ಬೆಂಗಳೂರು:ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಕೋರ್ಟ್​ ದರ್ಶನ್​ರನ್ನು ಎರಡು ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ, ಪವಿತ್ರಾರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತು. ಇಂದಿಗೆ (ಜೂ.22) ದರ್ಶನ್​ ಎರಡು ದಿನದ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ​ಆದೇಶಕ್ಕಾಗಿ ಇಂದು ಕೋರ್ಟ್​ಗೆ ಹಾಜರುಪಡಿಸಲಾಗುವುದು.
ಇದನ್ನೂ ಓದಿ:ತಾವು ಹೇಳಿಕೊಳ್ಳುವಂತೆ ರಾಜ್ಯದ ಬೊಕ್ಕಸ ಭರ್ತಿಯಾಗಿದ್ದರೆ… ಸಿಎಂಗೆ ವಿಪಕ್ಷ ನಾಯಕ ಸವಾಲು
ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಲ್ಲ ಆರೋಪಿಗಳು ಜೈಲುಪಾಲಾಗುವ ಸಾಧ್ಯತೆ ಇದೆ. ಇದೆಲ್ಲದರ ಮಧ್ಯೆ ಆರೋಪಿ ದರ್ಶನ್​ ಬಗ್ಗೆ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇನ್ನು ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿವೃತ್ತ ಹಿರಿಯ ಪೊಲೀಸ್​ ಅಧಿಕಾರಿ ಸಂಗ್ರಾಮ್ ಸಿಂಗ್, ದರ್ಶನ್​ಗೆ ಮತ್ತು ಇತರೆ ಆರೋಪಿಗಳನ್ನು ನಾರ್ಕೋ ಅನಾಲಿಸಿಸ್​ ಟೆಸ್ಟ್​ಗೆ ಒಳಪಡಿಸಿದರೆ, ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ.
“ನಾರ್ಕೋ ಅನಾಲಿಸಿಸ್​​ಗೆ ಒಳಪಡಿಸಿದ್ರೆ, ಅವರು ಸತ್ಯ ಬಾಯ್ಬಿಡಬಹುದು. ಇದರಲ್ಲಿ ನಾಲ್ಕರಿಂದ ಐದು ರೀತಿಯ ಟೆಸ್ಟ್​ಗಳಿವೆ. ಇದನ್ನು ಹಿರಿಯ ವೈದ್ಯರು ಅಥವಾ ಅವರ ಆಸ್ಪತ್ರೆಗಳಲ್ಲಿ ನಡೆಸುತ್ತಾರೆ. ಈ ಕೇಸ್​ನಲ್ಲಿ ದರ್ಶನ್​ ಸದ್ಯ ಕಸ್ಟಡಿಯಲ್ಲಿದ್ದಾರೆ. ಒಂದು ಇಂಜೆಕ್ಷನ್ ಕೊಟ್ಟರೆ, ಅದರಲ್ಲಿ ದೊಡ್ಡ ಪ್ರಕ್ರಿಯೆಯೇ ಅಡಗಿದೆ. ಈ ಟೆಸ್ಟ್​ ಮಾಡುವ ಮುನ್ನ ವ್ಯಕ್ತಿಯ ದೇಹದಲ್ಲಿ ಬಿಪಿ, ಹಾರ್ಟ್​ಬೀಟ್ ರೇಟ್​​, ಕಿಡ್ನಿ ಇದೆಲ್ಲವನ್ನು ಪರೀಕ್ಷಿಸಿ, ನಂತರ ಎಷ್ಟು ಪ್ರಮಾಣದಲ್ಲಿ ಕೊಡಬಹುದು ಎಂದು ನಿರ್ಧರಿಸುತ್ತಾರೆ” ಎಂದು ‘ವಿಜಯವಾಣಿ’ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಗಾಯಕಿ ಶ್ರೇಯಾ ಘೋಷಾಲ್ ಪತಿ ಯಾರು ಗೊತ್ತಾ? ದೊಡ್ಡ ಸಂಸ್ಥೆಯೊಂದರ ಮುಖ್ಯಸ್ಥ..
“ಇದನ್ನು ಕೊಟ್ಟ ಬಳಿಕ ಆ ವ್ಯಕ್ತಿ ಏನೇನೋ ಮಾತನಾಡಲು ಪ್ರಾರಂಭಿಸುತ್ತಾರೆ. ಆಗ ಏನಾಗುತ್ತದೆ ಎಂದರೆ…” ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 12 =
Remember me
