ಕೋಲಾರ:ಮನೆ ಬಳಿಯೇ ಆಟವಾಡುತ್ತಿದ್ದ ಮೂವರು ಮಕ್ಕಳನ್ನು ತನ್ನತ್ತ ಸೆಳೆದ ಜವರಾಯ ನೀರಿನ ರೂಪದಲ್ಲಿ ಬಂದು ಅವರ ಪ್ರಾಣಹೊತ್ತೊಯ್ದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಒಂದೇ ಕುಟುಂಬದ 8 ವರ್ಷದ ಬಾಲಕಿ ಮೋಹಿಕ, 7 ವರ್ಷದ ಬಾಲಕ ಫಯಾಜ್, 12 ವರ್ಷದ ಸಾದಿಕ್ ದುರ್ಮರಣಕ್ಕೀಡಾಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಕುಂಬಾರಪಾಳ್ಯದ ರೈಲ್ವೆ ಅಂಡರ್ ಪಾಸ್ ಬಳಿಯ ಕಾಲುವೆಯಲ್ಲಿ ನೀರು ನಿಂತಿತ್ತು. ಆಟವಾಡುತ್ತ ಮನೆಯಿಂದ ಹೊರಬಂದ ಮಕ್ಕಳು ಕಾಲುವೆ ಬಳಿ ಬಂದಿದ್ದಾರೆ. ಕಾಲುವೆಯಲ್ಲಿ ನೀರಾಟ ಆಡುತ್ತಲೇ ಮುಳುಗಿ ಪ್ರಾಣಬಿಟ್ಟಿದ್ದಾರೆ. ಮೃತ ದೇಹಗಳನ್ನು ಹೊರತೆಗೆಯಲಾಗಿದ್ದು, ಪಾಲಕರು-ಸಂಬಂಧಿಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್​ನಲ್ಲಿ ಒಂಟಿ ಮಹಿಳೆ ಪಕ್ಕದಲ್ಲಿ ಕೂರ್ತಾರೆ… ಕ್ಷಣಾರ್ಧದಲ್ಲಿ ಮಾಡಬಾರದ್ದನ್ನು ಮಾಡಿ ಎಸ್ಕೇಪ್ ಆಗ್ತಾರೆ ಹುಷಾರ್​​!

VIDEO| ಆ ಏರಿಯಾ ಪೂರ್ತಿ ಆಕೆಯದ್ದೇ ದರ್ಬಾರ್! ಯಾರಾದ್ರು ಹೋದ್ರೆ ಏನ್​ ಮಾಡ್ತಾಳೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
