ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆ ನೂತನ ಮೇಯರ್ ಅಗಿ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.
ಚುನಾವಣೆಗೆ ಹಾಜರಾದ 65 ಸದಸ್ಯರಲ್ಲಿ 33 ಮತ ಬಿಜೆಪಿ ಪಾಲಾಗಿದ್ದು, ಇದೇ ಮೊದಲ ಬಾರಿಗೆ ಯಾರ ಬೆಂಬಲವೂ ಇಲ್ಲದೆ, ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಪಡೆದಿದೆ. ಜೆಡಿಎಸ್ ಬೆಂಬಲ ಸಿಕ್ಕರೂ 32 ಮತ ಗಳಿಸುವ ಮೂಲಕ ಕೇವಲ ಒಂದು ಮತದಿಂದ ಕಾಂಗ್ರೆಸ್​ ಸೋಲ ಅನುಭವಿಸಿದೆ.
ಇದನ್ನೂ ಓದಿ:ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು; ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ 75,000 ರೂ. ದಂಡ
2010ರಲ್ಲಿ ಅಂದಿನ ಶಾಸಕ ಚಂದ್ರಶೇಖರ ಪಾಟೀಲ್ ರೇವೂರ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ಮೇಯರ್ ಗಾದಿ ಏರಿತ್ತು. ಚಹಾ ಮಾರುವ ಮಹಿಳೆ ಸುನಂದಾ ಮೊದಲ ಬಾರಿಗೆ ಕೇಸರಿ ಪಕ್ಷದಿಂದ ಅಧಿಕಾರಕ್ಕೆರಿದ್ದರು. ಆಗ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. 12 ವರ್ಷಗಳ ನಂತರ ಮತ್ತೆ ಸ್ವಂತ ಶಕ್ತಿಯ ಮೇಲೆ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ.(ದಿಗ್ವಿಜಯ ನ್ಯೂಸ್​)
ಕೆ.ಹೆಚ್.ಮುನಿಯಪ್ಪಗೆ ಟಿಕೆಟ್ ಘೋಷಣೆ ಸಾಧ್ಯತೆ ಹಿನ್ನೆಲೆ; ಕಾಂಗ್ರೆಸ್​ನಿಂದ ಸಾಮೂಹಿಕ ರಾಜೀನಾಮೆ ಪರ್ವ

ಇದು ವಿಶ್ವದ ಅತಿದೊಡ್ಡ ಬಾಳೆಹಣ್ಣು! ಇದರ ಒಟ್ಟು ತೂಕ ಎಷ್ಟು ಅಂತ ಗೊತ್ತಾದ್ರೆ ಹುಬ್ಬೇರೋದು ಖಚಿತ

ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್; ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ.. ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
