ಬೀದರ್:ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ‌ಮೂವರು ಸಹೋದರರು ನೀರು ಪಾಲಾಗಿರುವ ಭೀಕರ ಘಟನೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಚಳಕಾಪುರ ವಾಡಿಯಲ್ಲಿ ನಡೆದಿದೆ.
ಮೊದಲು 16 ವರ್ಷದ ಕಿರಿಮಗ ಹನುಮಂತ ರೆಡ್ಡಿ ಕೃಷಿ ಹೊಂಡದಲ್ಲಿ ಕೈಕಾಲು ಮುಖ ತೊಳೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿನಲ್ಲಿ ಬೀಳುತ್ತಾನೆ. ಆತನ ರಕ್ಷಣೆಗೆ ಹೋದ ಎರಡನೇ ಸಹೋದರ ಕರಿಬಸಪ್ಪ (18) ಕೂಡ ನೀರಿನಲ್ಲಿ ಸಿಲುಕುತ್ತಾನೆ. ಇಬ್ಬರನ್ನು ರಕ್ಷಿಸಲು ಮುಂದಾದ ಇನ್ನೊರ್ವ ಸಹೋದರ ಈರಪ್ಪನೂ ಸಹ ನೀರಿನಲ್ಲಿ ಮುಳಗಿ ಜೀವ ಕಳೆದುಕೊಳ್ಳುತ್ತಾನೆ.
ಇದನ್ನೂ ಓದಿ:ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!
ಮೂವರ ಸಹೋದರ ಪೈಕಿ ಯಾರಿಗೂ ಈಜಲು ಬರದ ಹಿನ್ನೆಲೆಯಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಖಟಕಚಿಂಚೋಳಿಯ ಮೂಲದವರಾಗಿದ್ದು, ಜಮೀನಿನಲ್ಲಿ ಕೆಲಸ ಮಾಡಿದ ಬಳಿಕ ಮೂವರೂ ಕೃಷಿ ಹೊಂಡಕ್ಕೆ ಹೋದಾಗ ದುರಂತ ಸಂಭವಿಸಿದೆ.(ದಿಗ್ವಿಜಯ ನ್ಯೂಸ್​)
ನನ್ನ ಮಗನನ್ನು ಬಿಟ್ಬಿಡು ನಿಂಗೇನು ಬೇಕು ತೆಗೆದುಕೋ: ಕಾಮುಕನ ಕೈಗೆ ಸಿಕ್ಕ ಮಹಿಳೆ ಬಚಾವ್​ ಆಗಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
