|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಕರೊನಾ ಕಾರಣಕ್ಕೆ ಲಾಕ್​ಡೌನ್ ಹೇರಿದ ರಾಜ್ಯ ಸರ್ಕಾರ, ವಿವಿಧ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಆದರೆ, ಕೆಲವು ವರ್ಗಗಳನ್ನು ಕಡೆಗಣಿಸಿರುವುದರ ಬಿಸಿ ಈಗ ಬಿಜೆಪಿಗೆ ತಟ್ಟಲಾರಂಭಿಸಿದೆ. ಪಕ್ಷದ ಶಾಸಕರು ಮತ್ತು ಮುಖಂಡರು ಹೋದಲ್ಲಿ ಬಂದಲ್ಲಿ, ನಮಗೆಲ್ಲಿ ಪ್ಯಾಕೇಜ್ ಎಂದು ಕೇಳಲಾರಂಭಿಸಿದ್ದಾರೆ. ನೆರವು ನಿರೀಕ್ಷೆಯಲ್ಲಿದ್ದ, ಸಂಕಷ್ಟ ವ್ಯಾಪ್ತಿಯಲ್ಲಿ ಬರುವ ಹೋಟೆಲ್ ಕಾರ್ವಿುಕರು, ಮ್ಯಾಕ್ಸಿಕ್ಯಾಬ್- ಪ್ರವಾಸಿ ವಾಹನ ಮಾಲೀಕರು, ಮೆಕ್ಯಾನಿಕ್​ಗಳು, ಕ್ಯಾಟರಿಂಗ್ ಹಾಗೂ ಅಡುಗೆ ಕೆಲಸದವರು, ಫ್ಲವರ್ ಡೆಕೋರೇಟರ್ಸ್, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದವರು ಎರಡು ಬಾರಿ ಪ್ಯಾಕೇಜ್ ಘೋಷಿಸಿದರೂ ಸರ್ಕಾರದ ಕಣ್ಣಿಗೆ ಮಾತ್ರ ಬೀಳದಾದರು. ಹೀಗಾಗಿ ಇವರೆಲ್ಲ ಸರ್ಕಾರದ ವಿರುದ್ಧ ಬೇಸರ ಹೊರಹಾಕಲು ಆರಂಭಿಸಿದ್ದಾರೆ. ನಾವು ಸಂಕಷ್ಟದಲ್ಲಿದ್ದೇವೆ, ನಮ್ಮನ್ನು ಪರಿಗಣಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ 16-18 ವರ್ಗದವರನ್ನು ಪ್ಯಾಕೇಜ್​ನಲ್ಲಿ ಪರಿಗಣಿಸಿದ ಸರ್ಕಾರ, ನಮ್ಮನ್ನು ಕಣ್ಣೆತ್ತಿಯೂ ನೋಡಿಲ್ಲ ಎಂಬುದು ಹೋಟೆಲ್ ಕಾರ್ವಿುಕರ ಬೇಸರವಾಗಿದೆ. ಇತ್ತ ಲಾಕ್​ಡೌನ್ ವೇಳೆ ಹೋಟೆಲ್ ತೆರೆದು ಪಾರ್ಸೆಲ್ ವಿತರಣೆಗೆ ಅವಕಾಶ ನೀಡಲಾಗಿದೆ ಎಂದು ಹೋಟೆಲ್ ಕಾರ್ವಿುಕರಿಗೆ ಪರಿಹಾರದ ಅವಕಾಶ ನೀಡಲಾಗಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ. ಆದರೆ, ತಳಮಟ್ಟದ ಪರಿಸ್ಥಿತಿಯನ್ನು ಸರ್ಕಾರ ಗಮನಿಸಿಲ್ಲ ಎಂಬುದು ಹೋಟೆಲ್ ಕಾರ್ವಿುಕರ ಬೇಸರವಾಗಿದೆ. ಶೇ.10 ಹೋಟೆಲ್​ಗಳೂ ತೆರೆದಿಲ್ಲ, ತೆರೆದ ಹೋಟೆಲ್​ಗಳಲ್ಲೂ ಕಾರ್ವಿುಕರಿಗೆ ಕೆಲಸವಿಲ್ಲ. ಅಡುಗೆ ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಕೆಲಸವಿಲ್ಲದೇ ಸಂಬಳವಿಲ್ಲ. ಸರ್ಕಾರ ಈ ವಾಸ್ತವ ಅರಿಯಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
ಅದೇ ರೀತಿ ಅಡುಗೆ ಸಿಬ್ಬಂದಿಗೆ ಕಳೆದೊಂದು ವರ್ಷದಿಂದಲೂ ಕೆಲಸವಿಲ್ಲ. ಕಳೆದ ವರ್ಷದ ಲಾಕ್​ಡೌನ್ ಬಳಿಕ ಸಮಾರಂಭ ಇತಿಮಿತಿಯಲ್ಲಿ ನಡೆದಿದೆ. ಎರಡು ತಿಂಗಳಿನಿಂದಲಂತೂ ಕೆಲಸವೇ ಇಲ್ಲ. ಮುಂದೆ ಹೇಗೋ ಏನೂ ಎಂಬಂತಾಗಿದ್ದು ನಮ್ಮ ಪರಿಸ್ಥಿತಿ ತೀರಾ ಕೆಟ್ಟದಾಗಿದೆ ಎಂದು ಅಡುಗೆ ಕಾರ್ವಿುಕರು, ಕ್ಯಾಟರಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡವರು ಕಳವಳ ಹೊರಹಾಕಿದ್ದಾರೆ.
