ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಖಾಸಗಿ ಸಾರಿಗೆ ವಾಹನಗಳ ಸಂಘಟನೆಗಳವರು ಸೋಮವಾರ ಬೆಂಗಳೂರು ಬಂದ್ ನಡೆಸಿದ್ದರು. ಪರಿಣಾಮವಾಗಿ ಬಹಳಷ್ಟು ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನಸಂಚಾರಕ್ಕೆ ತೊಂದರೆ ಆಗಿತ್ತು. ಇದರ ಬಿಸಿ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿತ್ತು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದಿದ್ದ ಅವರು ಕ್ಯಾಬ್ ಸಿಗದ ಕಾರಣ ಬಿಎಂಟಿಸಿ ಬಸ್​ನಲ್ಲೇ ಪ್ರಯಾಣಿಸಿದ್ದರು. ಈ ಕುರಿತು ಸೆಲ್ಫಿಯನ್ನು ಅವರು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ಎಕ್ಸ್ ಪೋಸ್ಟ್ ಗಮನ ಸೆಳೆದಿದ್ದು, ನಿಮ್ಮ ಹೆಸರಿನ ಸರ್ಕಲ್​ನಲ್ಲಿ ಇಳಿಯಲು ಟಿಕೆಟ್​ ಕೇಳುವಾಗ ಕಂಡಕ್ಟರ್​​ಗೆ ಏನೆಂದು ಹೇಳುತ್ತೀರಿ ಎಂದು ಕೆಲವರು ತಮಾಷೆ ಕೂಡ ಮಾಡಿದ್ದರು.
ಆದರೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಈ ಪ್ರಕರಣವನ್ನು ಇನ್ನೊಂದು ಆಯಾಮದಲ್ಲಿ ನೋಡಿದ್ದಾರೆ ಹಾಗೂ ಅನಿಲ್​ ಕುಂಬ್ಳೆ ಪೋಸ್ಟ್​ ಕೋಟ್ ರಿ-ಪೋಸ್ಟ್ ಮಾಡಿ ನಗರದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ‘ಎಲ್ಲಿ ಶ್ರೀಮಂತರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೋ ಅದು ಅತ್ಯಾಧುನಿಕ ನಗರ’ ಎಂಬ ಕೊಲಂಬಿಯಾದ ರಾಜಕಾರಣಿ ಎನ್​ರಿಕ್​ ಪೆನಲೊಸ ಅವರ ಕೋಟ್​ ಮೂಲಕ ದಯಾನಂದ ಅವರು ಅನಿಲ್​ ಕುಂಬ್ಳೆ ಪೋಸ್ಟ್ ರಿಪೋಸ್ಟ್ ಮಾಡಿಕೊಂಡಿದ್ದಾರೆ. ಆ ಮೂಲಕ ನಗರದಲ್ಲಿನ ಶ್ರೀಮಂತರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಹೆಚ್ಚು ಬಳಸಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
Enrique Peñalosa: “An Advanced City Is One Where the Rich Take Public Transport”https://t.co/08OjeCI1cX
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr)September 13, 2023

ಸಿಸಿಬಿ ಪೊಲೀಸರು, ನ್ಯಾಯಾಧೀಶರ ಮುಂದೆಯೂ ಕಣ್ಣೀರಿಟ್ಟ ಚೈತ್ರಾ ಕುಂದಾಪುರ ಹೇಳಿದ್ದೇನು?

ಪಿಒಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ; ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 5 =
Remember me
