|ಕಿರಣ ಹೂಗಾರಅಕ್ಕಿಆಲೂರ
ತಾಯಿ ಎಲ್ಲರ ಪಾಲಿಗೂ ಪೂಜನೀಯ. ಹಾಗಂತ, ಇಲ್ಲೊಂದು ಕುಟುಂಬ ಅಮ್ಮನನ್ನು ಪೂಜಿಸಲು ದೇವಸ್ಥಾನವನ್ನೇ ನಿರ್ವಿುಸಿ ಗಮನ ಸೆಳೆದಿದೆ. ಸೇವಾಲಾಲ (ಬಾಳೂರ) ತಾಂಡಾದಲ್ಲಿ ಮಕ್ಕಳು ತಾಯಿಗಾಗಿ ಚಿಕ್ಕ ದೇವಸ್ಥಾನ ನಿರ್ವಿುಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ‘ವಿಶ್ವ ತಾಯಂದಿರ ದಿನ’ದ ನಿಮಿತ್ತ ಮಕ್ಕಳೆಲ್ಲ ಸೇರಿ ತಾಯಿ ದೇವಸ್ಥಾನದ ಗದ್ದುಗೆಗೆ ಭಾನುವಾರ ಪೂಜೆ ಸಲ್ಲಿಸಿದ್ದಾರೆ. ಬಾಳೂರ ತಾಂಡದ ಹೆಮ್ಮಲವ್ವ ಲಮಾಣಿ 1998ರ ಜೂ. 29ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ನಾಲ್ವರು ಮಕ್ಕಳಾದ ಅಣ್ಣಪ್ಪ, ನೂರಪ್ಪ, ವಿಠ್ಠಪ್ಪ ಹಾಗೂ ಸಾವರೆಪ್ಪ ಲಮಾಣಿ ಸಹೋದರರು ಮನೆ ಪಕ್ಕದಲ್ಲಿ 2010ರ ನ.16 ರಂದು ದೇವಸ್ಥಾನ ನಿರ್ವಿುಸಿ, ಅಲ್ಲಿ ತಾಯಿ ಹೇಮಲವ್ವ ಅವರ ಮೂರೂವರೆ ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪಿಸಿದರು. ಜತೆಗೆ ಅದೇ ದೇವಸ್ಥಾನದಲ್ಲಿ ಹೇಮಲವ್ವರ ಮಾವ ಹೇಮಪ್ಪ(ಪೂಜಾರಿ) ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಈವರೆಗೂ ತಾಯಿಗೆ ಲಮಾಣಿ ಸಹೋದರರು ನಿತ್ಯ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹೇಮಲವ್ವರ ನಾಲ್ಕನೇ ಮಗ ಅಣ್ಣಪ್ಪ ಲಮಾಣಿ ವಿಧಾನಪರಿಷತ್ ಸಚಿವಾಲಯದಲ್ಲಿ ಜಮೇದಾರರಾಗಿದ್ದಾರೆ. ಅಣ್ಣಪ್ಪ ಮತ್ತು ಅವರ ಸಹೋದರರ ಕಾರ್ಯ ಮೆಚ್ಚಿ, ವಿಧಾನಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ ಹಾಗೂ ಯು.ಬಿ.ವೆಂಕಟೇಶ್ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ ಎನ್ನುತ್ತಾರೆ ಅಣ್ಣಪ್ಪ ಲಮಾಣಿ.
ಕಷ್ಟದಲ್ಲೂ ನಮಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆ- ತಾಯಂದಿರ ಸೇವೆ ಸಾಕ್ಷಾತ್ ಪರಮಾತ್ಮನ ಆರಾಧನೆ ಇದ್ದಂತೆ. ಹೀಗಾಗಿ ನಾವು 12 ಲಕ್ಷ ರೂ.ವೆಚ್ಚದಲ್ಲಿ ದೇವಸ್ಥಾನ ನಿರ್ವಿುಸಿ ತಾಯಿಗೆ ನಿತ್ಯ ಪೂಜಿಸುತ್ತಿದ್ದೇವೆ.
|ಅಣ್ಣಪ್ಪ ಲಮಾಣಿತಾಯಿಯ ದೇವಸ್ಥಾನ ನಿರ್ವಿುಸಿರುವ ಪುತ್ರ
ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
