| ಎನ್.ಎಲ್.ಶಿವಮಾದು ಬೆಂಗಳೂರುಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿರುವುದು ಶೈಕ್ಷಣಿಕ ಚಟುವಟಿಕೆಗಳು ಹಾಗೂ ವೃತ್ತಿಪರ ಕೋರ್ಸ್​ಗಳ ಪ್ರವೇಶ ಪ್ರಕ್ರಿಯೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಕರೊನಾ ಸಮಯದಲ್ಲಿನ ಪರಿಸ್ಥಿತಿಯೇ ಮತ್ತೊಮ್ಮೆ ಎದುರಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಹಾಳು ಮಾಡಿದಂತಾಗುತ್ತದೆ. ಈಗಾಗಲೆ ಪರೀಕ್ಷೆಯನ್ನು ಸರಳೀಕರಣಗೊಳಿಸಲಾಗಿದ್ದು, ಇದೀಗ ಮತ್ತೆ 3 ಪರೀಕ್ಷೆ ನಡೆಸುವುದರಿಂದ ಕಲಿಕಾ ಗುಣಮಟ್ಟವೂ ಕಳಪೆಯಾಗಲಿದೆ ಎಂದು ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. ಮಾರ್ಚ್-ಏಪ್ರಿಲ್​ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶವು ಮೇ ತಿಂಗಳಿನಲ್ಲಿ ಪ್ರಕಟವಾಗುತ್ತಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪಡೆದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಸ್ಕಾ್ಯನ್ ಪ್ರತಿ ಪಡೆದು ಮರು ಮೌಲ್ಯಮಾಪನ, ಮರು ಎಣಿಕೆ ಅಥವಾ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಿದ್ದರು. ಆದರೆ, ಹೊಸ ಪದ್ಧತಿಯಲ್ಲಿ ವಿದ್ಯಾರ್ಥಿಯು ಮೊದಲ ಪರೀಕ್ಷೆಯ ಫಲಿತಾಂಶ ತೃಪ್ತಿಯಾಗದಿದ್ದರೆ, ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ. ಇದೇ ರೀತಿ 3 ಅವಕಾಶಗಳನ್ನು ಪಡೆಯುವುದರಿಂದ ಶೈಕ್ಷಣಿಕ ಚಟುವಟಿಕೆಗಳು ವಿಳಂಬಕ್ಕೆ ಕಾರಣವಾಗಲಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಒತ್ತಡ:ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಹೆಚ್ಚಿನ ಅವಕಾಶಗಳು ದೊರೆತಂತಾಗಿದೆ. ಆದರೆ, ಉತ್ತೀರ್ಣರಾದ ವಿದ್ಯಾರ್ಥಿಗಳು ನೀಟ್, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿನ ಅಂಕಗಳಿಗೆ ಮತ್ತೆ ಮತ್ತೆ ಪ್ರಯತ್ನಿಸುವ ಒತ್ತಡ ಬೀಳಲಿದೆ. ಒಂದು ವೇಳೆ ವಿದ್ಯಾರ್ಥಿ ಒಪ್ಪದಿದ್ದರೂ ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿ ಒತ್ತಡಕ್ಕಾದರೂ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗುತ್ತದೆ ಎಂದು ಪಾಲಕರಾದ ಚಿರಂಜೀವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ಪರೀಕ್ಷೆಗಳು ಒಂದಿಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದರೆ, ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಒತ್ತಡ ತರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೀಟು ಕೈತಪ್ಪಲಿದೆ ಎಂಬ ಕಾರಣಕ್ಕಾಗಿ ಮತ್ತೆ ಮತ್ತೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಮುಂದಾಗುತ್ತಾರೆ. ಆದ್ದರಿಂದ ಯಾವ ರೀತಿಯಲ್ಲಿ ಅನುಷ್ಠಾನ ಮಾಡಲಿದ್ದಾರೆ ಎಂಬುದು ಮುಖ್ಯ.
| ಡಿ. ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್​ ಸಂಘಟನೆ
ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಶೈಕ್ಷಣಿಕ ವರ್ಷ ಏರು ಪೇರಾಗಲಿದೆ. ಕೊನೇ ಪರೀಕ್ಷೆಯಲ್ಲಿ ಪಾಸಾಗಿ ಕಾಲೇಜು ಸೇರುವ ವಿದ್ಯಾರ್ಥಿಗೆ ಕಲಿಕಾ ನಷ್ಟವಾಗಲಿದೆ. ಕೂಲಂಕಶವಾಗಿ ರ್ಚಚಿಸಿ ನಿರ್ಧಾರ ಮಾಡಿದ್ದರೆ ಚೆನ್ನಾಗಿರುತ್ತಿತ್ತು.
| ಬಿ.ಸಿ. ನಾಗೇಶ್, ಮಾಜಿ ಶಿಕ್ಷಣ ಸಚಿವ
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು ಸರ್ಕಾರ ಆದ್ಯತೆ ನೀಡಬೇಕಿತ್ತು. ಪರೀಕ್ಷೆಯನ್ನು ಸುಲಭಗೊಳಿಸುವ ಕೆಲಸವನ್ನು ಮಾಡುತ್ತಿದೆ. ಶಿಕ್ಷಣ ಇಲಾಖೆ ಪರೀಕ್ಷಾ ಇಲಾಖೆಯಾಗಿ ಮಾರ್ಪಾಡಾಗುತ್ತಿದೆ. ಆದ್ದರಿಂದ 3 ಪರೀಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕು.
| ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ
ಸಿಇಟಿಯಲ್ಲಿ ಪಿಯುಸಿ ಮತ್ತು ಸಿಇಟಿಯ ತಲಾ ಶೇ.50 ಅಂಕಗಳನ್ನು ಪರಿಗಣಿಸಿ ರ್ಯಾಂಕ್ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಯು ಉತ್ತಮ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎಂಬ ಉದ್ದೇಶದಿಂದ ಮೊದಲ ಪರೀಕ್ಷೆಯ ಅಂಕ ತೃಪ್ತಿಯಾಗದಿದ್ದರೆ, ಮತ್ತೊಂದು ಪರೀಕ್ಷೆ ಬರೆಯಲು ಮುಂದಾಗುತ್ತಾನೆ. ಹೀಗೆಯೇ 3 ಪರೀಕ್ಷೆ ಬರೆಯುವ ತನಕ ವೃತ್ತಿಪರ ಕೋರ್ಸ್​ಗಳ ಪ್ರವೇಶ ಪ್ರಕ್ರಿಯೆ ನಡೆಸದಂತಾಗುತ್ತದೆ. ಮಾರ್ಚ್​ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ 6 ತಿಂಗಳ ಕಾಲ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಮಂಡಳಿಗೆ ಮಾರ್ಚ್​ನಿಂದ ಸೆಪ್ಟೆಂಬರ್​ವರೆಗೂ ಪರೀಕ್ಷೆಯನ್ನೇ ನಡೆಸುವುದು ಕೆಲಸವಾಗಲಿದೆ. ಅಂದರೆ, ವರ್ಷದಲ್ಲಿ 7 ತಿಂಗಳು ಪರೀಕ್ಷೆ ನಡೆಸಬೇಕಾಗುತ್ತದೆ. ಈ ಪರೀಕ್ಷೆಗಳ ಜತೆಗೆ ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆ, ಅಂಕಪಟ್ಟಿ ವಿತರಣೆ ಕೆಲಸವಿದಂದ ಸಿಬ್ಬಂದಿ ಮೇಲೆ ಕಾರ್ಯದೊತ್ತಡ ಹೊರೆಯಾಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜತೆಗೆ, 5,8,9 ಮತ್ತು 11ನೇ ತರಗತಿ ಮೌಲ್ಯಂಕನ ನಡೆಸಬೇಕು. ಇಷ್ಟೆಲ್ಲ ಕೆಲಸಗಳನ್ನು ನಡೆಸುವುದು ಕಷ್ಟ. 7 ತಿಂಗಳು ಪರೀಕ್ಷೆ ನಡೆಸಿದರೆ, ಇನ್ನು ಉಳಿಯುವುದೇ 5 ತಿಂಗಳು. ಇದರಲ್ಲಿ ಪರೀಕ್ಷೆ ಸುಧಾರಣೆ ಸೇರಿ ಇನ್ನಿತರ ಕೆಲಸಗಳನ್ನು ಯಾವಾಗ ಮಾಡುವುದು ಎಂಬ ಪೀಕಲಾಟ ಶುರುವಾಗಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 240 ದಿನಗಳನ್ನು ಬೋಧನೆಗೆ ಮೀಸಲಿಡಬೇಕು ಎಂಬ ನಿಯಮವಿದೆ. ಆದರೆ, ಸದ್ಯ ಮತದಾರರ ಪಟ್ಟಿ ಸಿದ್ಧಪಡಿಸುವುದು, ಚುನಾವಣೆ, ಇನ್ನಿತರ ತರಬೇತಿ ಹಾಗೂ ಇಲಾಖೆ ವಹಿಸುವ ಇತರೆ ಕೆಲಸಗಳಿಂದ 180 ದಿನಗಳಷ್ಟೇ ಸಮಯ ಸಿಗುತ್ತಿದೆ. ನಿರಂತರವಾಗಿ ಮಾರ್ಚ್ ತಿಂಗಳಿನಿಂದ ಆಗಸ್ಟ್​ವರೆಗೆ ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡರೆ ಪಾಠ ಮಾಡುವುದು ಯಾವಾಗ? ಎಂದು ಶಿಕ್ಷಕ ವರ್ಗದಿಂದ ಆಕ್ಷೇಪ ವ್ಯಕ್ತವಾಗಿದೆ.
ಟ್ರಕ್​ನಲ್ಲಿ ಗೋವಿನ ದೇಹದ ಭಾಗಗಳು?; ಪ್ರಧಾನಿ ಮೋದಿಯ ಗಮನ ಸೆಳೆಯಲು ಯತ್ನಿಸಿದ ನಟಿ ಐಂದ್ರಿತಾ ರೇ!

ಶಾರುಖ್​ ಖಾನ್ ಮನೆ ಮುಂದೆ ಚಹಾ ಮಾರಲೂ ಬಿಡದ ‘ಜವಾನ’; ಟೀ ರಸ್ತೆಗೆ ಚೆಲ್ಲಿದ ಭದ್ರತಾ ಸಿಬ್ಬಂದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − nine =
Remember me
