ಬೆಂಗಳೂರು:ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಗಣನೀಯ ಪ್ರಗತಿ ಸಾಧಿಸಿದ್ದು, 2021ರ ಏಪ್ರಿಲ್​ನಿಂದ 2022 ಮಾರ್ಚ್ ಅಂತ್ಯದವರೆಗೆ 85 ಸಾವಿರ ಕೋಟಿ ರೂ.ನಷ್ಟು ಸಂಗ್ರಹಿಸಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
ಮಹಾರಾಷ್ಟ್ರ ಮತ್ತು ಗುಜರಾತ್ ಮೊದಲ ಎರಡು ಸ್ಥಾನದಲ್ಲಿವೆ. ಕರೊನಾ ಎರಡನೇ ಅಲೆಯ ಹೊಡೆತದಿಂದ ಹಂತಹಂತವಾಗಿ ಚೇತರಿಸಿಕೊಂಡ ರಾಜ್ಯವು 2021ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಕಂಡಿದೆ.
ದೇಶದ ಜಿಎಸ್​ಟಿ ಸಂಗ್ರಹದಲ್ಲಿ 2022ರ ಮಾರ್ಚ್​ನಲ್ಲಿ ಸಾರ್ವಕಾಲಿಕ ದಾಖಲೆ ಸಂಗ್ರಹವಾಗಿದೆ. ತಿಂಗಳೊಂದರಲ್ಲಿ 1.42 ಲಕ್ಷ ಕೋಟಿ ರೂ. ಸಂಗ್ರಹವಾಗಿರುವುದು ದಾಖಲೆಯಾಗಿದೆ. ಇದರಲ್ಲಿ ಕರ್ನಾಟಕದ ಪಾಲು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಅಭಿಪ್ರಾಯವೂ ಅಧಿಕಾರಿಗಳಲ್ಲಿದೆ. 2022ರ ಫೆಬ್ರವರಿಗೆ (9176 ಕೋಟಿ ರೂ.) ಹೋಲಿಸಿದರೆ ಮಾರ್ಚ್​ನಲ್ಲಿ ಜಿಎಸ್ಟಿ ಸಂಗ್ರಹ ಕಡಿಮೆಯಾಗಿದೆ. ಒಟ್ಟಾರೆ 2021-22ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ 5.70 ಲಕ್ಷ ಕೋಟಿ ಸಂಗ್ರಹವಾಗಿದೆ. ಅತೀ ಹೆಚ್ಚು ಸಂಗ್ರಹವಾಗಿರುವುದು ಮಹಾರಾಷ್ಟ್ರದ್ದಾಗಿದೆ.
2021ರಲ್ಲಿ ಏಪ್ರಿಲ್- ಮೇನಲ್ಲಿ ಕರೊನಾ ಹಾಗೂ ಲಾಕ್​ಡೌನ್ ಕಾರಣಕ್ಕೆ ಜಿಎಸ್ಟಿ ಸಂಗ್ರಹದ ಮೇಲೆ ಗಾಢ ಪರಿಣಾಮ ಬೀರಿತ್ತು. ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆಯಾಗಿ ರಫ್ತು ಹೆಚ್ಚಾಗುತ್ತಿದ್ದಂತೆ ಜಿಎಸ್ಟಿ ಕೂಡ ಗಣನೀಯವಾಗಿ ವೃದ್ಧಿಯಾಗಿರುವುದು ಕಾಣಿಸಿತು.
ಅಧಿಕಾರಿಗಳು ವಿವರಿಸುವಂತೆ ಕೋವಿಡ್ ಆತಂಕ ಇಲ್ಲದಿದ್ದರೆ ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಪ್ರಗತಿ ಸಾಧ್ಯವಿತ್ತು, ಆದರೂ ನಿಧಾನವಾಗಿ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಕಾಣಿಸಿರುವ ಪ್ರತಿಬಿಂಬವೇ ಈ ಅಂಕಿ ಸಂಖ್ಯೆ ಎಂದು ವಿವರಿಸಿದರು.
ಜನವರಿಯಲ್ಲಿ ದೇಶದ ಜಿಎಸ್ಟಿ ಸಂಗ್ರಹ 1,40,986 ಕೋಟಿ ರೂ. ಆಗಿತ್ತು. ಮಾರ್ಚ್​ನಲ್ಲಿ 1,42,095 ಕೋಟಿ ರೂ. ತಲುಪಿದೆ. ಈ ಬೆಳವಣಿಗೆಯು ಸಮಾಧಾನ ತರುವ ಸಂಗತಿ ಎಂದು ವಿವರಿಸುವ ಅವರು, ಜಿಎಸ್ಟಿ ವಂಚನೆ ಪ್ರಕರಣಕ್ಕೆ ಕಡಿವಾಣ ಹಾಕುವುದು ಹಾಗೂ ಜಿಎಸ್ಟಿ ವ್ಯಾಪ್ತಿಯಿಂದ ಹೊರಗುಳಿದ ದೊಡ್ಡ ಸಮುದಾಯ ಸೇರ್ಪಡೆಯಾದರೆ ದೇಶದ ತೆರಿಗೆ ಸಂಗ್ರಹ ಇನ್ನಷ್ಟು ಸಮೃದ್ಧವಾಗಲಿದೆ ಎಂದು ತಿಳಿಸಿದರು.
ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
