ಬೀದರ್:ಆರೋಗ್ಯ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಬಡವರಿಗೆ ಸೇರಬೇಕಾಗಿದ್ದ ಔಷಧಿಗಳು ನದಿಯ ಪಾಲಾದ ಘಟನೆ ಬೀದರ್​ನಲ್ಲಿ ನಡೆದಿದೆ.
ಔಷಧಿ ಮಾತ್ರೆಗಳನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ನದಿಗೆ ಎಸೆದಿದ್ದಾರೆ. ಇದರಿಂದ ಮಾತ್ರೆಗಳು, ಟಾನಿಕ್, ಚುಚ್ಚುಮದ್ದು, ಓಆರ್​​ಎಸ್ ಪ್ಯಾಕೆಟ್​​ಗಳು ಸೇರಿದಂತೆ ಅಪಾರ ಪ್ರಮಾಣದ ಔಷಧಿಗಳು ಭಾಲ್ಕಿ ತಾಲ್ಲೂಕಿನ ಇಂಚೂರ್ – ಗೋರಚಿಂಚೋಳಿಯ ಮಾಂಜ್ರಾ ಚುಳಕಿ ನಾಲಾ ಜಲಾಶಯದ ಪಾಲಾಗಿದೆ.
ನದಿಗೆ ಎಸೆದಿರುವ ಔಷಧಿಗಳ ಅವಧಿ ಇನ್ನೂ ಮುಗಿದಲ್ಲ. ಗರ್ಭಿಣಿಯರು ಬಳಸುವ ಮಾತ್ರೆಗಳು ಕೂಡ ನದಿಯ ಪಾಲಾಗಿದೆ. ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕಿದ್ದ, ಮಾತ್ರೆಗಳು ನದಿಯ ಪಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನದ ಬಗ್ಗೆ ಸಾರ್ವಜನಿಕರ ಪ್ರಶ್ನಿಸಿದ್ದಾರೆ.
Sign in to your account
Please enter an answer in digits:two × four =
Remember me
