ಶಿವಮೊಗ್ಗ:ಸಾಗರದ ಯುವ ಆಟಗಾರನೊಬ್ಬ ಕೇವಲ 165 ಎಸೆತಗಳಲ್ಲಿ ಬರೋಬ್ಬರಿ 407 ರನ್‌ಗಳನ್ನು ಬಾರಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಸರ್ವಕಾಲಿಕ ದಾಖಲೆ ಸೃಷ್ಟಿ ಮಾಡಿದ್ದಾರೆ. 16 ವರ್ಷದೊಳಗಿನ ಈ ಆಟಗಾರ ಒಂದೇ ಪಂದ್ಯದಲ್ಲಿ 48 ಬೌಂಡರಿ ಮತ್ತು 24 ಸಿಕ್ಸರ್ ಸಿಡಿಸಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾನೆ.
ಸಾಗರ ಕ್ರಿಕೆಟ್ ಕ್ಲಬ್‌ನ ತನ್ಮಯ ಮಂಜುನಾಥ ಈ ವಿಶಿಷ್ಟ ದಾಖಲೆ ಮಾಡಿದ ಆಟಗಾರ. ಶಿವಮೊಗ್ಗ ಹೊರವಲಯದ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಶನಿವಾರ ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) 16 ವರ್ಷದೊಳಗಿನ ಅಂತರ್​ ವಲಯ ಪಂದ್ಯಾವಳಿ ಆಯೋಜಿಸಿತ್ತು. ಈ ಕ್ರೀಡಾಕೂಟದಲ್ಲಿ ತನ್ಮಯ್, ಭದ್ರಾವತಿಯ ಎನ್‌ಟಿಸಿಸಿ ತಂಡ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾನೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಾಗರ ಕ್ರಿಕೆಟ್ ಕ್ಲಬ್ ತಂಡ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 583 ರನ್ ಗಳಿಸಿತ್ತು. ಅದರಲ್ಲಿ ತನ್ಮಯ್‌ನದ್ದೇ ಸಿಂಹಪಾಲು. ಮೊದಲ ವಿಕೆಟ್‌ಗೆ ನಾಯಕ ಎ.ಅಂಶು (127)ಜತೆಗೂಡಿ 350 ರನ್‌ಗಳ ಜತೆಯಾಟ ನಡೆಸಿದರು. ಇದು ಕೂಡ ಮೊದಲ ವಿಕೆಟ್‌ಗೆ ದಾಖಲೆ ಪಟ್ಟಿಗೆ ಸೇರ್ಪಡೆಗೊಂಡಿತು. ತನ್ಮಯ್ ಕೇವಲ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 336 ರನ್ ಕಲೆಹಾಕಿದರು.
ಬೃಹತ್ ಮೊತ್ತ ಬೆನ್ನತ್ತಿದ್ದ ಭದ್ರಾವತಿಯ ಎನ್‌ಟಿಸಿಸಿ ತಂಡ ಕೇವಲ 73 ರನ್‌ಗಳಿಗೆ ಆಲೌಟ್ ಆಗಿದ್ದು 510 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಎ.ಅಂಶು 5 ವಿಕೆಟ್ ಮತ್ತು ಅಜಿತ್ ನಾಲ್ಕು ವಿಕೆಟ್ ಪಡೆದರು.
ಮಹಾಬಲೇಶ್ವರ ದೇವಸ್ಥಾನದ ಹೊರಗೂ ವಸ್ತ್ರ ಸಂಹಿತೆ ಜಾರಿ ಮಾಡಿದ ಮೇಲುಸ್ತುವಾರಿ ಸಮಿತಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + twelve =
Remember me
