–ಟೈಂ ಪಾಸ್ ಮಾಡಲು ಟಿವಿ ನೋಡೋದು.. ಇದರ ಪ್ರಪಂಚ..!
ಅಮೆರಿಕಾ:ಕೋಳಿಯ ಜೀವಿತಾವಧಿಯು ಸಾಮಾನ್ಯವಾಗಿ ಐದು ಮತ್ತು ಹತ್ತು ವರ್ಷಗಳವರೆಗೆ ಇರುತ್ತದೆ. ಕೆಲವೊಮ್ಮೆ ಕೋಳಿಯ ಜೀವಿತಾವಧಿಯು ಅದರ ತಳಿ, ಇತರ ಕೆಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅಮೆರಿಕದ ಕೋಳಿಯೊಂದು ಅತಿ ಹೆಚ್ಚು ಕಾಲ ಬದುಕಿದ ಗಿನ್ನಿಸ್ ದಾಖಲೆ ಮಾಡಿದೆ. ಬನ್ನಿ ವಿಶ್ವದಾಖಲೆ ಬರೆದ ಕೋಳಿಯ ಕುರಿತಾಗಿ ನಾವು ಇಂದು ನಿಮಗೆ ಹೇಳುತ್ತೇವೆ.
ಅಮೆರಿಕದ ಮಿಚಿಗನ್‌ನ ದಂಪತಿ, ಕೋಳಿ ಸೇರಿದಂತೆ ಹಲವು ಪ್ರಾಣಿಗಳನ್ನು ತಮ್ಮ ಜಮೀನಿನಲ್ಲಿ ಸಾಕುತ್ತಿದ್ದಾರೆ. ಈ ಪೈಕಿ ಪೀನಟ್ ಎಂಬ ಹೆಸರಿನ ಕೋಳಿ ವಿಶ್ವದ ಅತ್ಯಂತ ಹಳೆಯ ಕೋಳಿ ಎಂಬ ಗಿನ್ನೆಸ್ ದಾಖಲೆಯನ್ನು ಹೊಂದಿದೆ.
ವರದಿಗಳ ಪ್ರಕಾರ, ಕೋಳಿಯ ಮಾಲೀಕ ಮಾರ್ಸಿ ಪಾರ್ಕರ್ ಡಾರ್ವಿನ್ ಸಂದರ್ಶನವೊಂದರಲ್ಲಿ ಮಾತನಾಡಿ, “ಸಾಮಾನ್ಯವಾಗಿ ಕೋಳಿಗಳು ಐದರಿಂದ ಎಂಟು ವರ್ಷ ಬದುಕುತ್ತದೆ. ಆದರೆ ಈ ಕೋಳಿ ಸುಮಾರು 20 ವರ್ಷ 272 ದಿನಗಳ ನಂತರವೂ ಜೀವಂತವಾಗಿತ್ತು. ಈ ಕೋಳ ಬುದ್ಧಿವಂತ ಚಿಕ್ಕ ಕೋಳಿಯಾಗಿದೆ. ಪ್ರತಿದಿನ ಮೊಸರು ನೀಡಲಾಗುತ್ತಿತ್ತು ಎಂದಿದ್ದಾರೆ.
ಈ ಕೋಳಿಯ ಜನ್ಮ ಕಥೆಯೂ ದುರಂತವಾಗಿದೆ. ಯಾಕೆಂದರೆ.. ಮೊಟ್ಟೆ ಇಟ್ಟು ಮರಿಯಾಗುವ ಮುನ್ನ ಅದರ ತಾಯಿ ಹೊರಟು ಹೋಗಿತ್ತು. ಮೊಟ್ಟೆ ಕೊಳೆತಿರಬಹುದು ಎಂದುಕೊಂಡು ಅದನ್ನು ಎಸೆಯಲು ನಿರ್ಧರಿದ್ದೇವು. ಅಷ್ಟರಲ್ಲಿ ಮೊಟ್ಟೆಯ ಒಳಗಿನಿಂದ ಸದ್ದು ಕೇಳಿಸಿತು. ಹೀಗಾಗಿ ಮೊಟ್ಟೆಯ ಚಿಪ್ಪನ್ನು ಸ್ವಲ್ಪ ಸ್ವಲ್ಪವಾಗಿ ಸುಲಿದು ಮರಿಯನ್ನು ಕೈಯಲ್ಲಿ ಹಿಡಿದು ತಕ್ಷಣ ತಾಯಿ ಕೋಳಿಯ ಬಳಿ ಬಿಟ್ಟಿದ್ದೇವು. ಆದರೆ ತಾಯಿ ಕೋಳಿ ತನ್ನ ಮರಿಯನ್ನು ಸ್ವೀಕರಿಸಲಿಲ್ಲ. ಹೀಗಾಗಿ ಈ ಮರಿಯನ್ನು ನಾವೇ ಸಾಕಲು ನಿರ್ಧರಿಸಿ ಅದಕ್ಕೆ ಪೀನಟ್ ಎಂದು ನಾಮಕರಣ ಮಾಡಿದ್ದೇವೆ. ಇದು ತುಂಬಾ ಚಿಕ್ಕದಾಗಿತ್ತು ಹೀಗಾಗಿ ಈ ಹೆಸರನ್ನು ನೀಡಲಾಗಿದೆ ಎಂದಿದ್ದಾರೆ.
A post shared by Guinness World Records (@guinnessworldrecords)
ಈ 21 ವರ್ಷ ವಯಸ್ಸಿನ ಈ ಕೋಳಿ ಬೆಕ್ಕುಗಳು ಮತ್ತು ನಾಯಿಗಳಂತಹ ಇತರ ಪ್ರಾಣಿಗಳೊಂದಿಗೆ ಕೋಣೆಗಳಲ್ಲಿ ವಾಸಿಸುತ್ತಿತ್ತು. ಇತರ ಪ್ರಾಣಿಗಳೊಂದಿಗೆ ಇರಲು ಇಷ್ಟಪಡುತ್ತಿತ್ತು. ಕೆಲವೊಮ್ಮೆ ಮನೆಯೊಳಗೆ ಬಂದು ಟಿವಿ ನೋಡುವ ಅಭ್ಯಾಸ ಕೂಡಾ ಕೋಳಿಗೆ ಇತ್ತು. ಈ ಕೋಳಿಯನ್ನು ಈ ಹಿಂದೆ ಅತ್ಯಂತ ಹಳೆಯ ಕೋಳಿ ಎಂದು ಗುರುತಿಸಲಾಗಿತ್ತು. ಈ ಕೋಳಿ 2011 ರಲ್ಲಿ ಪ್ರಾಣ ಬಿಟ್ಟಿದೆ. ಈ ಕೋಳಿ 21 ವರ್ಷ ಬದುಕಿತ್ತು. ಹೀಗಾಗಿ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಸ್ವಿಗ್ಗಿ, ಜೊಮ್ಯಾಟೋ ಬದಲಿಗೆ ಅಮ್ಮಂದಿರು ಮಾಡಿದ ಅಡುಗೆಯನ್ನೇ ಮಕ್ಕಳು ತಿನ್ನಲಿ ಎಂದು ಸಲಹೆ ನೀಡಿದ ಕೇರಳ ಹೈಕೋರ್ಟ್!


Sign in to your account
Please enter an answer in digits:2 + one =
Remember me
