ಗದಗ:ಜಗತ್ತಿಗೆ ಬಂದೊದಗಿದ ಮಹಾಮಾರಿ ಕರೊನಾ ವೈರಸ್​ಗೆ ಇನ್ನೂ ಔಷಧಿಯಾಗಲೀ, ಲಸಿಕೆಯಾಗಲೀ ಕಂಡು ಸಿಕ್ಕಿಲ್ಲ. ಅದೆಷ್ಟೋ ಯೂನಿವರ್ಸಿಟಿಗಳ ಸಂಶೋಧಕರು, ಔಷಧ ತಯಾರಿಕಾ ಕಂಪನಿಗಳು ಕರೊನಾ ವಿರುದ್ಧ ಹೋರಾಡುವ ಲಸಿಕೆ, ಔಷಧಿ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ. ಕೆಲವು ಕಡೆ ಕಂಡು ಹಿಡಿದಿದ್ದರೂ ಅವಿನ್ನೂ ಕ್ಲಿನಿಕಲ್​ ಪ್ರಯೋಗದ ಹಂತದಲ್ಲಿ ಇದೆ.
ಇದನ್ನೂ ಓದಿ:36 ತಾಸು ಕರೊನಾ ಕರ್ಫ್ಯೂ: ಇಂದು ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಬಂದ್
ಔಷಧಿ, ಲಸಿಕೆಗಳನ್ನು ಪ್ರಾಣಿಗಳ ಮೇಲೆ ಸುಲಭವಾಗಿ ಪ್ರಯೋಗ ಮಾಡಬಹುದು. ಆದರೆ ಮನುಷ್ಯರ ಮೇಲಿನ ಪ್ರಯೋಗಕ್ಕೆ ಸ್ವ ಇಚ್ಛೆಯಿಂದ ಮುಂದೆ ಬರುವವರು ತೀರಾ ವಿರಳ.ಹೀಗಿರುವಾಗ ಗದಗದ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಈ ಯುವಕ, ಕರೊನಾ ಔಷಧಕ್ಕೆ ದೇಹವನ್ನು ಒಡ್ಡಿಕೊಳ್ಳಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ವೀರೇಶ ಸುರೇಶ ಕುರವತ್ತಿ ಎಂಬ ಯುವಕ, ಕರೊನಾಕ್ಕೆ ಔಷಧಿ ಕಂಡು ಹಿಡಿಯುವಾಗ ಯಾರದ್ದಾದರೂ ದೇಹದ ಅವಶ್ಯಕತೆ ಬಿದ್ದರೆ ಹೇಳಿ, ನಾನು ಸಿದ್ಧನಿದ್ದೇನೆ ಎಂದು ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ಹಾಗೇ, ತಮ್ಮ ಬಯೋಡೇಟಾವನ್ನೂ ಕಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಕೊವಿಡ್​-19 ಸೋಂಕಿನ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇಫ್​ ಅಲ್ವೇ ಅಲ್ಲ…!
ಕರೊನಾ ಮಾರಿಯಿಂದ ದೇಶ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿ ಭಾರತೀಯನೂ ತಮ್ಮ ಕೈಲಾದ ಸೇವೆ ಮಾಡಬೇಕು. ಹಾಗೇ ನಾನೂ ಸಿದ್ಧನಿದ್ದೇನೆ. ಕರೊನಾಕ್ಕೆ ಔಷಧಿ ಕಂಡು ಹಿಡಿಯುವಾಗ ಯಾವ ಕ್ಷಣದಲ್ಲಿ ಅವಶ್ಯಕತೆ ಇದ್ದರೂ ನನ್ನ ದೇಹವನ್ನು ಉಪಯೋಗಿಸಿಕೊಳ್ಳಿ. ನಾನು ದೇಹ ದಾನ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
