ಬೆಂಗಳೂರು:ಕರೊನಾ ಸೋಂಕನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಏನಾದರೂ ಒಂದು ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಅದಾಗ್ಯೂ ಕರೊನಾ ನಿಯಂತ್ರಣಕ್ಕೆ ಅಗತ್ಯವಾಗಿ ಅನುಸರಿಸಬೇಕಾದ ಕೋವಿಡ್​-19 ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ. ಇದನ್ನು ಮನಗಂಡ ಪೊಲೀಸ್ ಇನ್​ಸ್ಪೆಕ್ಟರ್​ ಒಬ್ಬರು ಅಭಿಯಾನವೊಂದನ್ನೇ ಆರಂಭಿಸಿದ್ದಾರೆ.
ಯಾವುದೇ ಸಮಸ್ಯೆ ಪರಿಹಾರಕ್ಕೆ ಒಂದು ಸುಲಭದ ಸೂತ್ರವಿದ್ದೇ ಇರುತ್ತದೆ. ಹಾಗೇ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಸಮಸ್ಯೆಯನ್ನು ನಿವಾರಿಸಲು ಕೂಡ ಒಂದು ಸೂತ್ರವನ್ನು ಹೇಳಿದ್ದಾರೆ ಬೆಂಗಳೂರಿನ ಪೊಲೀಸ್​ ಇನ್​ಸ್ಪೆಕ್ಟರ್​ ಎಲ್​.ವೈ. ರಾಜೇಶ್​. ಯಾವುದಾದರೂ ಸಮಸ್ಯೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದರು ಎಂಬಂತೆ ಇವರೂ ಕರೊನಾ ಸೋಂಕಿನಿಂದ ಪಾರಾಗುವ ಒಂದು ಎಳೆಯನ್ನು ತಿಳಿಸಿದ್ದಾರೆ.
ಇದನ್ನೂ ಓದಿ:‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..
ಕರೊನಾದಿಂದಾಗಿ ಜನರ ಜೀವ-ಜೀವನ ಎರಡೂ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ಪೂರ್ತಿಯಾಗಿ ತೊಲಗುವವರೆಗೂ ಈ ಸಂಕಷ್ಟ ತಪ್ಪಿದಲ್ಲ. ಕರೊನಾ ಸೋಂಕನ್ನು ಪೂರ್ತಿಯಾಗಿ ತೊಲಗಿಸಬೇಕೆಂದರೆ ಕೋವಿಡ್ ನಿಯಮವನ್ನು ಸರಿಯಾಗಿ ಪಾಲನೆ ಮಾಡಬೇಕು. ಮಾಸ್ಕ್​ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸುವುದು ಮುಂತಾದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇದು ಸರಿಯಾಗಿ ಪಾಲನೆ ಆಗಬೇಕೆಂದರೆ ನಮಗೆ ಇದು ಪದೇಪದೆ ನೆನಪಾಗುತ್ತಿರಬೇಕು. ಹಾಗೆ ನೆನಪಾಗಲಿ ಎಂದೇ ನಾನು ಈ ದಾರ (ಸೂತ್ರ) ಕಟ್ಟಿಕೊಳ್ಳುತ್ತಿದ್ದೇನೆ. ಕರೊನಾ ಪೂರ್ತಿಯಾಗಿ ತೊಲಗುವವರೆಗೂ ಹೀಗೆ ದಾರವನ್ನು ಕಟ್ಟಿಕೊಳ್ಳುತ್ತಿರುತ್ತೇನೆ. ನೀವೂ ಇದನ್ನು ಅನುಸರಿಸಿ, ಮತ್ತೆ ಮೂವರಿಗೆ ತಿಳಿಸುವ ಮೂಲಕ ಅಭಿಯಾನ ಮುಂದುವರಿಸಿ ಎಂದಿರುವ ಅವರು ಈ ಅಭಿಯಾನವನ್ನು ಥ್ರೆಡ್ ಫಾರ್ ನೇಷನ್ ಎಂಬ ಹೆಸರಲ್ಲಿ ಆರಂಭಿಸಿದ್ದಾರೆ. ಅವರ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಟರಾದ ಕಿಚ್ಚ ಸುದೀಪ್, ವಸಿಷ್ಠ ಸಿಂಹ, ನಟಿ ಪಾರೂಲ್ ಯಾದವ್ ಮುಂತಾದವರು ಬೆಂಬಲ ಸೂಚಿಸಿದ್ದಾರೆ.
Thanks to Sri@KicchaSudeepfor supporting this initiative to fight against Covid-19.#ThreadForNationpic.twitter.com/87ERe9M7hw
— L y Rajesh (@LyRajesh1)June 24, 2021

I support the#ThreadForNationcampaign.. an initiative by@LyRajesh1and team..ನಮ್ಮ ಆರಕ್ಷಕರ ಮನವಿಗೆ ಸ್ಪಂದಿಸೋಣ, ಸದಾ ಜಾಗರೂಕರಾಗಿ ಬಾಳೋಣ..🙏🏼pic.twitter.com/lliugbXwJD
— Vasishta N Simha (@ImSimhaa)June 24, 2021

ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + three =
Remember me
