ಬೆಂಗಳೂರು:ಕಳೆದ ವರ್ಷ ಜೂನ್​ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಈಗ 28 ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಹತಾಶ ನಡೆ, ದ್ವೇಷ, ಅಸೂಯೆ ರಾಜಕಾರಣ ಕಾಂಗ್ರೆಸ್​ನ ಹುಟ್ಟುಗುಣ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಇದನ್ನೂ ಓದಿ:ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಕೇಸ್: 5 ಬೇಡಿಕೆಗಳನ್ನು ಮುಂದಿಟ್ಟ ಪ್ರತಿಭಟನಾ ನಿರತ ವೈದ್ಯರು
“ಸಿದ್ದರಾಮಯ್ಯನವರೇ, ಎನ್​ಡಿಎ ಮೈತ್ರಿಕೂಟದ ಮೈಸೂರು ಚಲೋ ಪಾದಯಾತ್ರೆ ತಮ್ಮ ನಿದ್ದೆಗೆಡಿಸಿದೆ ಅಂತ ಗೊತ್ತಿದೆ. ಆದರೂ ತಮ್ಮಂತಹ ಹಿರಿಯ ನಾಯಕರು ಈ ರೀತಿ ಹತಾಶರಾಗಿ ವಿಪಕ್ಷ ನಾಯಕರ ಮೇಲೆ ಯಾವುದೋ ಹಳೆಯ ಕೇಸು ಕೆದಕಿ, ಏಕಾಏಕಿ ಎಫ್ಐಆರ್ ದಾಖಲಿಸುತ್ತೀರಿ ಅಂದರೆ ಯಾಕೋ ತಾವು ಬಹಳ ವಿಚಲಿತರಾದಂತೆ ಕಾಣುತ್ತದೆ. ವಾಲ್ಮೀಕಿ ಅಭಿವೃದ್ದಿ ನಿಗಮ ಮತ್ತು ಮುಡಾ ಹಗರಣಗಳಲ್ಲಿ ತಮ್ಮ ತಪ್ಪೇನು ಇಲ್ಲ ಎನ್ನುವುದಾದರೆ ಇಷ್ಟೊಂದು ಭಯವೇಕೆ? ಕೇಸು ಹಾಕಿ ವಿಪಕ್ಷ ನಾಯಕರನ್ನು ಬೆದರಿಸಿ ಬಾಯಿ ಮುಚ್ಚಿಸಬಹುದು ಎಂದು ಕೊಂಡಿದ್ದೀರಾ?” ಎಂದು ಪ್ರಶ್ನಿಸಿದರು.
“ನೀವು ಹಾದಿಬೀದಿಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತೀರಲ್ಲ, ಪ್ರತಿಭಟನೆ ಮಾಡಿದ್ದಕ್ಕೆ ವಿಪಕ್ಷ ನಾಯಕರ ಮೇಲೆ ಕೇಸು ಹಾಕುವುದು ಯಾವ ಸೀಮೆ ಪ್ರಜಾಪ್ರಭುತ್ವ? ಎಂತಹ ಸಂವಿಧಾನ ಪಾಲನೆ? ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿ ಬಿಜೆಪಿ ನಾಯಕರ ತಂಟೆಗೆ ಬಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ, ಹುಷಾರ್” ಎಂದು ಸಿಎಂಗೆ ಎಚ್ಚರಿಕೆ ರವಾನಿಸಿದ್ದಾರೆ.
ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಕೇಸ್: 5 ಬೇಡಿಕೆಗಳನ್ನು ಮುಂದಿಟ್ಟ ಪ್ರತಿಭಟನಾ ನಿರತ ವೈದ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fifteen =
Remember me
