ಗದಗ:ಒಬ್ಬಳ ಪ್ರಾಣ ಉಳಿಸಲು ಹೋದ ಇನ್ನಿಬ್ಬರು ಕೂಡ ಪ್ರಾಣ ಜೀವ ಕಳೆದುಕೊಂಡಿದ್ದು, ಈ ಮೂವರ ಪಾಲಿಗೆ ಗುಟುಕು ನೀರೇ ಮುಳುವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ‌ಅತ್ತಿಕಟ್ಟಿ ತಾಂಡಾದಲ್ಲಿ ಈ ಅವಘಡ ಸಂಭವಿಸಿದೆ.
ಇಲ್ಲಿನ ಸುನಿತಾ ಲಕ್ಷ್ಮಣ ಲಮಾಣಿ (9), ಅಂಕಿತಾ ಲಕ್ಷ್ಮಣ ಲಮಾಣಿ (13), ಸುನಿತಾ ಲೋಕೇಶ್ ಲಮಾಣಿ (10) ಸಾವಿಗೀಡಾದ ಬಾಲಕಿಯರು. ಈ ಪೈಕಿ ಬಾಲಕಿಯೊಬ್ಬಳು ಕೃಷಿ ಹೊಂಡದಲ್ಲಿನ ನೀರು ಕುಡಿಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನೀರು ಕುಡಿಯುತ್ತಿದ್ದ ಬಾಲಕಿ ನೀರಲ್ಲಿ ಮುಳುಗುತ್ತಿರುವುದನ್ನು ನೋಡಿದ ಇನ್ನಿಬ್ಬರು ತಕ್ಷಣ ನೆರವಿಗೆಂದು ಧಾವಿಸಿದ್ದರು. ಆದರೆ ದುರದೃಷ್ಟವಶಾತ್ ಮೂವರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ್​ ಆಶಪ್ಪ ಪೂಜಾರ, ಸಿಪಿಐ ಸುನೀಲ್ ಸೌದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿವಾದಕ್ಕೆ ಕಾರಣವಾಯ್ತು ಸೊಳ್ಳೆ ಸಾಯಿಸುವ ಬ್ಯಾಟ್​!; ಐಎಎಸ್​ ಅಧಿಕಾರಿ ವಿರುದ್ಧ ಕ್ರಿಕೆಟಿಗನ ಅಸಮಾಧಾನ
‘ವೀ ಆರ್​ ವಿದ್​ ಯೂ VR..’ ಅಂದ್ರು ಸಲ್ಮಾನ್​ ಖಾನ್​; ಬಹಿರಂಗವಾಯ್ತು ಬಿಗ್​ ಅಸೋಸಿಯೇಷನ್​..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seven =
Remember me
