ಬೆಂಗಳೂರು:ಒಂದೇ ಕಾಲ್ ಸೆಂಟರ್ ಮೂಲಕ ಸಮಗ್ರ ವೈದ್ಯಕೀಯ ಸೇವೆ ಹಾಗೂ ಮಾಹಿತಿ ಒದಗಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಆರೋಗ್ಯ ಸಹಾಯವಾಣಿ 104 ಹಾಗೂ ಆರೋಗ್ಯ ಕವಚ 108 ಅನ್ನು ವಿಲೀನಗೊಳಿಸುವ ಸಾಧ್ಯತೆಗಳಿವೆ.
ಸದ್ಯ 104ನಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸೇವೆ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲಾಗುತ್ತಿದೆ. 108ನಲ್ಲಿ ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ. ಈ ಎರಡಕ್ಕೂ ಪ್ರತ್ಯೇಕ ಕಾಲ್ ಸೆಂಟರ್​ಗಳ ಇದೆ. ಇದು ಇಲಾಖೆಗೆ ಹೊರೆಯಾಗುತ್ತಿದೆ. ಜತೆಗೆ ಸೇವೆಯ ಕುರಿತು ದೂರು ಕೇಳಿ ಬರುತ್ತಿದೆ. ಹಾಗಾಗಿ ಈ ಎರಡೂ ಸೇವೆಗಳನ್ನು ವಿಲೀನಗೊಳಿಸಿ, ಹೊಸ ತಂತ್ರಜ್ಞಾನ ವ್ಯವಸ್ಥೆ ಅಳವಡಿಕೆಯೊಂದಿಗೆ ಪಾರದರ್ಶಕ ಸೇವೆ ನೀಡಲು ಇಲಾಖೆ ಯೋಜನೆ ರೂಪಿಸಿದೆ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 104 ಹಾಗೂ 108 ಈ ಎರಡರಲ್ಲಿ ಯಾವುದಾದರು ಒಂದು ಸಂಖ್ಯೆಯನ್ನು ಉಳಿಸಿಕೊಳ್ಳಲಾಗುತ್ತದೆ.
ಹೊಸ ಸೇವೆಯ ವಿಶೇಷತೆ: ಹೊಸ ಸೇವೆಯಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸಂಬಂಧಪಟ್ಟ ವಿಭಾಗಗಳಿಗೆ ಸಂಪರ್ಕ ಕಲಿಸುವ ಮೂಲಕ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ನೀಡಲಿದೆ. ಆರೋಗ್ಯ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ, ಕುಂದುಕೊರತೆಗಳನ್ನು ಸೂಕ್ತ ಅಧಿಕಾರಿಗಳಿಗೆ ರವಾನಿಸುವ ಅದರ ನಿವಾರಣಾ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸಲಿದೆ. ಹದಿಹರೆಯದವರ ಸಮಸ್ಯೆಗೆ ಪರಿಹಾರ, ಕ್ಯಾನ್ಸರ್ ರೋಗಿಗಳು, ಆತ್ಮಹತ್ಯೆಗೆ ಪ್ರಯತ್ನಿಸಿದವರು, ಖಿನ್ನತೆಗೆ ಒಳಗಾದವರು ಹಾಗೂ ಇತರೆ ರೋಗಿಗಳಿಗೆ ಸಮಾಲೋಚನೆ ಸೇವೆ ಒದಗಿಸುವುದು. ಸಣ್ಣಪುಟ್ಟ ಕಾಯಿಲೆಗಳಿಗೆ ಸಹಾಯವಾಣಿ ಮೂಲಕವೇ ಸಲಹೆ ಹಾಗೂ ಹತ್ತಿರ ಆರೋಗ್ಯ ಸೇವೆಯ ಮಾಹಿತಿ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಮೇಲಿನ ಹೊರೆ ಕಡಿಮೆ ಮಾಡುವುದಾಗಿದೆ.
ಆಂಬ್ಯುಲೆನ್ಸ್ ಸೇವೆ: ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ರೋಗಿಗಳು ಕರೆ ಮಾಡಿದಾಗ ತುರ್ತಾಗಿ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವುದರ ಜತೆಗೆ ಸೇವೆ ಸೌಲಭ್ಯ ದೊರೆಯುವವರೆಗೂ ಪ್ರಾಥಮಿಕ ಚಿಕಿತ್ಸೆ ನೀಡಲು ಅನುವಾಗುವಂತೆ ಸಂಬಂಧಪಟ್ಟ ವೈದ್ಯರಿಗೆ ಸಂಪರ್ಕ ಕಲ್ಪಿಸಿ ಸಲಹೆ ನೀಡುವುದು. ಇದಲ್ಲದೆ ರೋಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲು ನಿರ್ದಿಷ್ಟ ಆಸ್ಪತ್ರೆಗೆ ರೋಗಿಯನ್ನು ತಲುಪಿಸಲು ನೆರವಾಗುವುದು. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಮ್ಯಾಪಿಂಗ್ ಮಾಡಲಾಗುವುದು. ಜಿಪಿಎಸ್ ಅಳವಡಿಕೆ ಮೂಲಕ ಆಂಬ್ಯುಲೆನ್ಸ್​ಗಳ ಲೊಕೇಷನ್ ಟ್ರೇಸ್ ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
