ಬೆಂಗಳೂರು:ಸದನದಲ್ಲಿ ಇಂದು ಬಿಸಿಬಿಸಿಯ ಚರ್ಚೆಯಾಗಿದ್ದು, ವಾಗ್ದಾಳಿಯು ಕಾವೇರಿ, ಬಿಜೆಪಿಯ ಕೆಲವು ಸದಸ್ಯರು ಅಮಾನತಿಗೆ ಒಳಗಾಗುವಂಥ ಸನ್ನಿವೇಶವೂ ಸೃಷ್ಟಿಯಾಗಿದೆ. ಈ ಎಲ್ಲದರ ನಡುವೆ ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಹೇಳಿಕೆಯೊಂದು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯಲಾರಂಭಿಸಿದೆ.
ಇದನ್ನೂ ಓದಿ:ಸದನದಲ್ಲಿ ಅಸ್ವಸ್ಥಗೊಂಡ ಯತ್ನಾಳ್, ಚಿಕಿತ್ಸೆಗಾಗಿ ದಾಖಲು​; ಆಸ್ಪತ್ರೆಗೆ ಧಾವಿಸಿದ ಪತ್ನಿ-ಪುತ್ರ
ಸರ್ಕಾರ ಬಂದು 50 ದಿನಗಳಷ್ಟೇ ಆಗಿದೆ, ಆರು ತಿಂಗಳು ಕಾಯಿರಿ ಎಂದ ಯು.ಬಿ.ವೆಂಕಟೇಶ್, ಈಗಲೇ ಇದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜನರಿಗೆ ಎಲ್ಲ ಗ್ಯಾರಂಟಿ ಕೊಡುತ್ತೇವೆ ಎಂದು ಭರವಸೆ ನೀಡಿದ ಅವರು, ಇದಕ್ಕೆ ವಿರೋಧ ವ್ಯಕ್ತಪಡಿಸುವ ನಿಮಗೆ ಜನರು ಹೊಡೆಯುತ್ತಾರೆ ಮಾತ್ರವಲ್ಲ, ನಿಮ್ಮ ಪಕ್ಷದವರೇ ನಿಮಗೆ ಹೊಡೆಯುತ್ತಾರೆ ಎಂದರು.
ಇದನ್ನೂ ಓದಿ:ಚಿಕಿತ್ಸೆಗೆಂದು ದಾಖಲಾಗಿದ್ದ ಡಾಕ್ಟರ್​ ಬೆಳಗಾಗುವಷ್ಟರಲ್ಲಿ ಇಲ್ಲ!; ಪತ್ನಿಗೆ ಶವ ಸಿಗುವವರೆಗೂ ಆಸ್ಪತ್ರೆಯವರಿಗೆ ವಿಷ್ಯ ಗೊತ್ತಾಗ್ಲಿಲ್ಲ!
ಇವರು ಗೋಹತ್ಯೆ ಭಾಗ್ಯ ಕೊಟ್ಟಿದ್ದಾರೆ, ಗೋಮಾಂಸ ನಿಷೇಧ ಮಾಡಬೇಕಿರುವುದು ಕೇಂದ್ರ ಸರ್ಕಾರ, ಗೋಮಾಂಸ ಗುಜರಾತಿನಿಂದ ರಫ್ತಾಗುತ್ತಿದೆ. ಅದನ್ನು ಅದನ್ನ ತಡೆಯಲು ಇವರಿಂದ ಆಗಿಲ್ಲ. ಆದರೆ ಜನಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಮೇಲೆ ಜಿಎಸ್​​ಟಿ ಹಾಕಿದ್ದಾರೆ ಎಂದು ವೆಂಕಟೇಶ್, ವೇದಗಳನ್ನು ಓದಿದವರು ದೊಡ್ಡವರಲ್ಲ, ವೇದನೆಯನ್ನು ಅರಿತವರು ದೊಡ್ಡವರು. ಜನರ ವೇದನೆಯನ್ನು ಅರಿತವರು ಸಿದ್ದರಾಮಯ್ಯ ಎಂದು ಗ್ಯಾರಂಟಿಗಳನ್ನು ಸಮರ್ಥಿಸಿಕೊಂಡರು.
ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ: ಗೃಹಸಚಿವ ಪರಮೇಶ್ವರ್
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen + thirteen =
Remember me
