ಕೋಲಾರ:ಜಿಲ್ಲೆಯ ನರಸಾಪುರ ಬಳಿಯಿರುವ ಐಫೋನ್​ ಸಾಧನಗಳನ್ನು ಜೋಡಿಸುವ ವಿಸ್ಟ್ರಾನ್​ ಕಾರ್ಖಾನೆಯ ಮೇಲೆ ವೇತನ ವಿಚಾರದಲ್ಲಿ ಕಾರ್ಮಿಕರು ದಾಳಿ ನಡೆಸಿರುವ ವಿಚಾರ ಗೊತ್ತೇ ಇದೆ. ಆದರೆ ಈ ಒಂದೇ ಒಂದು ದಾಳಿಯಿಂದಾಗಿ ಐಫೋನ್​ ಸಂಸ್ಥೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ.
ಇದನ್ನೂ ಓದಿ:ಶೂದ್ರರಿಗೆ ಅರ್ಥವೇ ಆಗುವುದಿಲ್ಲ, ಅದಕ್ಕೇ ಅವರು ಸಿಟ್ಟಾಗುತ್ತಾರೆ! ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿಕೆ
ದಾಳಿ ನಡೆಸಿದ ನೌಕರರು ಸುಮಾರು 21 ಸಾವಿರ ಐಫೋನ್​ಗಳನ್ನು ಧ್ವಂಸ ಮಾಡಿದ್ದಾರೆ. ಜತೆಯಲ್ಲಿ ದುಬಾರಿ ಬೆಲೆಯ ಸಾವಿರಾರು ಐಫೋನ್​ಗಳನ್ನು ಕದ್ದಿದ್ದಾರೆ. ಕಚೇರಿಯ ಗಾಜು ಸೇರಿ ಅನೇಕ ವಸ್ತುಗಳನ್ನು ಪುಡಿ ಪುಡಿ ಮಾಡಲಾಗಿದೆ. ದಾಳಿಯಿಂದಾಗಿ ಸುಮಾರು 437 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿಸ್ಟ್ರಾನ್​ ಕಂಪನಿ ತಿಳಿಸಿದೆ. ಈ ವಿಚಾರವಾಗಿ ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ:ರೈತ ಹೋರಾಟದಲ್ಲಿ ಪಿಜ್ಜಾ! ರೈತರು ವಿಷ ಕುಡಿದರೆ ತಲೆ ಕೆಡಿಸಿಕೊಳ್ಳಲ್ಲ, ಪಿಜ್ಜಾ ತಿಂದರೆ ಪ್ರಶ್ನೆಯೇಕೆ ಎಂದ ಗಾಯಕ
ಈ ಪ್ರಕರಣದ ಕುತಿತಾಗಿ ಆ್ಯಪಲ್​ ಸಂಸ್ಥೆ ವಿಚಾರಣೆ ಆರಂಭಿಸಿದೆ. ‘ನಾವು ಆ್ಯಪಲ್​ ತಂಡದ ಸದಸ್ಯರು ಮತ್ತು ಲೆಕ್ಕ ಪರಿಶೋಧಕರನ್ನು ಕೋಲಾರಕ್ಕೆ ಕಳುಹಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಮತ್ತು ಪ್ರಕರಣದ ತನಿಖೆಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ’ ಎಂದು ಆ್ಯಪಲ್​ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
