ಉತ್ತರಕನ್ನಡ:ಯಾವುದಾದರೂ ಮನೆಯ ಬಳಿ ದೊಡ್ಡದೊಂದು ಕಾಳಿಂಗ ಸರ್ಪ ಕಾಣಿಸಿಕೊಂಡರೆ, ಅದನ್ನು ಹಿಡಿಸಿ ಬೇರೆಡೆಗೆ ಸಾಗಿಸುವವರೆಗೂ ನೆಮ್ಮದಿ ಇರುವುದಿಲ್ಲ. ಅಂಥದ್ದರಲ್ಲಿ ಇಲ್ಲೊಂದು ಕಡೆ ಒಂದೇ ದಿನ ಒಂದೇ ಮನೆಯ ಬಳಿ ಮೂರು ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ.
ಉತ್ತರಕನ್ನಡ ಜಿಲ್ಲೆಯ ಕುಮಟಾದ ಅಬ್ನೊಳ್ಳಿ ಹತ್ತಿರದ ರಾಮನಾಥ ನಾಯ್ಕ ಎಂಬವರ ಮನೆಯ ಬಳಿ ಇಂದು ಈ ಮೂರು ಕಾಳಿಂಗ ಸರ್ಪಗಳು ಕಂಡು ಬಂದಿವೆ. ಆ ಪೈಕಿ ಎರಡು ಬಾವಿಯೊಳಗಿದ್ದರೆ, ಇನ್ನೊಂದು ಹಿತ್ತಲಿನಲ್ಲಿ ಕಾಣಿಸಿಕೊಂಡಿತ್ತು.
ಒಟ್ಟೊಟ್ಟಿಗೆ ಮೂರು ಕಾಳಿಂಗ ಸರ್ಪಗಳನ್ನು ಕಂಡು ಆ ಮನೆಯವರಲ್ಲದೆ ಸುತ್ತಮುತ್ತಲ ಜನರು ಕಂಗಾಲಾಗಿದ್ದು, ರಕ್ಷಣೆಗಾಗಿ ಕೂಡಲೇ ಉರಗಪ್ರೇಮಿ ಪವನ್ ನಾಯ್ಕ ಎಂಬವರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಬಾವಿಯಲ್ಲಿದ್ದ ಎರಡು ಮತ್ತು ಹಿತ್ತಲಿನಲ್ಲಿದ್ದ ಒಂದು ಸೇರಿ ಮೂರು ಕಾಳಿಂಗ ಸರ್ಪಗಳನ್ನು ಹಿಡಿದು, ಅರಣ್ಯಕ್ಕೆ ಬಿಟ್ಟಿದ್ದಾರೆ.
ಖ್ಯಾತ ನಟಿಯ ಕಾರು ಅಪಘಾತ; ಇತರ ಮೂರು ಕಾರುಗಳಿಗೆ ಡಿಕ್ಕಿ..
ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ
Sign in to your account
Please enter an answer in digits:one × four =
Remember me
