ಬೆಂಗಳೂರು:ಆರ್ಟ್ ಆಫ್ ಲಿವಿಂಗ್​​ನ ರಮಣೀಯವಾದ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಮೂರು ದಿವಸಗಳ ಅಂತಾರಾಷ್ಟ್ರೀಯ ಸಿರಿಧಾನ್ಯ, ಸಾವಯವ ಹಾಗೂ ಪ್ರಾಕೃತಿಕ ರೈತ ಸಮಾವೇಶವು ಆರಂಭವಾಯಿತು.

ಪ್ರಖ್ಯಾತ ಖಾದ್ಯಗಳಾದ ಉಪ್ಪಿನಕಾಯಿ, ಸಿಹಿತಿಂಡಿಗಳು, ಧಿಡೀರ್ ಆಹಾರಗಳು, ಹಿಟ್ಟುಗಳು, ಇತ್ಯಾದಿಗಳನ್ನು ಸಾವಿರಾರು ಜನರು ಸಮಾವೇಶಕ್ಕೆ ಭೇಟಿ ನೀಡಿ ಕೊಂಡರು. ಈ ವಸ್ತು ಪ್ರದರ್ಶನದಲ್ಲಿ 180 ಸಣ್ಣ ಮಳಿಗೆಗಳಿದ್ದು, ಇವುಗಳಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.

ಸಾವಯವ ಕೃಷಿ, ಪ್ರಾಕೃತಿಕ ಕೃಷಿಗೆ ಅವಶ್ಯಕವಾದ ವಸ್ತುಗಳ ವಿವರಣೆ, ಬೀಜಗಳು, ಮಾರಾಟದ ವ್ಯವಸ್ಥೆ, ಹೆಚ್ಚು ಫಸಲನ್ನು ಪಡೆಯಲು ಕಳೆಗಿಡಗಳ ತಡೆಗಟ್ಟುವಿಕೆ, ಇವುಗಳ ವಿವರಣೆಗಳಿವೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಇವೆಲ್ಲವೂ ಮನ್ನಣೆಯನ್ನು ಪಡೆದಿವೆ.

ಈ ಮೇಳವನ್ನು ಕರ್ನಾಟಕದ ಸನ್ಮಾನ್ಯ ಕೃಷಿ ಮಂತ್ರಿಗಳಾದ ಚಲುವನಾರಾಯಣಸ್ವಾಮಿ ಅವರು ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ಸೂಪರ್ ಫುಡ್​ಳು ಹೇಗೆ ಫ್ಯಾಶನ್ ಆಗಿದೆ ಎಂದು ವಿವರಿಸಿದರು.

ರೈತರು, ರೈತ ಉತ್ಪಾದಕರ ಸಂಘಗಳು, ಫುಡ್ ಪ್ರಾಸೆಸ್ಸಿಂಗ್ ಸಂಘಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಕೊಳ್ಳುವವರ, ಮಾರಾಟಗಾರರ ವೇದಿಕೆ ಇಲ್ಲಿ ನಿರ್ಮಿತವಾಗಿದೆ. ಪ್ರತಿ ದಿನ 15,000 ಜನರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಮತ್ತು ಈ ಮೂರು ದಿವಸಗಳ ಮೇಳದಲ್ಲಿ 50,000 ಜನರು ಲಾಭ ಪಡೆದುಕೊಳ್ಳಲಿದ್ದಾರೆ.
WPL 2024: ಕಳೆದ ಬಾರಿ ಅನ್​ಸೋಲ್ಡ್​ ಆಗಿದ್ದ ಕಶ್ವಿಗೆ ಈ ಬಾರಿ ಬಂಪರ್​: ಕನ್ನಡತಿ ವೃಂದಾಗೂ ಕುಲಾಯಿಸಿದ ಲಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
