ವೈದ್ಯರು ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವರೂರು ನವಗ್ರಹ ತೀರ್ಥದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಜೈನ ಮುನಿಗಳನ್ನು ಕರೋನಾ ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಆಯುರ್ವೆದ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ದೇಶದಾದ್ಯಂತ ಪರ್ಯಟನೆ ಮಾಡುವ ಜೈನ ಮುನಿಗಳು, ಸಾಧು-ಸಂತರಿಗೂ ಕರೊನಾ ಆತಂಕ ತಪ್ಪಿಲ್ಲ. ಸಾಮಾನ್ಯ ಜನರಿಗೆ ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಾಗಿ ಗುಣವಾಗುತ್ತಾರೆ. ಜೈನ ಮುನಿಗಳು ಆಸ್ಪತ್ರೆಗೆ ದಾಖಲಾಗುವುದಿಲ್ಲ. ಆಲೋಪಥಿ ಔಷಧ, ಮಾತ್ರೆಯನ್ನೂ ಸೇವಿಸುವುದಿಲ್ಲ. ಸಾಧು-ಸಂತರು ಕರೊನಾ ವೈರಾಣುವಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು, ಯಾವ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು, ಆಯುರ್ವೆದದ ಯಾವ ಔಷಧ ಸೇವಿಸಬೇಕು ಎಂಬ ಹಲವಾರು ಮಾಹಿತಿಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ರ್ಚಚಿಸಲಾಗುತ್ತದೆ. ವಿವಿಧ ರಾಜ್ಯಗಳ ಪ್ರಮುಖ ಆಯುರ್ವೆದ ವೈದ್ಯರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡಲಿದ್ದಾರೆ ಎಂದು ಮಹಾರಾಜರು ವಿವರಿಸಿದರು. ಪಾರಸ್ ಚಾನಲ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಇದೆ ಎಂದರು.
ಇದನ್ನೂ ಓದಿ:ದೋಹಾ-ಕತಾರ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಗಾಂಧಿ ಜಯಂತಿ..
2 ಸಾವಿರ ಸ್ವಾಮೀಜಿಗಳು ಭಾಗಿ: ಹರಿದ್ವಾರದ ಬಾಲಕೃಷ್ಣಜಿ, ಹಾಸನ ಎಸ್​ಡಿಎಂ ಕಾಲೇಜಿನ ಡಾ. ಪ್ರಸನ್ನ ರಾವ್, ಕೇರಳದ ಡಾ. ಸ್ವಾಮಿ ಶಂಕರಾಅಮೃತಾನಂದಪುರಿ, ವೈದ್ಯ ಅರುಣ ಚಾಬಡಾ, ನೀತಾ ಮಹೇಶ್ವರ, ಆಯುಷ್ ಫೌಂಡೇಷನ್ ಅಧ್ಯಕ್ಷ ಅಶೋಕ ವಾಘಮರಾ, ಕರ್ನಾಟಕ ಪತಂಜಲಿ ಯೋಗ ಸಮಿತಿಯ ಭವರಲಾಲ್ ಆರ್ಯ ಸೇರಿ ದೇಶದಾದ್ಯಂತ ಅನೇಕ ಗಣ್ಯರು ಪಾಲ್ಗೊಳ್ಳುವರು. ಆಚಾರ್ಯ ವೀರಸಾಗರ ಮಹಾರಾಜರು, ಆಚಾರ್ಯ ವೈರಾಗ್ಯನಂದಿ ಸ್ವಾಮೀಜಿ, ಆಚಾರ್ಯ ಸುನೀಲ ಸಾಗರ, ಆಚಾರ್ಯ ಅನೈಕಾನಂತ, ಆಚಾರ್ಯ ಗುಪ್ತಿನಂದಿ, ಆಚಾರ್ಯ ಕುಶಾಗ್ರನಂದಿ, ಆಚಾರ್ಯ ವಿಶುದ್ಧಿಸಾಗರ ಮಹಾರಾಜರು ಸೇರಿ ಸುಮಾರು 2 ಸಾವಿರ ಸ್ವಾಮೀಜಿಗಳು, 100ಕ್ಕೂ ಹೆಚ್ಚು ಆಚಾರ್ಯ ಸಂಘಗಳು, ತ್ಯಾಗಿಗಳು, ಬ್ರಹ್ಮಚಾರಿಗಳು ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಯಾರ್ಯಾರು?
ಕೇಂದ್ರ ಆಯುಷ್ ಸಚಿವ ಶ್ರೀಪಾದ ಯಶೋ ನಾಯಕ, ಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ ಕೊಟೇಚಾ ಕಾರ್ಯಕ್ರಮ ಉದ್ಘಾಟಿಸುವರು. ಆಚಾರ್ಯ ದೇವನಂದಿ ಮಹಾರಾಜರು ಮಾರ್ಗದರ್ಶನ ಹಾಗೂ ಆಚಾರ್ಯ ಗಣಾಧಿಪತಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ಆಶೀರ್ವಚನ ನೀಡುವರು. ಯೋಗಾಸನ, ವನಸ್ಪತಿ ಔಷಧ ಬಗ್ಗೆ ಬಾಬಾ ರಾಮದೇವ ಮಾಹಿತಿ ನೀಡುವರು.
ಲಿಂಕ್ : https://us02web.zoomus/j/, ಮೀಟಿಂಗ್ ಐಡಿ : 6054484342., ಪಾಸ್​ವರ್ಡ್ : 1008. ಸಮಯ : ಶನಿವಾರ ಮಧ್ಯಾಹ್ನ 2 ಗಂಟೆಯಿಂದ
ಜೈನ ಮುನಿಗಳು, ತ್ಯಾಗಿಗಳನ್ನು ಕರೊನಾ ಸೋಂಕಿನಿಂದ ರಕ್ಷಿಸುವ ಕುರಿತು ಕಾರ್ಯಕ್ರಮದಲ್ಲಿ ಚಿಂತನೆ ನಡೆಯಲಿದೆ. ದೇಶಾದ್ಯಂತ ಹಲವಾರು ತಜ್ಞ ಆಯುರ್ವೆದ ವೈದ್ಯರು ಪಾಲ್ಗೊಳ್ಳಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ.
| ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ವರೂರು ನವಗ್ರಹ ತೀರ್ಥ
ಎರಡು ಸಾವಿರ ಕಿ.ಮೀ. ಪಾದಯಾತ್ರೆ ಹೊರಟ ಜೆ.ಎಚ್​. ಪಟೇಲ್​ರ ಪುತ್ರ ಮಹಿಮಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
