ಶಿವಮೊಗ್ಗ:ತಾಲೂಕಿನ ವಡ್ಡಿನಕೊಪ್ಪದಲ್ಲಿ ಪತ್ನಿ ಮತ್ತು ಆಕೆಯ ಪ್ರೇಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿ ಸೇರಿ ಮೂವರಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿದೆ.
ಶಿವಮೊಗ್ಗ ವೆಂಕಟೇಶ್ವರನಗರದ 5ನೇ ಕ್ರಾಸ್‌ನ ಕೃಷ್ಣಮೂರ್ತಿ ಅವರ ಮಗ ಕೆ.ಕಾರ್ತಿಕ್ (28) ಮತ್ತು ಆತನ ಸ್ನೇಹಿತರಾದ ವಿ.ಭರತ್ (23) ಮತ್ತು ಸಂದೀಪ್ (21) ಜೀವಾವಧಿ ಶಿಕ್ಷೆಗೆ ಒಳಗಾದವರು. ಕಾರ್ತಿಕ್ ಪತ್ನಿ ಶ್ರೀರಾಮನಗರದ ರೇವತಿ, ವಿಜಯ್ ಮೃತರು.
2017ರ ಸೆ.4ರಂದು ಕಾರ್ತಿಕ್ ಮತ್ತು ರೇವತಿ ಅವರ ವಿವಾಹವಾಗಿತ್ತು. ಆನಂತರ ಜಗಳವಾಡಿಕೊಂಡು ಪತಿ ಕಾರ್ತಿಕ್ ಅನ್ನು ತೊರೆದಿದ್ದ ರೇವತಿ  ಶ್ರೀರಾಮಪುರದಲ್ಲಿ ತಮ್ಮ ಮನೆ ಎದುರಿದ್ದ ವಿಜಯ್‌ನನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಆಕೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾಗ ಕಾರ್ತಿಕ್, ತನ್ನ ಸ್ನೇಹಿತರೊಂದಿಗೆ ಸೇರಿ ಇಬ್ಬರನ್ನೂ ಕೊಲೆ ಮಾಡುವ ಪ್ಲ್ಯಾನ್​​ ಹಾಕಿದ್ದ.
ಇದನ್ನೂ ಓದಿ:ಟಿವಿ ಸೆಟ್ ಟಾಪ್​​​​ ಬಾಕ್ಸ್​​ನಿಂದ ವಿದ್ಯುತ್​​ ಶಾಕ್​​​ ತಗುಲಿ 4 ವರ್ಷದ ಬಾಲಕ ಮೃತ್ಯು
ಅದರಂತೆ ರೇವತಿ ಮತ್ತು ವಿಜಯ್‌ನನ್ನು ವಡ್ಡಿನಕೊಪ್ಪಕ್ಕೆ ಕರೆಸಿಕೊಂಡಿದ್ದ ಕಾರ್ತಿಕ್ ಸ್ಮೇಹಿತರ ಜತೆಗೂಡಿ ಮಚ್ಚು, ಲಾಂಗು, ಕಲ್ಲಿನಿಂದ ಹಲ್ಲೆ ನಡೆಸಿ ಇಬ್ಬರನ್ನೂ ಕೊಲೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ತುಂಗಾನಗರದ ಆಗಿನ ಸಿಪಿಐ ಮಹಾಂತೇಶ್ ಬಿ ಹೊಳಿ ಅವರು ಕಾರ್ತಿಕ್, ಭರತ್, ಸತೀಶ್ ಮತ್ತು ಸಂದೀಪ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ಮಾನು ಅವರು, ಕಾರ್ತಿಕ್, ವಿ.ಭರತ್ ಮತ್ತು ಸಂದೀಪ್ ಮೇಲಿನ ಆರೋಪ ಸಾಬೀತಾಗಿದ್ದರಿಂದ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಪ್ರಕರಣದ ಮೂರನೇ ಆರೋಪಿ ಸತೀಶ್ ತಲೆಮರೆಸಿಕೊಂಡಿದ್ದು ಆತನ ಮೇಲೂ ಪ್ರತ್ಯೇಕ ದೋಷಾರೋಪಣ ಪಟ್ಟಿ ಸಲ್ಲಿಸಿ ವಿಚಾರಣೆ ಬಾಕಿ ಇರಿಸಲಾಗಿದೆ. ಸರ್ಕಾರಿ ಅಭಿಯೋಜಕ ಜೆ.ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಜಿಮ್​ಗೆ ಎಂಟ್ರಿ ಕೊಟ್ಟ ಮರಿಯಾಮೆ; ಮ್ಯಾನೇಜರ್​ ಫುಲ್​​ ಸುಸ್ತು….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
