ಕಲಬುರಗಿ:ಮರಳು ದಂಧೆಕೋರರಿಂದ ಹೆಡ್ ಕಾನ್​ಸ್ಟೆಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಜೇವರ್ಗಿ ಠಾಣೆಯ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್​ಐ ಗೌತಮ್ ಗುತ್ತೆದಾರ್ ಮತ್ತು ಕಾನ್​ಸ್ಟೆಬಲ್ ರಾಜಶೇಖರ ಎಂಬುವರನ್ನು ಅಮಾನತು ಮಾಡಿ ಕಲಬರಗಿ ಪೊಲೀಸ್​ ವರಿಷ್ಠಾಧಿಕಾರಿ (ಎಸ್ಪಿ) ಇಶಾ ಪಂತ್ ಅವರು ಆದೇಶ ಹೊರಡಿಸಿದ್ದಾರೆ.
ಜೇವರ್ಗಿ ತಾಲೂಕಿನ ಹುಲ್ಲೂರ್ ಬಳಿ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆದರೂ ಇನ್ಸ್​ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿರಲಿಲ್ಲ. ದಂಧೆಕೋರರು ಪ್ರತಿನಿತ್ಯ ಹುಲ್ಲೂರ್ ಸ್ಟಾಕ್ ಯಾರ್ಡ್​ನಿಂದ ಅಕ್ರಮವಾಗಿ ಮರಳು ಪೂರೈಕೆ ಮಾಡುತ್ತಿದ್ದರು. ನೆಲೋಗಿ ಪಿಎಸ್ಐ ಗೌತಮ್ ಕೂಡ ಸ್ಪಾಟ್ ವಿಸಿಟ್ ಮಾಡಿರಲಿಲ್ಲ.
ಇದನ್ನೂ ಓದಿ:ಪುಸ್ತಕೋದ್ಯಮ ದಂಧೆಗೆ ಬ್ರೇಕ್: ಪ್ರಕಾಶಕರ ಮೇಲೆ ನಿಗಾ, ಗ್ರಂಥಾಲಯ ಪುಸ್ತಕ ಖರೀದಿಯಲ್ಲಿ ಬಿಗಿ
ಇನ್​​ಸ್ಪೆಕ್ಟರ್​ ಹಾಗೂ ಸಬ್​ ಇನ್ಸ್​ಪೆಕ್ಟರ್​ ಕೇವಲ ಇಬ್ಬರು ಸಿಬ್ಬಂದಿಯನ್ನು ಮಾತ್ರ ಬಂದೋಬಸ್ತ್​ಗೆ ನಿಯೋಜನೆ‌ ಮಾಡಿದ್ದರು. ಜೂನ್ 15 ರಂದು ನೆಲೋಗಿ ಠಾಣೆಯ ಹೆಡ್ ಕಾನ್ಸ್​ಟೆಬಲ್ ಮೈಸೂರ್ ಚೌಹಾಣ್ ಅವರು ಮರಳು ದಂಧೆ ತಡಯಲು ಹೋದಾಗ ಅವರ ಮೇಲೆ ದಂಧೆಕೋರರು ಟ್ರ್ಯಾಕ್ಟರ್​ ಹರಿಸಿ ಹತ್ಯೆ ಮಾಡಿದ್ದರು.
ಈ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಮೂವರು ಸಿಬ್ಬಂದಿಯನ್ನು ಎಸ್ಪಿ ಸಸ್ಪೆಂಡ್​ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ತಂಬಾಕುಮುಕ್ತ ಸಮಾಜ ಕಟ್ಟೋಣ…: ಧರ್ಮದರ್ಶನ

ಬಸ್​ಗಳಲ್ಲಿ ನಾರಿಮಣಿಯರ ಶಕ್ತಿ: ರಾಜ್ಯದಲ್ಲಿ ಯೋಜನೆ ಜಾರಿ ಬಳಿಕ ಹೆಚ್ಚಿದ ಮಹಿಳಾ ಪ್ರಯಾಣಿಕರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eight =
Remember me
