ಕುಣಿಗಲ್​:ಇಲ್ಲೊಬ್ಬ ತಂದೆ ತನ್ನ ಮಗನಿಗೆ ಒಳ್ಳೆ ಹುಡುಗಿ ಹುಡುಕಲು ಹರಸಾಹಸ ಪಡುತ್ತಿದ್ದಾರೆ. ನನಗೆ ವಿದ್ಯಾವಂತೆಯಾದ ಸೊಸೆಯೇ ಬೇಕು ಎನ್ನುವ ತಂದೆ ಎರಡು ಎಕರೆ ಜಮೀನನ್ನೂ ಕೊಡುವುದರಲ್ಲಿ ಇದ್ದಾರೆ.
ಕುಣಿಗಲ್ ತಾಲೂಕಿನ ಹುತ್ತರಿ ಗ್ರಾಮದಲ್ಲಿ ನಡೆದ ವಧು ವರರ ವೇದಿಕೆಗೆ ಬಂದಿದ್ದ ಈ ತಂದೆ ತನ್ನ ಮಗನ ಹೆಂಡತಿಯಾಗಿ ಬರುವ ಹೆಣ್ಣು ಮಗುವಿಗೆ ಎರಡು ಎಕರೆ ಅಡಿಕೆ ತೋಟ ಬರೆದು ಕೊಡಲು ಸಿದ್ಧರಾಗಿದ್ದಾರೆ.
ಬಿ ಎಂ ಗ್ರೇಯ ಮಳ್ಳೆಚನ್ನಯ್ಯ ಎನ್ನುವ ಇವರು ಮದುವೆಯ ಖರ್ಚನ್ನು ಸಂಪೂರ್ಣವಾಗಿ ಭರಿಸಲು ಸಿದ್ಧರಾಗಿದ್ದಾರೆ. ಸೊಸೆಯನ್ನು ಮನೆಯ ತಾಯಿಯ ಹಾಗೆ ನೋಡಿಕೊಳ್ಳಲು ಸಿದ್ಧವಾಗಿದ್ದೇನೆ ಎನ್ನುವ ಇವರ ಬೇಡಿಕೆ ಒಂದೇ. ಮನೆಗೆ ಬರುವ ಸೊಸೆ ಒಳ್ಳೆಯವಳಾಗಿದ್ದು ಹಳ್ಳಿಯಲ್ಲೇ ಇರಬೇಕು ಎಂದು. ಈ ಕಾಲದಲ್ಲಿ ಇಂತಹ ಆಫರ್​ ಕೊಡುವ ತಂದೆ ಬಹಳ ವಿರಳ ಎಂದೇ ಹೇಳಬಹುದು.
Sign in to your account
Please enter an answer in digits:nine − two =
Remember me
