ಸತೀಶ್ ಕೆ. ಬಳ್ಳಾರಿ ಬೆಂಗಳೂರು
ಲಾಕ್​ಡೌನ್​ನಿಂದಾಗಿ ಹೋಟೆಲ್ ಉದ್ಯಮ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕಾರ್ವಿುಕರ ವೇತನ ಕಡಿತಕ್ಕೆ ಮುಂದಾಗುತ್ತಿವೆ. ಇದರಿಂದ ಹೋಟೆಲ್​ಗಳಲ್ಲಿ ಕೆಲಸ ಮಾಡುವ ಸುಮಾರು 12 ಲಕ್ಷಕ್ಕೂ ಹೆಚ್ಚು ಕಾರ್ವಿುಕರ ಕುಟುಂಬಗಳು ಬೀದಿಗೆ ಬಂದು ಆಹಾರ ಬೇಡುವ ಪರಿಸ್ಥಿತಿ ನಿರ್ವಣವಾಗುತ್ತಿದೆ.
ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ನೋಂದಾಯಿತ ಹೋಟೆಲ್​ಗಳಿವೆ. ಸರ್ಕಾರ ಎಲ್ಲ ಹೋಟೆಲ್ ಕಾರ್ವಿುಕರಿಗೆ ಪೂರ್ಣ ವೇತನ ಪಾವತಿ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಿದೆ. ಆದರೆ ಮಾಲೀಕರು ಆದೇಶ ಧಿಕ್ಕರಿಸಿ ವೇತನ ಕಡಿತ ಮಾಡಲು ಮುಂದಾಗಿದ್ದಾರೆ. ಇದರಿಂದ ಅನ್ನ ನೀಡುವ ಹೋಟೆಲ್ ಕಾರ್ವಿುಕರ ಕುಟುಂಬಗಳು ಅನ್ನ ಬೇಡುವಂತಾಗಿದೆ.
ಭಾವನಾತ್ಮಕ ಹೊಡೆತ: ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ವಿುಕರನ್ನು ಭಾವನಾತ್ಮಕವಾಗಿ ಮನವೊಲಿಸಿ ಅರ್ಧ ವೇತನ ಪಡೆಯುವಂತೆ ಮಾಲೀಕರು ತಿಳಿಸುತ್ತಿದ್ದಾರೆ. ಈಗಿಲ್ಲ, ಮುಂದೆ ಕೊಡುತ್ತೇವೆ. ಅರ್ಧ ವೇತನ ವಿಚಾರವನ್ನು ಅಧಿಕಾರಿಗಳ ಬಳಿ ಹೇಳಿದರೆ, ಕೆಲಸದಿಂದ ತೆಗೆಯುತ್ತೇವೆಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕನಿಷ್ಟ ವೇತನ ಪಾವತಿಗೆ ಮನವಿ: ಲಾಕ್​ಡೌನ್​ನಿಂದ ಹೋಟೆಲ್​ಗಳನ್ನು ನಡೆಸಲಾಗದೆ ಕಟ್ಟಡಗಳ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಗೆ ತೊಂದರೆಯಾಗಿದೆ.
ಇದೇ ವೇಳೆ ಕಾರ್ವಿುಕರಿಗೆ ಉಚಿತ ಊಟ ಮತ್ತು ವಸತಿ ನೀಡುತ್ತಿದ್ದು, ವೇತನ ಪಾವತಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಸರ್ಕಾರ ಕಾರ್ವಿುಕರಿಗೆ ಕನಿಷ್ಠ ವೇತನ (15 ಸಾವಿರ ರೂ.) ಪಾವತಿಸಿದರೆ ಉಳಿದ ಹಣ ನಾವು ನೀಡುತ್ತೇವೆ. ಆ ಮೂಲಕ ಸರ್ಕಾರ ಹೋಟೆಲ್ ಉದ್ಯಮಮಕ್ಕೆ ಹಾಗೂ ಕಾರ್ವಿುಕರಿಗೆ ನೆರವಾಗಬೇಕು ಎಂದು ಹೋಟೆಲ್ ಉದ್ಯಮಿಗಳು ಮನವಿ ಮಾಡಿದ್ದಾರೆ.
