ಬೆಂಗಳೂರು:ಭಾರತದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಲಸಿಕಾ ಅಭಿಯಾನ ಈಗಾಗಲೇ ಒಂದು ವರ್ಷ ಪೂರೈಸಿದ್ದು, ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವಾರದ ಹಿಂದೆ ದೇಶದಲ್ಲಿ ಕರ್ನಾಟಕ ಮಾಡಿದಂಥ ಸಾಧನೆಯನ್ನೇ ಇದೀಗ ರಾಜ್ಯದಲ್ಲಿ ಈ ಜಿಲ್ಲೆ ಮಾಡಿದೆ.
ಕರೊನಾ ಮೊದಲ ಲಸಿಕೆ ನೀಡಿಕೆ ವಿಚಾರದಲ್ಲಿ ಕರ್ನಾಟಕ ಕಳೆದ ವಾರವೇ ದಾಖಲೆ ಬರೆದಿತ್ತು. ಅಂದರೆ ಜ.23ರ ಬೆಳಗ್ಗೆ 9.30ರ ವರೆಗಿನ ಲಸಿಕೀಕರಣ ಅಂಕಿ-ಅಂಶ ಪ್ರಕಾರ ಸರಿಯಾಗಿ 1 ವರ್ಷ 7 ದಿನಗಳಲ್ಲಿ ರಾಜ್ಯ ಫಸ್ಟ್ ಡೋಸ್ ಲಸಿಕೆ ವಿಚಾರದಲ್ಲಿ ಶೇ. 100 ಸಾಧನೆ ಮಾಡಿತ್ತು.ಈಗ ಎರಡನೇ ಡೋಸ್​ ಲಸಿಕೆ ವಿಚಾರದಲ್ಲಿ ಶೇ. 100 ಸಾಧನೆ ಮಾಡಿದ ರಾಜ್ಯದ ಪ್ರಥಮ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರ ಹೊರಹೊಮ್ಮಿದೆ. ರಾಜ್ಯದ 11 ಜಿಲ್ಲೆಗಳು ಎರಡನೇ ಡೋಸ್​ನಲ್ಲಿ ಶೇ. 90 ಸಾಧನೆ ಮಾಡಿ ಮುಂಚೂಣಿಯಲ್ಲಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 100 ಗುರಿ ಸಾಧಿಸಿದೆ. ಇನ್ನು ಎರಡನೇ ಡೋಸ್ ಲಸಿಕೀಕರಣದಲ್ಲಿ ರಾಜ್ಯದ ಒಟ್ಟಾರೆ ಪ್ರಗತಿ ಸದ್ಯ ಶೇ. 88 ಇದೆ.


ಕರ್ನಾಟಕ ಈ ವಿಷಯದಲ್ಲೀಗ ದೇಶದಲ್ಲೇ ಪ್ರಥಮ: ಇದಕ್ಕಾಗಿ ತಗುಲಿದ ದಿನಗಳೆಷ್ಟು ಗೊತ್ತೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 17 =
Remember me
