ಬೆಂಗಳೂರು: ಕಾನ್​ಸ್ಟೆಬಲ್ ಹುದ್ದೆಗೆ ಮರಳಲು ಮನವಿ ಮಾಡಿದ ಪ್ರೊಬೆಷನರಿ ಪಿಎಸ್​ಐಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ. ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯ ಎಸ್​ಐ ವಿ. ರಮೇಶ್ ಹೆಡ್ ಕಾನ್ಸ್​ಟೆಬಲ್​ ಹುದ್ದೆಗೆ ವಾಪಸ್ ಆಗಿದ್ದಾರೆ.
ಮುಂಬಡ್ತಿ ಪಡೆದು ಮೈಸೂರಿನಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 2017ರಲ್ಲಿ ಸಿವಿಲ್ ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದರು. 2017ರ ಡಿಸೆಂಬರ್​ನಿಂದ ಬನಶಂಕರಿ ಸಂಚಾರ ಠಾಣೆಯಲ್ಲಿ ಪ್ರೊಬೆಷನರಿ ಅವಧಿ ಆರಂಭಿಸಿದರು. ಪ್ರಸ್ತುತ ಎಸ್.ಜೆ. ಪಾರ್ಕ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ:ಬೆಂಗಳೂರಿಗರ ಗಮನಕ್ಕೆ- ಜುಲೈನಿಂದ ತ್ಯಾಜ್ಯ ನಿರ್ವಹಣಾ ಕರ ಜಾರಿ
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮೈಸೂರು ನಗರ ಹೆಡ್​ಕಾನ್​ಸ್ಟೆಬಲ್​ ಹುದ್ದೆಗೆ ವಾಪಸ್ ಕಳುಹಿಸುವಂತೆ ಆಯುಕ್ತರಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್​ರನ್ನು ಎಸ್​ಐ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆಯುಕ್ತರು ಕಳುಹಿಸಿದ್ದಾರೆ.
ಸಿಇಟಿ, ನೀಟ್ ಆಕಾಂಕ್ಷಿಗಳ ಗಮನಕ್ಕೆ – ದಯಾನಂದ ಸಾಗರ್ ವಿವಿಯಲ್ಲಿ ಇಂದಿನಿಂದ ಉಚಿತ ಆನ್​ಲೈನ್ ಕೋಚಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
