ಬಾಗಲಕೋಟೆ:ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದ್ದು, ರಾಜ್ಯದಲ್ಲಿ ಆಪರೇಶನ್ ಹಸ್ತ ಆಗಲ್ಲ, ಆಪರೇಶನ್ ಕಮಲ ಆಗುತ್ತದೆ ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಮಹಿಳೆಯೊಬ್ಬರ ಗರ್ಭದಲ್ಲಿದ್ದ 10  ಕೆ.ಜಿ.ತೂಕದ ಕ್ಯಾನ್ಸರ್ ಗಡ್ಡೆ ತೆಗೆದ ವೈಧ್ಯರು
ಲೋಕಸಭೆ ಚುನಾವಣೆ ಕುರಿತು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ಮಾತನಾಡಿದ ಮುರುಗೇಶ್​ ನಿರಾಣಿ, “ಕಾಂಗ್ರೆಸ್ಸಿಗರ ಹೇಳಿಕೆ ನೋಡಿದ್ರೆ ಈ ಸರ್ಕಾರ ಯಾವುದೇ ಸಮಯದಲ್ಲಿ ಹೋಗಬಹುದು. ಪಾರ್ಲಿಮೆಂಟ್ ಚುನಾವಣೆ ಒಳಗಾಗಿ ಬಹಳಷ್ಟು ಬದಲಾವಣೆಯಾಗುತ್ತದೆ. ರಾಜ್ಯದಲ್ಕಿ ಐದು ವರ್ಷ ಸರ್ಕಾರ ಇರಬೇಕು ಎನ್ನುವುದು ಬಿಜೆಪಿ ಇಚ್ಛೆ” ಎಂದು ಹೇಳಿದರು.
“ಆದರೆ, ಕಾಂಗ್ರೆಸ್ಸಿಗರ ಹೇಳಿಕೆಗಳು ನೋಡಿದರೆ. ಐವರು ಡಿಸಿಎಂ ಅಂತಾರೆ, ಇಬ್ಬರು ಸಿಎಂ ಅಂತಾರೆ. ಹೀಗಾಗಿ ಯಾವುದೇ ಸಮಯದಲ್ಲಿ ಸರ್ಕಾರ ಪತನವಾಗಬಹುದು. ಪಾರ್ಲಿಮೆಂಟ್ ಚುನಾವಣೆಗೂ ಮುನ್ನವೇ ಬಹಳಷ್ಟು ಬದಲಾವಣೆಯಾಗುತ್ತದೆ. ಬದಲಾವಣೆ ಕಾಯ್ದು ನೋಡಿ, ಸಮಯ ಬಂದಾಗ ನಾನು ಹೇಳ್ತೇನೆ. ಮಹಾರಾಷ್ಟ್ರ ಮಾದರಿಯೋ ಅಥವಾ ಬೇರೆಯೋ ಏನು ಅಂತ” ಎಂದು ಹೇಳಿದರು.
ಇದನ್ನೂ ಓದಿ:ರಾಜಸ್ಥಾನ ವಿಧಾನಸಭೆ ಚುನಾವಣೆ: ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ವಸುಂಧರಾ ರಾಜೆ ಸೇರಿದಂತೆ 54 ಅಭ್ಯರ್ಥಿಗಳಿಗೆ ಟಿಕೆಟ್
“ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದ ಶಕ್ತಿ ಇದೀಗ ಶೇ. 10 ರಷ್ಟು ಅವರಲ್ಲಿ ಉಳಿದಿಲ್ಲ. ಇದನ್ನು ಸ್ವತಃ ಅವರ ಪಕ್ಷದ ಶಾಸಕರು, ಸಚಿವರೇ ಹೇಳ್ತಿದ್ದಾರೆ. ಅವರಿಗೆ ರಾಜಕೀಯ ಮರಜೀವ ಕೊಟ್ಟ ಬಾದಾಮಿ ಕೆಲಸ ತಗೊಂಡು ಹೋದರೆ, ನೀವೇಕೆ ಬರ್ತಿರಿ ಅಂತಿದ್ದಾರೆ. ಬಾದಾಮಿಯನ್ನು ಅವರು ಎಂದಿಗೂ ಮರೆಯಬಾರದು. ಆದರೆ, ಸಿದ್ದರಾಮಯ್ಯ ಆ ಕೆಲಸ ಮಾಡುತ್ತಿಲ್ಲ” ಎಂದರು.
ಮೊದಲಿನಂತೆ ಸಿದ್ದರಾಮಯ್ಯ ಚಾರ್ಮ್ ಏಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಿರಾಣಿ, “ಅವರಿಗೆ ಪಕ್ಷದಲ್ಲಿ ಇರುವ ಒತ್ತಡ ಇರಬಹುದು. ಗ್ಯಾರಂಟಿಗಳಿಗೆ ದುಡ್ಡು ಹೊಂದಿಸಲು ಆಗುತ್ತಿಲ್ಲ ಎಂಬ ವಿಷಯವಿರಬಹುದು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗ್ತಿಲ್ಲ ಎನ್ನುವ ನೋವು ಇರುವಂತದ್ದು ಅಥವಾ ವಯಸ್ಸಿನ‌ ಕಾರಣವೂ ಇರಬಹುದು” ಎಂದು ಹೇಳಿದರು.
ತನ್ನ ಭುಜದ ಮೇಲೆ ಮೊಸಳೆಯನ್ನು ಹೊತ್ತೊಯ್ದ ಭೂಪ; ಬಾಹುಬಲಿ ಇವನು ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 10 =
Remember me
