ಬೆಂಗಳೂರು:ಇತ್ತೀಚೆಗೆ ತನ್ನ ಮಾಜಿ ಲವರ್​ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ತ್ರಿಕೋನ ಪ್ರೇಮ ಕಥೆಯ ನಾಯಕಿ ದುರಂತ ಅಂತ್ಯ ಕಂಡಿದ್ದಾಳೆ.
ಗೆಳೆಯರಿಬ್ಬರನ್ನೂ ಪ್ರೀತಿಸಿದ್ದ ಕಾಲೇಜು ಕನ್ಯೆ ಐದು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಮಾಜಿ ಮತ್ತು ಹಾಲಿ ಪ್ರಿಯಕರರಿಬ್ಬರೂ ಕಂಬಿ ಎಣಿಸುವಂತಾಗಿದೆ. ಅಷ್ಟಕ್ಕೂ ಈ ದುರಂತ ಹೇಗಾಯ್ತು ಗೊತ್ತಾ? ಅದರ ಡಿಟೇಲ್ಸ್ ಇಲ್ಲಿದೆ…
ಇದನ್ನೂ ಓದಿರಿಕರೊನಾಗೆ ವಿಶ್ವಾದ್ಯಂತ 2.50 ಲಕ್ಷ ಬಲಿ; ಭಾರತದಲ್ಲಿ ಸಾವಿನ ಸಂಖ್ಯೆ 1500 ಸಮೀಪಕ್ಕೆ
23 ವರ್ಷದ ಮೋನಿಕಾ ಮತ್ತು ಬಬಿತ್​ ಈ ಮೊದಲು ಪ್ರೀತಿಸುತ್ತಿದ್ದರು. ಇವರಿಬ್ಬರ 4 ವರ್ಷದ ಪ್ರೀತಿ ಇತ್ತೀಚೆಗೆ ಬ್ರೇಕ್ ಅಪ್​ ಆಗಿತ್ತು. ಕೆಲ ತಿಂಗಳ ಹಿಂದೆ ಆಕೆ ಬಬಿತ್​ನ ಗೆಳೆಯ ರಾಹುಲ್​ನನ್ನು ಪ್ರೀತಿಸುತ್ತಿದ್ದಳು. ವಿಪರ್ಯಾಸವೆಂದರೆ ಈ ಮೂವರು ಒಂದೇ ಏರಿಯಾದ ನಿವಾಸಿಗಳು ಮತ್ತು ಸ್ನೇಹಿತರು ಕೂಡ.
ಜೂ.7ರಂದು ರಾವುಲ್‌ ಬರ್ತ್ ಡೇ ಇತ್ತೆಂದು ಆತನ ಮನೆಗೆ ಹೋಗಿದ್ದಳು. ಆ ವೇಳೆ ಅಲ್ಲಿಗೆ ಬಂದ ಬಬಿತ್​, ಮೋನಿಕಾ ಜತೆ ಗಲಾಟೆ ಮಾಡಿ ಆಕೆಯನ್ನು ಬೈಕ್‌ನಲ್ಲಿ ಚಿಕ್ಕಬಾಣವಾರದ ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಕಿರಿಕ್​ ಪ್ರೇಯಸಿ ಮೇಲೆ ಬಬಿತ್​ ಹಲ್ಲೆ ಮಾಡಿದ್ದ.
ಇದನ್ನೂ ಓದಿರಿಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!
ಗೋಡೆಗೆ ಮೋನಿಕಾಳ ತಲೆ ಗುದ್ದಿದ್ದ ಬಬಿತ್ ಎಲ್ಮೆಟ್​ನಿಂದಲೂ ಹೊಡೆದಿದ್ದ. ಆಕೆ ಸ್ಥಳದಲ್ಲೇ ನಿತ್ರಾಣಳಾಗಿ ಕುಸಿದು ಬೀಳುತ್ತಿದ್ದಂತೆ ಮೋನಿಕ ತಂದೆ ಕುಮಾರ್‌ಗೆ ಕರೆ ಮಾಡಿದ ಬಬಿತ್, ನಿಮ್ಮ ಮಗಳಿಗೆ ಅಪಘಾತವಾಗಿದೆ. ಕರೆದುಕೊಂಡು ಹೋಗಿ ಎಂದು ಸುಳ್ಳು ಹೇಳಿದ್ದ. ಸ್ಥಳಕ್ಕೆ ಬಂದ ಯುವತಿ ಪಾಲಕರು ಆಕೆಯನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಆಕೆ ಸಾವನ್ನಪ್ಪಿದ್ದಾಳೆ.ಹಲ್ಲೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೋನಿಕಾಳ ಮಾಜಿ ಪ್ರಿಯಕರ ಬಬಿತ್ ಹಾಗೂ ಹಾಲಿ ಪ್ರಿಯಕರ ರಾಹುಲ್ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿರಿಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
