ಬಾಗಲಕೋಟೆ:ಇಲ್ಲೊಂದು ದೇವಸ್ಥಾನದಲ್ಲಿ ಜನರು ಸೇವಿಸುವ ಮದ್ಯವನ್ನೇ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ವಿಚಿತ್ರ ಪದ್ಧತಿಯೊಂದು ಪಾಲನೆ ಮಾಡಲಾಗುತ್ತಿದೆ. ಇಂದು ಅಣ್ಣ ಮತ್ತು ನಾಳೆ ತಮ್ಮನ ದೇಗುಲದಲ್ಲಿ ಎಣ್ಣೆಯಿಂದಲೇ ನೈವೇದ್ಯ ನಡೆಯುತ್ತದೆ. ಹೌದು, ಇಲ್ಲಿಗೆ ಬರುವ ಭಕ್ತಾಧಿಗಳಿಗೆ ಇದು ಕೇವಲ ಮದ್ಯವಲ್ಲ ಬದಲಿಗೆ ತೀರ್ಥ ಪ್ರಸಾದ.
ಇದನ್ನೂ ಓದಿ:ಪತಿಯನ್ನು ಕೊಂದವರಿಗೆ ಆಕರ್ಷಕ ಬಹುಮಾನ: ವ್ಯಾಟ್ಸ್ಆ್ಯಪ್ ಸ್ಟೇಟಸ್​ ಹಾಕಿ ಸುಪಾರಿ ಕೊಟ್ಟ ಪತ್ನಿ!
ಈ ದೇವಸ್ಥಾನ ಬಾಗಲಕೋಟೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿದೆ. ಕನಕರಾಯನ ದೇಗುಲಕ್ಕೆ ಭೇಟಿ ನೀಡುವ ನೂರಾರು ಭಕ್ತರು, ತಮ್ಮ ಕಷ್ಟಗಳನ್ನು ಬಗೆಹರಿಸುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಲಿಂಗಾಪುರ ಪಕ್ಕದ ಕೆಲವಡಿ ರಂಗನಾಥನಿಗೂ ಮದ್ಯದ ನೈವೇದ್ಯ ಮಾಡಲಾಗುತ್ತದೆ. ಇದಕ್ಕೆ ಕಾರಣವೂ ಇದೆ.
ಕನಕರಾಯ ಹಾಗೂ ರಂಗನಾಥ ಸಹೋದರರು. ನಾಳೆ (ಏ.1) ಕೆಲವಡಿ ರಂಗನಾಥ ದೇಗುಲದ ಜಾತ್ರೆಯಿದ್ದು, ಜಾತ್ರೆಯ ಹಿಂದಿನ ದಿನ ಕನಕರಾಯನ ದೇವಸ್ಥಾನದಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಕನಕರಾಯ ದೇವರಿಗೆ ಸಾರಾಯಿ ನೈವೇದ್ಯ ಮಾಡಲಾಗುತ್ತದೆ. ಕಂಟ್ರಿ ಸಾರಾಯಿ ಸೇರಿದಂತೆ ವಿವಿಧ ಬ್ರ್ಯಾಂಡ್​ನ ಮದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಇದನ್ನೂ ಓದಿ:100 ಬಾರಿ ರಕ್ತದಾನ ಮಾಡಿದ ಅಭಿನವ ಗಿರಿರಾಜ್‌ಗೆ ಜೇಸಿ ಸಾರ್ಥಕ ಸಾಧನ ಪ್ರಶಸ್ತಿ
ದೇವರಿಗೆ ಮದ್ಯ ಅರ್ಪಿಸಲು ಬರುವ ಭಕ್ತರನ್ನು ಗಮನದಲ್ಲಿಟ್ಟುಕೊಳ್ಳುವ ಕಂಟ್ರಿ ಸಾರಾಯಿ ಮಾರಾಟ ಮಾಡುವ ವ್ಯಾಪಾರಸ್ಥರು, ದೇವಸ್ಥಾನದ ಮುಂದೆ ಸಾಲು ಸಾಲಾಗಿ ಅಂಗಡಿ ತೆರೆದು ಭರ್ಜರಿ ಮಾರಾಟ ಮಾಡುತ್ತಾರೆ. ಸಾರಾಯಿ ನೈವೇದ್ಯ ಮಾಡಿ ಅದನ್ನೇ ತೀರ್ಥ ಎಂದು ಇಲ್ಲಿನ ಭಕ್ತರು ಸೇವಿಸುತ್ತಾರೆ.
ಸಾರಾಯಿ ಹರಕೆ ಪ್ರಕಾರ ನೈವೇದ್ಯ. ಸಾರಾಯಿ ಮಾತ್ರವಲ್ಲದೇ ಭರಪೂರ ಆಹಾರ ಪದಾರ್ಥವೂ ಇಲ್ಲಿ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಖಡಕ್ ರೊಟ್ಟಿ, ಐದು ತರಹದ ಪಲ್ಯ, ಎರಡು ತರಹ ಚಟ್ನಿ ನೈವೇದ್ಯವಾಗಿ ಕೊಡುತ್ತಾರೆ. ಭಕ್ತರು ರಾಶಿರಾಶಿ ಖಡಕ್ ರೊಟ್ಟಿ ತಂದು ಭಕ್ತರಿಗೆ ಪ್ರಸಾದ ಕೊಡ್ತಾರೆ. ದೇವಾಲಯದಲ್ಲಿ ಅನ್ನಪ್ರಸಾದವೂ ಇರುತ್ತದೆ.
ಇದನ್ನೂ ಓದಿ:100 ಬಾರಿ ರಕ್ತದಾನ ಮಾಡಿದ ಅಭಿನವ ಗಿರಿರಾಜ್‌ಗೆ ಜೇಸಿ ಸಾರ್ಥಕ ಸಾಧನ ಪ್ರಶಸ್ತಿ
ಈ ನಡುವೆ ಮದ್ಯದ ನೈವೇದ್ಯ ನೋಡುಗರ ಗಮನ ಸೆಳೆಯುತ್ತಿದ್ದು, ಅನೇಕರು ಭಾರೀ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾಳೆ ಕೆಲವಡಿ ಗ್ರಾಮದ ರಂಗನಾಥ ದೇಗುಲದ ಜಾತ್ರೆಯಿದ್ದು, ಅಲ್ಲಿಯೂ ಸಹ ದೇಗುಲಕ್ಕೆ ಪೂಜೆ ಮಾಡಿಸಲೆಂದು ಅನೇಕ ಭಕ್ತರು ಮದ್ಯದ ಬಾಟಲಿ ಹೊತ್ತು ತರುತ್ತಾರೆ. ಮದ್ಯ ನೈವೇದ್ಯ ಮಾಡಿಸಲೆಂದೇ ಭಕ್ತರು ಹರಕೆ ಹೊತ್ತಿರುತ್ತಾರೆ ಎಂಬುದು ಮತ್ತಷ್ಟು ವಿಶೇಷ. ಎಣ್ಣೆ ಪೂಜೆ ಮಾಡಿಸಿ ಹರಕೆ ತೀರಿಸುವುದು ಇಲ್ಲಿನ ಪದ್ಧತಿ.
ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
