ಮಂಗಳೂರು:ಗುರುಪುರ ಕೈಕಂಬ ಸೇರಿದಂತೆ ವಿವಿಧ ಕಡೆ ಯುವಕರ ತಂಡವೊಂದು ಐಷಾರಾಮಿ ಕಾರುಗಳಲ್ಲಿ ಸುತ್ತಾಡುತ್ತಾ ಅಮಾಯಕ ಶಾಲಾ- ಕಾಲೇಜು ವಿದ್ಯಾರ್ಥಿನಿಯರು, ಯುವತಿಯರಿಗೆ ಆಮಿಷವೊಡ್ಡಿ, ಮೋಸದ ಬಲೆಗೆ ಬೀಳಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ.ನಗರದ ಹೊರವಲಯದ ಗುರುಪುರ ವ್ಯಾಪ್ತಿಯಲ್ಲಿನ ಅಪ್ರಾಪ್ತ ಶಾಲಾ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಪೊಳಲಿ ನಿವಾಸಿ ಮುಹಮ್ಮದ್ ಮುನೀರ್ (28), ಕೈಕಂಬ ನಿವಾಸಿಗಳಾದ ತಸ್ವಿನ್, ಸಾದಿಕ್ ಬಂಧಿತ ಆರೋಪಿಗಳು. ಮುನೀರ್ ಪ್ರಧಾನ ಆರೋಪಿಯಾಗಿದ್ದು, ಇನ್ನುಳಿದವರು ಆತನಿಗೆ ಸಹಕಾರ ನೀಡಿದ್ದಾರೆ. ತನಿಖೆ ಮುಂದುವರಿದಿದ್ದು, ಹಲವರು ಬಂಧನವಾಗಲು ಬಾಕಿ ಇದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.ಗುರುಪುರ ಕೈಕಂಬ ಪರಿಸರದಲ್ಲಿ ವಿದ್ಯಾರ್ಥಿನಿಯರು, ಯುವತಿಯರನ್ನು ಗುರಿಯಾಗಿಸಿಕೊಂಡು ಯುವಕರ ಗುಂಪು ಕಾರ್ಯಾಚರಿಸುತ್ತಿದೆ. ಆರಂಭದಲ್ಲಿ ಸ್ನೇಹ ಬೆಳೆಸಿ, ತಿಂಡಿ-ತಿನಿಸು ಕೊಡಿಸುವುದು, ಇತರ ವಸ್ತುಗಳನ್ನು ತೋರಿಸಿ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ನಂತರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನೀಡುತ್ತಿರುವುದು ಕಂಡುಬಂದಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವಂತೆ ಕಾಣಿಸುತ್ತಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಮುನೀರ್ ಎಂಬಾತ ಶಾಲೆಯ ಸಮೀಪ ನಿಂತುಕೊಂಡು ಬಾಲಕಿಗೆ ಆಮಿಷವೊಡ್ಡಿ ಸ್ನೇಹ ಬೆಳೆಸಿದ್ದಾನೆ. ವಸ್ತುಗಳನ್ನು ಗಿಫ್ಟ್ ಕೊಡುವ ಮೂಲಕ ಆಕರ್ಷಿಸಿದ್ದಾನೆ. ಕೊನೆಗೆ ಬಾಲಕಿಯಿಂದ ಮೊಬೈಲ್ ನಂಬರ್ ಪಡೆದು ಪ್ರೀತಿಯ ಬಲೆಗೆ ಬೀಳಿಸಿ, ನಂತರ ಬಾಲಕಿಯಿಂದಲೇ ಆಕೆಯ ಖಾಸಗಿ ಫೋಟೊ, ವಿಡಿಯೋ ಪಡೆದುಕೊಂಡಿದ್ದಾನೆ. ಲೈಂಗಿಕವಾಗಿ ಸಹಕರಿಸದಿದ್ದಲ್ಲಿ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆಯೊಡ್ಡಿದ್ದಾನೆ.ಬಾಲಕಿಗೆ ಕಿರುಕುಳ ನೀಡುತ್ತಿರುವುದು ಪೋಷಕರ ಗಮನಕ್ಕೆ ಬಂದ ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಮೂವರ ಬಂಧನವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪೈಕಿ ಮುನೀರ್ ವೃತ್ತಿಯಲ್ಲಿ ಚಾಲಕ. ಉಳಿದವರು ಕೂಡ ಅಪರಾಧದ ಇತಿಹಾಸ ಹೊಂದಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eleven =
Remember me
