ಶಿವಾನಂದ ತಗಡೂರು ಬೆಂಗಳೂರು
ಅಕ್ಷಯ ತೃತೀಯಾ ಶುಭ ಕಾರ್ಯಗಳಿಗೆ ಪ್ರಶಸ್ತ ದಿನ. ಮದುವೆ, ಗೃಹಪ್ರವೇಶ ಮತ್ತಿತರ ಸಮಾರಂಭಗಳನ್ನು ಮುಹೂರ್ತವನ್ನೂ ನೋಡದೆ ಈ ದಿನ ನೆರವೇರಿಸಬಹುದು ಎಂಬ ನಂಬಿಕೆ ಇದೆ. ಆದರೆ, ಈ ಭಾನುವಾರ ಅಕ್ಷಯ ತೃತೀಯಾ ಮತ್ತು ಬಸವ ಜಯಂತಿಯ ಡಬಲ್ ಸಂಭ್ರಮ ಆಚರಿಸುವ ವಾತಾವರಣ ಇಲ್ಲ. ಕಾರಣ ಕರೊನಾ ವಿಘ್ನ.
ಹೌದು, ಅಕ್ಷಯ ತದಿಗೆ ದಿನ ಚಿನ್ನಾಭರಣ, ಹೊಸ ವಸ್ತುಗಳನ್ನು ಖರೀದಿಸಿದರೆ ಅಕ್ಷಯ ವಾಗುತ್ತದೆ ಎಂಬುದು ನಂಬಿಕೆ. ಆದರೆ, ಈ ಬಾರಿ ತದಿಗೆ ಖರೀದಿಗೆ ಲಾಕ್​ಡೌನ್ ತಡೆಯೊಡ್ಡಿದೆ. ಜತೆಗೆ ಮದುವೆ, ಗೃಹ ಪ್ರವೇಶ ಸೇರಿ ಸಾಲು ಸಾಲು ಶುಭಕಾರ್ಯಗಳನ್ನು ಏ. 26ರಂದು ನಿಶ್ಚಯಿಸಿ ಕೊಂಡವರು ನಿರಾಶರಾಗಿದ್ದಾರೆ. ಹಾಗಿದ್ದರೂ ಇದೇ ಮುಹೂರ್ತದಲ್ಲಿ ಶುಭ ಕಾರ್ಯ ನಡೆಸಬೇಕೆಂಬ ಆಶಾವಾದದಿಂದ ರಾಜ್ಯಾದ್ಯಂತ ತಾಲೂಕು ಮತ್ತು ಜಿಲ್ಲಾಡಳಿತದ ಅನುಮತಿಗೆ ಸಾವಿರಾರು ಜನರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.
ಸಿಂಪಲ್ ಮದುವೆಗೂ ಸೈ: ಮದುವೆಗೆ 20 ಜನರಿಗಿಂತ ಹೆಚ್ಚು ಸೇರುವಂತಿಲ್ಲ ಎಂದು ನಿರ್ಬಂಧ ಹೇರಿ ಅನುಮತಿ ನೀಡಲಾಗುತ್ತಿದೆ. ಅಷ್ಟೇ ಸಾಕು ಎಂದು ನಿರ್ಧರಿಸಿರುವ ಬಹಳಷ್ಟು ಜನರು ಸಿಂಪಲ್ ಮದುವೆಗೂ ಮುಂದಾಗಿದ್ದಾರೆ. ಇನ್ನಷ್ಟು ಜನರು ಅನುಮತಿಗಾಗಿ ಕಾದು ಕುಳಿತಿದ್ದಾರೆ.
ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಗೆ ಜನರು ಆದ್ಯತೆ ನೀಡುತ್ತಾರೆ. ಇದಕ್ಕಾಗಿ ವರ್ಷ ಪೂರ್ತಿ ಹಣ ಕೂಡಿಟ್ಟಿರುತ್ತಾರೆ. ಲಭ್ಯವಿರುವ ಮಾಹಿತಿ ಪ್ರಕಾರ ಅಕ್ಷಯ ತೃತೀಯಾ ಒಂದೇ ದಿನ ರಾಜ್ಯದಲ್ಲಿ ಕನಿಷ್ಠ ಒಂದರಿಂದ ಒಂದೂವರೆ ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಇನ್ನು ಬೇಸಿಗೆ ರಜೆಯ ಕಾರಣಕ್ಕೆ ಏಪ್ರಿಲ್, ಮೇ ತಿಂಗಳಲ್ಲಿ ಶುಭ ಕಾರ್ಯಗಳು ಹೆಚ್ಚಾಗಿರುವುದರಿಂದ ಅಧಿಕ ಪ್ರಮಾಣದ ವಹಿವಾಟು ನಡೆಯುತ್ತದೆ. ಆದರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲ ಉದ್ಯಮಕ್ಕೂ ಹಿನ್ನಡೆ ಆಗಿದೆ.
ತೆರಿಗೆ ಖೋತಾ
ಚಿನ್ನಾಭರಣ ವಹಿವಾಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲಾ ಶೇ.1.5 ತೆರಿಗೆ ಸಲ್ಲಿಕೆಯಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ ಚಿನ್ನಾಭರಣ ವಹಿವಾಟಿನಲ್ಲಿ ರಾಜ್ಯದ ಖಜಾನೆಗೆ ಶೇ.1.5 ತೆರಿಗೆ ನಿರಾಯಾಸವಾಗಿ ಹರಿದು ಬರುತ್ತಿತ್ತು. ಈಗ ವ್ಯವಹಾರ ಬಂದ್ ಆಗಿರುವ ಕಾರಣ ತೆರಿಗೆಯೂ ಖೋತಾ ಆಗಿದೆ.
900 ಟನ್ ಚಿನ್ನ ಆಮದು:ಚಿನ್ನಾಭರಣ ಬಳಸುವ ದೇಶಗಳಲ್ಲಿ ಭಾರತಕ್ಕೆ ಅಗ್ರ ಸ್ಥಾನ. ಪ್ರತಿ ವರ್ಷ 900 ಟನ್ ಚಿನ್ನ ದೇಶಕ್ಕೆ ಆಮದಾಗುತ್ತದೆ. ಪ್ರತಿ ತಿಂಗಳು ಚಿನ್ನದ ವಹಿವಾಟು 0.75 ಟನ್. ಅಕ್ಷಯ ತೃತೀಯ ಒಂದೇ ದಿನ 1.50 ರಿಂದ 2 ಟನ್ ಚಿನ್ನ ಮಾರಾಟವಾಗಿರುವ ದಾಖಲೆ ಇದೆ.
ಮದುವೆಗೆ ಸಿಗದ ಆಭರಣ
ಮದುವೆಗಾಗಿ ಆಭರಣ ಮಾಡಲು ಮುಂಗಡ ನೀಡಿದ್ದ ಜನರು ಈಗ ಆಭರಣವೂ ಇಲ್ಲ, ಇತ್ತ ಹಣವೂ ಇಲ್ಲ ಎಂದು ಕಾಯತೊಡಗಿದ್ದಾರೆ. ಆಭರಣವಿಲ್ಲದೆ, ನೆಂಟರಿಷ್ಟರನ್ನು ಕರೆಯದೆ ಹೇಗೆ ಮದುವೆ ಮಾಡಲು ಸಾಧ್ಯ ಎಂದು ಬಹಳಷ್ಟು ಜನರು ಮದುವೆ ಮುಂದಕ್ಕೆ ಹಾಕಿದ್ದಾರೆ. ಆದರೆ, ಅದೇ ದಿನ ಮದುವೆ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಜನರು ಕನಿಷ್ಠ ತಾಳಿ, ಕಾಲುಂಗರ, ಓಲೆಗಳನ್ನಾದರೂ ಕೊಡಿ ಎಂದು ಚಿನ್ನಬೆಳ್ಳಿ ಆಭರಣ ಅಂಗಡಿ ಮಾಲೀಕರಿಗೆ ದುಂಬಾಲು ಬಿದ್ದಿದ್ದಾರೆ.
ಲಾಕ್​ಡೌನ್​ನಿಂದ ಮನೆ ಸೇರಿರುವವರನ್ನು ರಂಜಿಸಲು ಫ್ಲೋರಿಡಾದ ಮಹಿಳೆ ಮಾಡಿದ್ದು ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
