ಬೆಂಗಳೂರು:ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಕಾಮುಕರು ಗ್ರಾಮದಲ್ಲಿಯೇ ಓಡಾಡಿಕೊಂಡಿದ್ದಲ್ಲದೆ, ಆರೋಪಿಯೊಬ್ಬ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ನೀಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿ ಮೂಲದ ಮಹಿಳೆ ಮನೆಯಿಂದ ಹೊರಹೋದ ಸಂದರ್ಭದಲ್ಲಿ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಹಿಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು. ಇದರಿಂದ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂದು ಗೊತ್ತಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ಕು ತಂಡಗಳನ್ನು ರಚನೆ ಮಾಡಿದ್ದರು. ಬಳಿಕ ಆರೋಪಿಗಳಾದ ಹರಿಶ್​, ಜಯಂತ್​ ಮತ್ತು ಸೋಮ ಅಲಿಯಾಸ್ ಸೋಮಶೇಖರನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ವೇದಿಕೆ ಮೇಲೆಯೇ ಕಿಸ್​ ಕೇಳಿದ ನಿರ್ದೇಶಕ: ಹೀರೋಯಿನ್​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…
ಗಾಂಜಾ ಮತ್ತಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿಗಳು ಮೃತದೇಹ ಸಿಕ್ಕ ಜಾಗದಲ್ಲಿ ಯಾರಿಗೂ ಸಂಶಯ ಬರದಂತೆ ಓಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಧ್ಯಮಗಳಿಗೂ ಆರೋಪಿ ಹರೀಶ್​ ಬೈಟ್ ನೀಡಿದ್ದ. ಮೃತದೇಹ ಸಿಕ್ಕ ಜಾಗದಲ್ಲಿಯೇ ಇದ್ದು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಮುಂದಾಗಿದ್ದರು. ಮಹಿಳೆ ಹಾಗೂ ಆಕೆಯ ಮಗು ಕಾಣದೆ ಇದ್ದಾಗ ಕುಟುಂಬಸ್ಥರಿಂದಲೂ ಹುಡುಕಾಟ ನಡೆದಿತ್ತು. ಈ ವೇಳೆ ಆರೋಪಿ ಹರೀಶ್ ಸಹ ಹುಡುಕಾಡುವ ಡ್ರಾಮಾ ಮಾಡಿದ್ದ. ಹುಡುಕಲು ಹೋದ ಕೆಲವೇ ನಿಮಿಷದಲ್ಲಿ ಮಹಿಳೆ ಜೊತೆಯಲ್ಲಿದ್ದ ಮಗುವನ್ನು ಆರೋಪಿ ಕರೆತಂದಿದ್ದ.
ಕಿರಾತಕರು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎನ್ನುವಂತೆ ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆಯಲ್ಲಿ ಚಾಣಾಕ್ಷತನ ಮೆರೆಯಿತು. ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನು ಐದೇ ನಿಮಿಷದಲ್ಲಿ ಕರೆತಂದಿದ್ದ ಆರೋಪಿ ಹರೀಶನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಯಿತು.
ಎಷ್ಟೇ ಕೇಳಿದರೂ ಆಸಾಮಿ ಮಾತ್ರ ಒಂದೊಂದು ಕಥೆ ಕಟ್ಟುತ್ತಿದ್ದ. ಕೊನೆಗೆ ಪೊಲೀಸ್​ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಹರೀಶ್​ ನಿಜಾಂಶವನ್ನು ಕಕ್ಕಿದ್ದಾರೆ. ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಮೂವರು ಸೇರಿ ಮಹಿಳೆಯನ್ನು ಅತ್ಯಾಚಾರ ಮಾಡಿರುವ ಬಗ್ಗೆ ಬಾಯ್ಬಿಟ್ಟ ಕಿರಾತಕ.
ಆರೋಪಿಗಳು ಬಲೆಗೆ ಬೀಳಲು ಪೊಲೀಸ್ ಡಾಗ್ ಪ್ರಮುಖ ಪಾತ್ರ ವಹಿಸಿತ್ತು. ಕೊಲೆ ಪ್ರಕರಣದ ಸ್ಥಳ ಮಹಜರಿಗೆ ಶ್ವಾನ ದಳವನ್ನು ಕರೆಸಲಾಗಿತ್ತು. ಅಲ್ಲಿನ ವಾಸನೆಯನ್ನು ಗ್ರಹಿಸಿ ಶ್ವಾನವು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣದ ಮೂರನೇ ಆರೋಪಿ ಮನೆ ಬಾಗಿಲಿಗೆ ಬಂದಿತ್ತು. ಈ ವೇಳೆ ಶ್ವಾನದಳದ ಜತೆ ಜಿಗಣಿ ಠಾಣೆಯ ಸಿ.ಪಿ.ಐ. ಮಂಜುನಾಥ್ ಹಾಗೂ ಪೊಲೀಸರ ತಂಡ ತೆರಳಿತ್ತು. ಇದೇ ಮಾಹಿತಿ ಆಧರಿಸಿ ಪೊಲೀಸರು ತನಿಖೆಗೆ ಇಳಿದಿದ್ದರು. ಮೊದಲು ಜಯಂತ್​ನನ್ನ ವಶಕ್ಕೆ ಪಡೆದು ಪೊಲೀಸರ ಭಾಷೆಯಲ್ಲಿ ಬಾಯಿ ಬಿಡಿಸಿದ್ದರು.
ಇದನ್ನೂ ಓದಿ:ಚಂದ್ರಸ್ಪರ್ಶಕ್ಕೆ ಒಂದೇ ಹಂತ; ಲ್ಯಾಂಡರ್​ ಮಾಡ್ಯೂಲ್​ ಯಶಸ್ವಿ ಬೇರ್ಪಡೆ
ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೈಗೈದಿದ್ದ ಕಾಮುಕ ಸೋಮಶೇಖರ್​, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡೇಟು ಬಿದ್ದಿದೆ. ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಫೈರಿಂಗ್ ನಡೆದಿದೆ. ಇಂದು ಬೆಳಗ್ಗೆ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ದಾಗ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪೋಲೀಸ್ ಸಿಬ್ಬಂದಿ ಮಾದಪ್ಪ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ನಡೆಸಿ, ಎಸ್ಕೇಪ್ ಆಗಲು ಮುಂದಾದಾಗ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್​, ಆರೋಪಿ ಸೋಮನ ಎಡಗಾಲಿಗೆ ಗುಂಡಿಕ್ಕಿದ್ದಾರೆ. ಗುಂಡೇಟು ತಿಂದ ಆರೋಪಿಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಇನ್ನೇನು ಅಂತ್ಯಸಂಸ್ಕಾರ ಶುರು ಆಗಬೇಕು ಎನ್ನುವಾಗಲೇ ಕೈ ಕಾಲು ಆಡಿಸಿದ ಬಾಲಕ!

ಪೊಟ್ಯಾಶಿಯಂ ಅಧಿಕವಾಗಿರುವ ಆರೋಗ್ಯಕರ ಆಹಾರಗಳಿವು… ಇವುಗಳ ಸೇವನೆಯಿಂದ ಸಿಗಲಿದೆ ಹಲವು ಲಾಭ

ಮಂಡ್ಯದ ಕೆ.ಆರ್.ಪೇಟೆ ಮೂಲದ ಯುವನಟ ಮುಂಬೈನಲ್ಲಿ ಹೃದಯಾಘಾತಕ್ಕೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 16 =
Remember me
