ಬೆಂಗಳೂರು:ಮಹಾಮಾರಿ ಕರೊನಾ ರೋಗಿಗಳಿಗೆ ಥೈಮೋಸಿನ್ ಆಲ್ಫಾ 1 ಹಾಗೂ ಇಮ್ಯುನೋಸಿನ್ ಆಲ್ಫಾ 1 ಚಿಕಿತ್ಸಾ ವಿಧಾನ ಆಶಾದಾಯಕವಾಗಿದೆ ಎಂದು ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಐಸಿಯು ಆರೈಕೆ ವಿಭಾಗದ ಮುಖ್ಯಸ್ಥ ಹಾಗೂ ಸಲಹಾ ತಜ್ಞ ಡಾ.ಆರ್.ರವಿ ಕುಮಾರ್ ತಿಳಿಸಿದ್ದಾರೆ.
ಇಮ್ಯುನೋಸಿನ್ ಆಲ್ಫಾ 1 ಎಂಬ ಔಷಧ ರೋಗಿಗಳ ಪ್ರತಿರೋಧ ವ್ಯವಸ್ಥೆ ಮಾರ್ಪಡಿಸಲು ಶಕ್ತವಾಗಿದೆ. ದೇಶಾದ್ಯಂತ ಹಲವು ರೋಗಿಗಳಿಗೆ ಇದು ನೆರವಾಗಿದೆ. ದೇಶಾದ್ಯಂತ ತೀವ್ರ ನಿಗಾ ಚಿಕಿತ್ಸಾ ತಜ್ಞರು ಈ ಔಷಧವನ್ನು ಕರೊನಾ ರೋಗಿಗಳಿಗೆ ನೀಡಲು ಸಲಹೆ ನೀಡಿದ್ದಾರೆ ಎಂದರು.
ಕರೊನಾ ರೋಗ ಲಕ್ಷಣಗಳ ಅನುಸಾರವಾಗಿ ವೈದ್ಯರು ಇಮ್ಯುನೋಸಿನ್ ಆಲ್ಫಾ 1 ಚಿಕಿತ್ಸೆ ನೀಡಲಿದ್ದಾರೆ. ಈ ಚಿಕಿತ್ಸೆ ಅವಧಿ 7 ದಿನ. ಯಾವುದೇ ಅಡ್ಡ ಪರಿಣಾಮ ಉಂಟಾಗದೆ ಬೇಗನೆ ರೋಗಿಗಳು ವಾಸಿಯಾಗಲಿದ್ದಾರೆ. ಮಧುಮೇಹ, ಬಿಪಿ, ಮೂತ್ರಪಿಂಡ ಸೇರಿ ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಹಿರಿಯ ವಯಸ್ಸಿನ ರೋಗಿಗಳಿಗೆ ಕರೊನಾ ಚಿಕಿತ್ಸೆಯಲ್ಲಿ ಇಮ್ಯುನೊಸಿನ್ ಆಲ್ಫಾ 1 ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಥೈಮೋಸಿನ್ ಆಲ್ಫಾ 1 ಔಷಧವನ್ನು ಏಡ್ಸ್ ಮತ್ತು ಸಾರ್ಸ್‌ನಂಥ ಮಾರಾಣಾಂತಿಕ ರೋಗಳಿಗೆ ಬಳಸಲಾಗುತ್ತದೆ. ಇದೀಗ ಕರೊನಾ ವೈರಸ್‌ಗೆ ಉಪಯೋಗಿಸಲಾಗುತ್ತಿದೆ. ಥೈಮೋಸಿನ್ ಆಲ್ಫಾ 1 ಔಷಧಿಯು ಕರೊನಾ ಚಿಕಿತ್ಸೆಯಲ್ಲಿ ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಯಾಗಿದೆ ಎಂದು ಈಗಾಗಲೇ ಹಲವು ಸಂಶೋಧನಾ ಸಂಸ್ಥೆಗಳು ನಡೆಸಿದ್ದ ಅಧ್ಯಯನಗಳಿಂದ ತಿಳಿದುಬಂದಿದೆ ಎಂದು ಡಾ.ರವಿಕುಮಾರ್ ತಿಳಿಸಿದರು. ಕರೊನಾ ಬಗ್ಗೆ ಭಯಪಡೆದ ಜನರು ಎಚ್ಚರಿಕೆವಹಿಸಬೇಕು. ಕಡ್ಡಾಯವಾಗಿ ವ್ಯಕ್ತಿಗತ ಅಂತರ, ಸ್ವಚ್ಛತೆ ಹಾಗೂ ಮಾಸ್ಕ್ ಧರಿಸಬೇಕು. ಕರೊನಾ ಲಕ್ಷಣ ಇದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
