ಬಾಗಲಕೋಟೆ:ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಕರಳು ಹಿಂಡುವ ದುರ್ಘಟನೆ ನಡೆದಿದ್ದು, ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲೇ ಮೂವರು ಮಕ್ಕಳು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಶಿವಾನಿ (12), ಶಿವಶಂಕರ (10) ಹಾಗೂ ಶಿವಶ್ರೀ (6) ಮೃತ ದುರ್ದೈವಿಗಳು. ಮಕ್ಕಳ ತಾಯಿ ಭಾಗ್ಯಶ್ರೀ ಚಿಕ್ಕಯ್ಯ ಮಠದ(30) ಬದುಕುಳಿದಿರುವುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:ನಾನು ಏನೇ ಮಾಡಿದ್ರೂ ಬಾಕ್​-ಆಫೀಸ್​ ಹಿಟ್​ ಆಗಲ್ಲ … ಆರ್ಶದ್​ ವಾರ್ಸಿ ಬೇಸರ
ಬಂಡಿಗಣಿ ಗ್ರಾಮದ ದುರ್ಗಾದೇವಿ ಗುಡಿಗೆ ಹೋಗುವ ಮಾರ್ಗದ ಗುಡ್ಡದಲ್ಲಿ ಮಕ್ಕಳು ಸಾವನ್ನಪ್ಪಿದ್ದು, ಅಸ್ವಸ್ಥಗೊಂಡಿದ್ದ ತಾಯಿಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮಕ್ಕಳ ಸಾವು ಹೇಗಾಯಿತು ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಸ್ಥಳಕ್ಕೆ ಭೇಟಿ ವಿಚಾರಣೆ ನಡೆಸಿದ್ದಾರೆ. ತಾಯಿ ತಾನು ವಿಷ ಕುಡಿದು, ಮಕ್ಕಳಿಗೂ ವಿಷ ಕುಡಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಇದನ್ನೂ ಓದಿ:ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಗರ್ಭಿಣಿಯಾಗಿದ್ರಾ? ಬಾಲಿವುಡ್​ ಗಲ್ಲಿಯಲ್ಲಿ ಹರಿದಾಡ್ತಿದೆ ಮತ್ತೊಂದು ಸುದ್ದಿ!
ಮೃತ ಮಕ್ಕಳ ತಂದೆ ಚಿಕ್ಕಯ್ಯ ಮಠದ ಎರಡು ವರ್ಷಗಳ ಹಿಂದೆ ಕೊಲೆಯಾಗಿದ್ದರು. ತಾಯಿ ಮತ್ತು ಮೂವರು ಮಕ್ಕಳು ಮಾತ್ರ ಬಂಡಿಗಣಿ ಗ್ರಾಮದಲ್ಲಿ ವಾಸವಿದ್ದರು. ಇದೀಗ ಮಕ್ಕಳು ಸಹ ಮೃತಪಟ್ಟಿದ್ದು, ತಾಯಿ ಏಕಾಂಗಿಯಾಗಿದ್ದಾಳೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಸಂಬಳ ಕೋಡೋಕೆ ಕಾಸಿಲ್ಲ ಎನ್ನುವ ಸರ್ಕಾರಕ್ಕೆ ಇದ್ಯಾಕೆ ಬೇಕು..? ಸಾಮಾನ್ಯರ ಆಕ್ರೋಶಕ್ಕೂ ಕಾರಣವಿಲ್ಲದಿಲ್ಲ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
