ನವದೆಹಲಿ: ಥ್ರೆಡ್ಸ್​, ಮೆಟಾ ಆರಂಭಿಸಿದ ಹೊಸ ಸಾಮಾಜಿಕ ಪ್ಲಾಟ್‌ಫಾರ್ಮ್, ಎಲಾನ್ ಮಸ್ಕ್ ಟ್ವಿಟರ್‌ಗೆ ಪೈಪೋಟಿ ನೀಡುತ್ತಿದೆ. Instagramನ ಬ್ರ್ಯಾಂಡಿಂಗ್ ಹಾಗೂ ರಚನೆಯೊಂದಿಗೆ, ಥ್ರೆಡ್ಸ್​ ಬಳಕೆದಾರರಿಗೆ ಸುಲಭವಾಗಿ ಲಾಗ್ ಇನ್ ಮಾಡಲು, ಸ್ನೇಹಿತರನ್ನು ಹುಡುಕಲು ಮತ್ತು ಅವರ ಸಂಪರ್ಕ ಸಾಧಿಸಲು ಅನುಮತಿಸುತ್ತದೆ. ಮೊದಲ ದಿನವೇ 30 ಮಿಲಿಯನ್ ಅಂದರೆ 3 ಕೋಟಿ ಬಳಕೆದಾರರು ಥ್ರೆಡ್ಸ್​ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ:Twitter vs Threads; ಥ್ರೆಡ್ಸ್​ನಲ್ಲಿ ಒಮ್ಮೆ ಲಾಗಿನ್​ ಮಾಡಿದರೆ ಡಿಲೀಟ್ ಮಾಡುವುದು ಅಸಾಧ್ಯ ​
ಪಠ್ಯ-ಆಧಾರಿತ ಚಾಟ್ ಅಪ್ಲಿಕೇಶನ್ ಎಂದೇ ಕರೆಯಲ್ಪಡುತ್ತಿರುವ ಥ್ರೆಡ್ಸ್​, ಟ್ರೆಂಡಿಂಗ್​ ವಿಷಯಗಳ ಬಗ್ಗೆ ಮಾತನಾಡಲು ವೇದಿಕೆಯನ್ನು ನೀಡುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಕ್ರಿಯೇಟರ್​​ಗಳನ್ನು ಇಲ್ಲಿ ಅನುಸರಿಸಬಹುದಾಗಿದ್ದು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಬಹುದು. ಈ ಮೂಲಕ ಟ್ವಿಟರ್​ನಲ್ಲಿ ಮಾಡಿದಂತೆಯೇ ಅವರ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಸೃಜನಶೀಲತೆಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಬಹುದು.
ಇದನ್ನೂ ಓದಿ:ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಪ್ರಸ್ತುತ ಟ್ವಿಟರ್​ನಲ್ಲಿ 450 ಮಿಲಿಯನ್​ ಅಂದರೆ 45 ಕೋಟಿ ಬಳಕೆದಾರರನ್ನು ಹೊಂದಿದೆ. ಒಂದೇ ದಿನಕ್ಕೆ ಥ್ರೆಡ್ಸ್​ನಲ್ಲಿ 3 ಕೋಟಿ ಜನರು ನೊಂದಾಯಿಸಿಕೊಂಡಿದ್ದು ನೋಂದಣಿದಾರರ ಸಂಖ್ಯೆ ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಾಗಲಿದೆ. ಆದರೆ ಕೆಲ ದಿನಗಳ ನಂತರ ಟ್ರೆಂಡ್​ ಇಳಿದಂತೆಯೇ ನಿತ್ಯವೂ ಎಷ್ಟು ಜನರು ಹೊಸ ಮಾಧ್ಯಮವನ್ನು ಬಳಸಲಿದ್ದಾರೆ ಎನ್ನುವುದರ ಆಧಾರದ ಮೇಲೆ ಥ್ರೆಡ್ಸ್​, ಟ್ವಿಟರ್​ಅನ್ನು ಮುಳುಗಿಸುತ್ತಾ ಇಲ್ಲವೇ ಎನ್ನುವುದು ತಿಳಿದುಬರಲಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + sixteen =
Remember me
