ವಿಜಯನಗರ:ಜಿಮ್​ ಟ್ರೇನರ್​​ ಒಬ್ಬಾತನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮೂರು ದಿನಗಳ ಹಿಂದೆ ನಡೆದಿದ್ದ ಪ್ರಕರಣವನ್ನು ಭೇದಿಸಿದಂತಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದ ಧನ್ಯಕುಮಾರ್ (31) ಭೀಕರವಾಗಿ ಕೊಲೆಗೀಡಾದ ಜಿಮ್​ ಟ್ರೇನರ್​. ರವಿ (24), ಮಲ್ಲಿಕಾರ್ಜುನ (25), ಸುದೀಪ್ (21) ಬಂಧಿತ ಆರೋಪಿಗಳು. ಧನ್ಯಕುಮಾರ್ ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾಗಿದ್ದು, ಬೇವಿನಹಳ್ಳಿ ಬಳಿ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ.
ಎರಡು ರೌಡಿ ಗುಂಪುಗಳ ನಡುವಿನ ವಿಚಾರದಿಂದಾಗಿ ಈ ಕೊಲೆ ನಡೆದಿದೆ. ಒಂದು ಗುಂಪಿನೊಂದಿಗೆ ಧನ್ಯಕುಮಾರ್ ಗುರುತಿಸಿಕೊಂಡಿದ್ದು, ಆತ ಬೆಳೆಯಬಾರದು ಎಂಬ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನೂ ತನಿಖೆ ನಡೆಯುತ್ತಿದೆ, ಬೇರೆಯವರೂ ಈ ಪ್ರಕರಣದಲ್ಲಿ ಇರುವ ಮಾಹಿತಿ ಇದೆ ವಿಜಯನಗರ ಎಸ್​ಪಿ ಅರುಣ್​​ಕುಮಾರ್ ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಸ್ನೇಹಿತರ ಜತೆ ಊಟಕ್ಕೆ ಹೋಗಿದ್ದಾಗ ಧನ್ಯಕುಮಾರ್​ ಕೊಲೆ ನಡೆದಿದ್ದು, ಆರೋಪಿಗಳ ಪತ್ತೆಗಾಗಿ ಹರಪನಹಳ್ಳಿ ಡಿವೈಎಸ್​​ಪಿ, ಸಿಪಿಐ ಮತ್ತು ಹರಪನಹಳ್ಳಿ, ಅರಸಿಕೇರೆ, ಹಲವಾಗಲು ಪಿಎಸ್ಐಗಳ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 1 =
Remember me