ಹೋಟೆಲ್​ಗಳು ಮಾರಾಟಕ್ಕಿವೆ
ವ್ಯವಹಾರ ನೆಲಕಚ್ಚಿದ ಪರಿಣಾಮ ಶೇ.30 ಮಾಲೀಕರು ತಮ್ಮ ಹೋಟೆಲ್​ಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಜತೆಗೆ ಶೇ.10 ಮಂದಿ ಉದ್ಯಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇದೇ ರೀತಿ ಮುಂದುವರಿದರೆ, ಗುಣಮಟ್ಟದ ಆಹಾರ ನೀಡುವ ಹೋಟೆಲ್​ಗಳು ಮುಚ್ಚಿ ಫುಟ್​ಬಾತ್ ಹೋಟೆಲ್​ಗಳ ಸಂಖ್ಯೆ ಹೆಚ್ಚಾಗಲಿದೆ. ಸರ್ಕಾರ ಹೋಟೆಲ್ ಉದ್ಯಮಕ್ಕೆ ಕೆಲ ವಿನಾಯಿತಿ ಹಾಗೂ ರಿಯಾಯಿತಿ ನೀಡಲು ಮುಂದಾಗಬೇಕು ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ರಾಜ್ಯಾಧ್ಯಕ್ಷ ಬಿ.ಚಂದ್ರಶೇಖರ್ ಹೆಬ್ಬಾರ್ ಒತ್ತಾಯಿಸಿದ್ದಾರೆ.
ಕಾರ್ವಿುಕರ ಒತ್ತಾಯಗಳು
ಸರ್ಕಾರ, ಹೋಟೆಲ್ ಮಾಲೀಕರು ಸಮನ್ವಯ ಮಾಡಿಕೊಂಡು ಪೂರ್ಣ ವೇತನ ಪಾವತಿ.
ಕಾರ್ವಿುಕರ ಕುಟುಂಬಕ್ಕೆ ಸರ್ಕಾರದ ದಿನಸಿ ಕಿಟ್ ವಿತರಣೆ.
ಇಎಸ್​ಐ ಮತ್ತು ಪಿಎಫ್​ಗೆ ತೊಂದರೆ ಆಗದಂತೆ ಕ್ರಮ.
ಉದ್ಯಮಿಗಳ ಬೇಡಿಕೆ
ಹೋಟೆಲ್ ಕಟ್ಟಡಗಳ ಬಾಡಿಗೆಗೆ ಶೇ.50 ರಿಯಾಯಿತಿ ನೀಡಲು ಮಾಲೀಕರಿಗೆ ಸೂಚನೆ ನೀಡಬೇಕು. ಇದಕ್ಕೆ ಬದಲಿಯಾಗಿ ಮಾಲೀಕರಿಗೆ ಸರ್ಕಾರ ಆಸ್ತಿ ತೆರಿಗೆ ಪಾವತಿಯಲ್ಲಿ ವಿನಾಯಿತಿ.
ಮುಂದಿನ 6 ತಿಂಗಳು ಜಿಎಸ್​ಟಿ ಪಾವತಿಯಿಂದ ವಿನಾಯಿತಿ.
ವಿದ್ಯುತ್ ಬಿಲ್​ನಲ್ಲಿ ಮಿನಿಮಂ ಶುಲ್ಕ ಕಡಿತ ಮಾಡಿ, ಉಪಯೋಗಿಸಿದಕ್ಕಷ್ಟೇ ಬಿಲ್ ಪಾವತಿ ಅವಕಾಶ.
ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್​ಗಳ ಪರವಾನಗಿ ನವೀಕರಣಕ್ಕೆ ಹೆಚ್ಚುವರಿ ಅವಕಾಶ.
ಮೊಬೈಲ್ ರಿಚಾರ್ಜ್, ಎಲೆಕ್ಟ್ರಿಕ್ ಅಂಗಡಿ ತೆರೆಯಲು ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
