ಬೆಂಗಳೂರು:ಇದೊಂದು ‘ಬೆಡ್​​ರೂಮ್​’ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡುತ್ತಿದೆ, ಸುದ್ದಿಯೂ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಈ ಬೆಡ್​ರೂಮ್​ ಬೆಂಗಳೂರಿನಲ್ಲಿ ಇರುವುದಾದರೂ ಎಲ್ಲಿ? ಜನರು ಇದರ ಬಗ್ಗೆ ಮಾತನಾಡುತ್ತಿರುವುದಾದರೂ ಯಾಕೆ? ಎಂದು ಅಚ್ಚರಿ ಆಗಿದ್ದರೆ, ಅದಕ್ಕಿಲ್ಲಿದೆ ಉತ್ತರ.
ಸೋಷಿಯಲ್ ಮೀಡಿಯಾ ರೆಡ್ಡಿಟ್​​ನಲ್ಲಿ ಸೈಯಾ ಎಂಬ ಯೂಸರ್ ಈ ಬೆಡ್​ರೂಮ್​ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಅದೀಗ ವೈರಲ್ ಆಗಲಾರಂಭಿಸಿದೆ. “A room for a bed is a bedroom…” ಎಂಬ ಕ್ಯಾಪ್ಷನ್​ನೊಂದಿಗೆ ಈ ಬೆಡ್​ರೂಮ್ ಫೋಟೋ ಹಾಗೂ ಮಾಹಿತಿ ರೆಡ್ಡಿಟ್​​ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!
ಬೆಂಗಳೂರಿನ ಮಹದೇವಪುರದಲ್ಲಿ ಇರುವ ಈ ಬೆಡ್​ರೂಮ್ ಸುದ್ದಿ ಆಗುತ್ತಿರುವುದು ಇಲ್ಲಿನ ಸ್ಥಳಾವಕಾಶ ಮತ್ತು ಬಾಡಿಗೆ ವಿಚಾರಕ್ಕೆ. ಬಾಡಿಗೆಗೆ ಸಂಬಂಧಿಸಿದ ವೆಬ್​ಸೈಟ್​ವೊಂದರಲ್ಲಿ ಫ್ಲ್ಯಾಟ್ ವಿಚಾರ ನಮೂದಾಗಿದೆ.
A room for bed is a bedroom. WTF Bangalore : )byu/_saiya_inindia
50 ಸಾವಿರ ರೂ. ಅಡ್ವಾನ್ಸ್ ಮತ್ತು 12 ಸಾವಿರ ರೂ. ಬಾಡಿಗೆ ಎಂದು ಉಲ್ಲೇಖಿಸಲಾಗಿರುವ ಒಂದು ರೂಮ್​, ಕಿಚನ್ ಮತ್ತು ಬಾತ್​ರೂಮ್​ನ​ ಈ ಫ್ಲ್ಯಾಟ್​​ನಲ್ಲಿನ ರೂಮ್​ ಬಗ್ಗೆಯೇ ರೆಡ್ಡಿಟ್ ಯೂಸರ್​ಗೆ ಅಚ್ಚರಿ ಅನಿಸಿದ್ದು. ಈ ರೂಮ್​ನಲ್ಲಿ ಒಂದು ಬೆಡ್​ ಇಡುವಷ್ಟು ಜಾಗ ಬಿಟ್ಟರೆ ಬೇರೆ ಜಾಗ ಇಲ್ಲ. ಒಂದು ಬೆಡ್​ಗಷ್ಟೇ ಇರುವ ಈ ರೂಮೇ ಬೆಡ್​ರೂಮ್​ ಅಂತ ಆ ಯೂಸರ್​ ವಿಡಂಬನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಇದನ್ನು ನಿಜವಾದ ಬೆಡ್​​ರೂಮ್​ ಎಂದರೂ ತಪ್ಪೇನಲ್ಲ.
ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 17 =
Remember me
