ಬೆಂಗಳೂರು:ಕಂಬಳವನ್ನು ರಾಷ್ಟ್ರ ಹಾಗೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭವಿಷ್ಯದಲ್ಲಿ ಕಂಬಳ ಪ್ರೀಮಿಯರ್ ಲೀಗ್ (ಕೆಪಿಎಲ್) ಆಯೋಜಿಸುವ ಚಿಂತನೆಯನ್ನು ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಪ್ರಕಟಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಕಂಬಳ ಈಗ ರಾಜ್ಯ ರಾಜಧಾನಿಯನ್ನು ಪ್ರವೇಶಿಸಿದೆ. ಮುಂದಿನ ದಿನಗಳಲ್ಲಿ ಇತರೆಡೆಯೂ ಕಂಬಳ ನಡೆಸುವ ಉದ್ದೇಶ ಇದೆ. ಕಂಬಳಕ್ಕೆ ಇನ್ನಷ್ಟು ಜನಪ್ರಿಯತೆ ತಂದುಕೊಡುವ ಹಿನ್ನೆಲೆಯಲ್ಲಿ ಇತರ ಕ್ರೀಡೆಗಳ ಲೀಗ್ ಪಂದ್ಯಾವಳಿ ಮಾದರಿಯಲ್ಲೇ ಕಂಬಳ ಪ್ರೀಮಿಯರ್ ಲೀಗ್ ಸಂಘಟಿಸುವತ್ತ ಲಕ್ಷ್ಯ ಹರಿಸಲಾಗಿದೆ. ಇದಕ್ಕೆ ಎಲ್ಲ ವಲಯಗಳ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಸಾಕಾರ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಕಾಂತಾರ ಸಿನಿಮಾ ತೆರೆ ಕಂಡ ಬಳಿಕ ಕಂಬಳ ನಾಡಿನೆಲ್ಲೆಡೆ ಮನೆಮಾತಾಗಿದೆ. ಇದರ ಯಶಸ್ಸನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕಂಬಳ ಆಯೋಜಿಸುವ ಸಹಕಾರ ಪಡೆಯಲಾಗುವುದು. ಬೆಂಗಳೂರು ಕಂಬಳ ಯಶ ಪಡೆಯಲು ಕೋಣಗಳ ಯಜಮಾನರು ಸಹಕಾರ ಸ್ಮರಣೀಯ. ಇದೇ ರೀತಿ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರ ಸಹಕಾರದೊಂದಿಗೆ ಕಂಬಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವತ್ತ ಲಕ್ಷ್ಯ ಹರಿಸಲಾಗಿದೆ ಎಂದು ಪ್ರಕಾಶ್ ಶೆಟ್ಟಿ ವಿವರಿಸಿದರು.
ಪ್ರತೀ ವರ್ಷ ಕಂಬಳ ನಡೆಸಿ:
ಸಂಸ್ಕೃತಿ ಹೆಸರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ಇಲ್ಲದ ನೆಪ ಮಾಡಿ ಬ್ಯಾನ್ ಮಾಡುವ ಹುನ್ನಾರ ನಡೆದಿದೆ. ಇದರಿಂದ ನಮ್ಮ ಆಚರಣೆಗಳಿಗೆ ತಡೆ ಬೀಳುವ ಆತಂಕ ಎದುರಾಗಿದೆ. ನಾಡಿನ ಸಂಸ್ಕೃತಿ ಉಳಿಸುವ ದೃಷ್ಟಿಯಿಂದ ಕಂಬಳವನ್ನು ಪ್ರತೀ ವರ್ಷ ನಡೆಸಬೇಕು. ಇದರಿಂದ ಉದ್ಯೋಗಾವಕಾಶವೂ ಹೆಚ್ಚಳವಾಗಲಿದೆ. ವರ್ಷ ವರ್ಷವೂ ಜನರಿಗೆ ಉದ್ಯೋಗ ಒದಗಿಸಲೂ ಕಂಬಳವನ್ನು ನಡೆಸಬೇಕು ಎಂದು ನಟಿ ಸಂಜನಾ ಗಲ್ರಾನಿ ಸಲಹೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
