ರೋಣ:ಆಸ್ತಿವಿವಾದ ಹಿನ್ನೆಲೆಯಲ್ಲಿ ಸ್ವಂತ ತಮ್ಮನನ್ನು, ಮೂವರ ಸಹೋದರರು ಸೇರಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ಬಳಿ ನಡೆದಿದೆ.ಇದನ್ನೂ ಓದಿ:ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿಗಳು; ರಾಜ್ಯ ಸರ್ಕಾರದ ವಿರುದ್ಧ ಎಚ್​ಡಿಕೆ ವಾಗ್ದಾಳಿ!ಶೇಖಪ್ಪ ನವಲಗುಂದ (38) ಮೃತ ವ್ಯಕ್ತಿಯಾಗಿದ್ದು, ಜೂನ್ 30ರಂದು ಜಿಗಳೂರು ರಸ್ತೆಯ ಜಮೀನಿನಲ್ಲಿ ಈತನನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಲೋಕಪ್ಪ ನವಲಗುಂದ, ರೇವಣಪ್ಪ ನವಲಗುಂದ ಮತ್ತು ಬಸಪ್ಪ ನವಲಗುಂದ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ಎಕರೆ ಜಮೀನಿಗಾಗಿ ನಾಲ್ಕು ಜನ‌ಸಹೋದರರ ನಡುವೆ ಕಲಹ ಶುರುವಾಗಿತ್ತು.ಇದನ್ನೂ ಓದಿ:ಬೆಂಗಳೂರಲ್ಲಿ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್: ಭಾರತದ ಅಗ್ರ ಬೈಕರ್‌ಗಳು ಸೇರಿ120 ಮಂದಿ ಭಾಗಿತನ್ನ ಪಾಲಿನ ಜಮೀನಿನಲ್ಲಿ ಸೈಟ್​ ಮಾಡುವ ವಿಚಾರವನ್ನು ಹೊಂದಿದ್ದ ಶೇಖಪ್ಪ, ಎರಡು ಎಕರೆ ಜಮೀನಿನಲ್ಲಿ ತನ್ನ‌ ಪಾಲು ಕೊಡುವಂತೆ ಒತ್ತಾಯಿಸುತ್ತಿದ್ದ. ಈ ನಡುವೆ ಜಮೀನಿಗಾಗಿ ನಾಲ್ಕು ಜನರ ನಡುವೆ ಗಲಾಟೆಯಾಗಿದ್ದು, ಮೂವರು ಸೇರಿ ಶೇಖಪ್ಪನಿಗೆ ಕೊಡಲಿಯಿಂದ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
