|ಜಗನ್ನಾಥ್ ಕಾಳೇನಹಳ್ಳಿತುಮಕೂರು
ಕರೊನಾ ಕಾರಣಕ್ಕೆ ಲಾಕ್​ಡೌನ್ ಹೇರಿದ್ದ ಸಂದರ್ಭ ಮುಳ್ಳಿನಬೇಲಿ ಹಾಕಿ ಹಳ್ಳಿಗಳಿಗೆ ನಿರ್ಬಂಧ ಹೇರಿದ್ದ ಜನರೇ ಈಗ ಹೂವಿನಹಾರ ಹಿಡಿದು ಸ್ವಾಗತಿಸಲು ಸಜ್ಜಾಗಿದ್ದಾರೆ! ಗ್ರಾಮಪಂಚಾಯಿತಿ ಫೈಟ್ ಆಖೈರಾಗಿದ್ದು ಎರಡೂ ಹಂತದ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ಡಿ.22, 27ರಂದು ನಡೆಯಲಿರುವ ಮತದಾನಕ್ಕೆ ಈಗ ಹಳ್ಳಿಗಳಿಂದ ದೂರದೂರುಗಳಲ್ಲಿರುವ ಮತದಾರರಿಗೆ ಎಲ್ಲಿಲ್ಲದ ಡಿಮಾಂಡ್. ರಿಪೋರ್ಟ್ ಇದ್ದರಷ್ಟೇ ಗ್ರಾಮಕ್ಕೆ ಪ್ರವೇಶ: 9 ತಿಂಗಳ ಹಿಂದೆಯಷ್ಟೇ ಕರೊನಾ ಅಟ್ಟಹಾಸಕ್ಕೆ ಹೆದರಿ ಬೆಂಗಳೂರು ಸೇರಿ ಹೊರ ಜಿಲ್ಲೆಗಳಿಂದ ಊರಿಗೆ ಬರುವವರು ಕರೊನಾ ಪರೀಕ್ಷೆ ಮಾಡಿಸಿಕೊಂಡು ವರದಿ ತನ್ನಿ ಅಥವಾ ಊರ ಹೊರಗೆ 14 ದಿನ ಕಳೆದು ಬನ್ನಿ ಅಂತ ನಿರ್ಬಂಧ ಹೇರಿದ್ದ ಜನರೇ ಈಗ ಕಾರುಗಳ ವ್ಯವಸ್ಥೆ, ಸಾರಿಗೆ ವೆಚ್ಚ ಭರಿಸುವ ಭರವಸೆ ನೀಡಿ ಗ್ರಾಮದಲ್ಲಿ ಮತ ಹಕ್ಕು ಹೊಂದಿರುವರನ್ನು ಕರೆಸಿಕೊಳ್ಳಲು ನಿರಂತರ ಸಂಪರ್ಕ ಸಾಧಿಸಿದ್ದಾರೆ. ಹಣ, ಮದ್ಯ, ಗಿಫ್ಟ್​ಗಳ ಆಮಿಷವೊಡ್ಡಿ ಪರಿಚಯಸ್ಥರ ಮತ ಕೈತಪ್ಪಿ ಹೋಗದಂತೆ ಬೆಂಗಳೂರು ಸೇರಿ ದೂರದ ಊರುಗಳಲ್ಲಿರುವವರನ್ನು ಕರೆಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ.
ಕರೊನಾ ಇದ್ದಾಗ ಬೆಂಗಳೂರಿನಲ್ಲಿರೋ ಹುಡುಗರನ್ನು ಊರಿನ ಒಳಗೆ ಬರಬೇಡ ಅಂತ ಹೇಳಿದ್ದ ಜನ ಇವತ್ತು ಫೋನ್ ಮಾಡಿ ಒಂದು ಒಂದು ವೋಟ್ ಹಾಕು ಅಂತ ಹೇಳ್ತಾ ಇದ್ದಾರೆ… ಅನ್ನುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ. ಬಹುತೇಕ ಎಲ್ಲರ ವಾಟ್ಸ್ ಆಪ್ ಸ್ಟೇಟಸ್​ನಲ್ಲೂ ಇದು ರಾರಾಜಿಸುತ್ತಿದೆೆ.
ಕರೊನಾ ಕಾಲದಲ್ಲಿ ಬಹುತೇಕ ಹಳ್ಳಿಗಳಲ್ಲಿ ಬೆಂಗಳೂರು ಸೇರಿ ಹೊರಗಡೆಯಿಂದ ಜನರು ಊರಿಗೆ ಬರದಂತೆ ಮನವಿ ಮಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಗ್ರಾಪಂ ಚುನಾವಣೆ ತಪ್ಪಿಸಿಕೊಳ್ಳದಂತೆ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದಾರೆ.
|ಕಾಳಿಪ್ರಸಾದ್ ಹೊಸ್ಕೆರೆಚಿಕ್ಕನಾಯಕನಹಳ್ಳಿ

ಗ್ರಾಪಂ ಸಿಬ್ಬಂದಿ ಮನೆ ಮನೆ ತಿರುಗಿ ಕರ ಪಾವತಿಸುವಂತೆ ದುಂಬಾಲು ಬಿದ್ದರೂ ಕ್ಯಾರೆ ಎನ್ನದ ವರೀಗ ಚುನಾವಣೆ ಕಣಕ್ಕಿಳಿಯಲು ತಮ್ಮದಷ್ಟೇ ಅಲ್ಲ, ಸೂಚಕರದ್ದೂ ಸೇರಿಸಿ ಬಾಕಿ ಚುಕ್ತಾ ಮಾಡಿದ್ದಾರೆ.
ಚಿತ್ರದುರ್ಗ:ಗ್ರಾಪಂ ಚುನಾವಣೆ ಸಂಬಂಧ ಸ್ತ್ರೀ ಶಕ್ತಿ ಗುಂಪು/ಸಂಘಗಳ ಸದಸ್ಯರ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾದರಿ ನೀತಿ ಸಂಹಿತೆ ನಿರ್ಬಂಧ ವಿಧಿಸಿದೆ. ರಾಜ್ಯದಲ್ಲಿ ಇಲಾಖೆಯ ಸಾವಿರಾರು ಸ್ತ್ರೀಶಕ್ತಿ ಗುಂಪುಗಳಲ್ಲಿ ಲಕ್ಷಾಂತರ ಸದಸ್ಯರಿದ್ದಾರೆ. ಈ ಗುಂಪಿನ ಸದಸ್ಯರು ಇಚ್ಛಿಸಿದರೆ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಸ್ಪರ್ಧಿ ಪರ ಪ್ರಚಾರ ಮಾಡುವಂತಿಲ್ಲ. ನೀತಿ ಸಂಹಿತೆ ಪೂರ್ಣವಾಗುವವರೆಗೆ ಗುಂಪಿನ ಸದಸ್ಯರು ಸಭೆ ಅಥವಾ ಸಮಾರಂಭ ನಡೆಸುವಂತಿಲ್ಲ ಎಂಬಿತ್ಯಾದಿ ನೀತಿ ಸಂಹಿತೆಯನ್ನು ಸದಸ್ಯರ ಗಮನಕ್ಕೆ ತರುವ ಹೊಣೆಯನ್ನು ಗುಂಪಿನ ಪ್ರತಿನಿಧಿ (1 ಮತ್ತು 2) ಗಳ ಮೇಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ನಿರ್ದೇಶನವನ್ನು ಆಧರಿಸಿ ಇಲಾಖೆ ಡಿ.1ರಂದು ಹೊರಡಿಸಿರುವ ಸುತ್ತೋಲೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eighteen =
Remember me