ಇದೇ ರೀತಿ ಪರಿಸ್ಥಿತಿ ಮ್ಯಾಕ್ಸಿಕ್ಯಾಬ್, ಪ್ರವಾಸಿ ವಾಹನ ಮಾಲೀಕರದ್ದಾಗಿದೆ. ಕಳೆದೊಂದು ವರ್ಷದಿಂದ ವಾಹನಗಳು ಸರಿಯಾಗಿ ರಸ್ತೆಗಿಳಿದಿಲ್ಲ. ವಾಹನ ಖರೀದಿಗೆ ಮಾಡಿದ ಸಾಲದ ಕಂತುಗಳು ಕಟ್ಟುವ ಭಾರವೂ ಇದೆ. ತೆರಿಗೆ ಹೊರೆಯೂ ಕಡಿಮೆ ಮಾಡಿಲ್ಲ ಎಂಬ ಸಿಟ್ಟಿದೆ. ಈ ರೀತಿ ವಿವಿಧ ವರ್ಗದವರು ಸರ್ಕಾರದಿಂದ ನೆರವು ಬಯಸಿ ಸ್ಥಳೀಯ ಶಾಸಕರು, ಬಿಜೆಪಿ ಮುಖಂಡರ ಮೇಲೆ ಒತ್ತಡ ಹೇರಿದ್ದು, ಹೇಗಾದರೂ ಪರಿಹಾರ ಕೊಡಿಸಿ ಎಂದು ದಂಬಾಲು ಬಿದ್ದಿದ್ದಾರೆ.
ಎಷ್ಟು ಜನರಿಗೆ ನೆರವು?:ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ 2 ಹಂತದ ಪ್ಯಾಕೇಜ್ 93ರಿಂದ 94 ಲಕ್ಷ ಜನರಿಗೆ ನೇರವಾಗಿ ತಲುಪಲಿದೆ. ಒಟ್ಟಾರೆ ಪಡಿತರ, ಮಧ್ಯಾಹ್ನದ ಊಟ, ಬಡ್ಡಿ ಮನ್ನಾ, ಹಾಲಿನ ಪುಡಿ ಸೇರಿಕೊಂಡಂತೆ 1,600 ಕೋಟಿ ರೂ.ಗಳನ್ನು ನೆರವಿಗಾಗಿ ಖರ್ಚು ಮಾಡಲಾಗುತ್ತಿದೆ. ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯ ಫಲಾನುಭವಿಗಳಿಂದ ಸೇವಾಸಿಂಧು ಮೂಲಕ ಅರ್ಜಿ ಸ್ವೀಕರಿಸಿ ಹಣ ವಿಲೇವಾರಿ ಮಾಡುವ ಕೆಲಸ ಆರಂಭಿಸಿವೆ.
ಲಾಕ್​ಡೌನ್​ನಿಂದ ಉಂಟಾದ ಹೋಟೆಲ್ ಮತ್ತು ಕ್ಯಾಟರಿಂಗ್ ಬಂಧುಗಳ ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದೇನೆ.
|ಬಿ.ಎಂ.ಸುಕುಮಾರ ಶೆಟ್ಟಿಬೈಂದೂರು ಶಾಸಕರು
ಏ.15ರಿಂದ ವಾಹನ ಸಂಚಾರ ನಿಂತು ಹೋಗಿದೆ. ಸರ್ಕಾರ ಕೇವಲ 1 ತಿಂಗಳ ತೆರಿಗೆ ವಿನಾಯಿತಿ ಕೊಟ್ಟಿದೆ. ಲಾಕ್​ಡೌನ್ ಇಟ್ಟುಕೊಂಡು ಪೂರ್ಣ ತೆರಿಗೆ ವಸೂಲಿ ಮಾಡುವುದು ಎಷ್ಟು ಸರಿ?
|ಕೆ. ರಾಧಾಕೃಷ್ಣ ಹೊಳ್ಳರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seventeen =
Remember me
