ಕಲಬುರಗಿ:ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ಕಿಂಗ್​ಪಿನ್ ಆರ್.ಡಿ. ಪಾಟೀಲ್ ಸೋದರಳಿಯ ಹಾಗೂ ಇಬ್ಬರು ಆಪ್ತರನ್ನು ಸಿಐಡಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 38ಕ್ಕೆ ಏರಿದೆ. ಆಳಂದ ತಾಲೂಕಿನ ಜವಳಿ(ಡಿ) ಗ್ರಾಮದ ಪ್ರಕಾಶ ಉಡಗಿ, ಅಫಜಲಪುರ ತಾಲೂಕಿನ ಮಣ್ಣೂರದ ಅಸ್ಲಂ ಮುಜಾವರ್ ಮತ್ತು ಕರಜಗಿ ನಿವಾಸಿ ಮುನಾಫ್ ರೇವೂರ ಅಲಿಯಾಸ್ ಮಹ್ಮದ್ ಅಯ್ಯುಬ್ ಬಂಧಿತರು. ಪ್ರಕಾಶ ಉಡಗಿ ರುದ್ರಗೌಡ ಸೋದರಳಿಯನಾಗಿದ್ದು, ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ. ಬುಧವಾರ ಬೆಂಗಳೂರಿನಲ್ಲಿ ಸಿಐಡಿಗೆ ಸಿಕ್ಕಿಬಿದ್ದಿದ್ದು, ಕಲಬುರಗಿಗೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮಕ್ಕೆ ವ್ಯವಸ್ಥೆ:ಅಸ್ಲಂ ಮತ್ತು ಮುನಾಫ್ ರುದ್ರಗೌಡನ ಅತ್ಯಾಪ್ತರು. ಬ್ಲೂಟೂತ್ ಕೊಟ್ಟು ಬರುವುದು, ಪರ್ಯಾಯ ಸಿಮ್ ಕಾರ್ಡ್ ವ್ಯವಸ್ಥೆ ಮಾಡುವುದು, ಅಭ್ಯರ್ಥಿಗಳನ್ನು ಕರೆತಂದು ಆರ್.ಡಿ. ಪಾಟೀಲ್​ಗೆ ಭೇಟಿ ಮಾಡಿಸುವಂಥ ಕೆಲಸ ಮಾಡುತ್ತಿದ್ದರು. ಧಾರವಾಡದಲ್ಲಿ ಪಿಎಸ್​ಐ ಪರೀಕ್ಷೆ ಬರೆದಿದ್ದ ರವಿಶಂಕರ ಎಂಬಾತನಿಗೆ ಅಸ್ಲಂ ಕರೆ ಮಾಡಿ ಆವಾಜ್ ಹಾಕಿದ್ದ. ಇದು ವರದಿಯಾದ ನಂತರ ತಲೆಮರೆಸಿಕೊಂಡಿದ್ದರು. ಇಬ್ಬರೂ ಬುಧವಾರ ಆಳಂದ ಚೆಕ್​ಪೋಸ್ಟ್ ಹತ್ತಿರದಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ಸಿಐಡಿ ಡಿವೈಎಸ್​ಪಿಗಳಾದ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ್, ವೀರೇಂದ್ರ ತಂಡದೊಂದಿಗೆ ತೆರಳಿ ವಶಕ್ಕೆ ಪಡೆದಿದ್ದಾರೆ. ಅಸ್ಲಂ ಮತ್ತು ಮುನಾಫ್​ನನ್ನು ಹೆಚ್ಚಿನ ವಿಚಾರಣೆಗಾಗಿ ಜೂ.8ರವರೆಗೆ ಸಿಐಡಿ ವಶಕ್ಕೆ ಪಡೆಯಲಾಗಿದೆ. ಹಲವು ಆರೋಪಿಗಳು ಕಸ್ಟಡಿಯಲ್ಲಿ ಇರುವುದರಿಂದ ವಿಚಾರಣೆ ಚುರುಕುಗೊಂಡಿದೆ.
ಕಾಟೆಗಾಂವ ಜಾಮೀನು ಅರ್ಜಿ ವಜಾ:ಪಿಎಸ್​ಐ ನೇಮಕ ಪ್ರಕರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಜತೆ ಬಂಧಿತನಾಗಿರುವ ಸೊಲ್ಲಾಪುರ ಮೂಲದ ಉದ್ಯಮಿ ಸುರೇಶ ಕಾಟೆಗಾಂವ ಜಾಮೀನು ಅರ್ಜಿಯನ್ನು ಕಲಬುರಗಿಯ ಪ್ರಥಮ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ. ಈ ಹಿಂದೆ ಜೆಎಂಎಫ್​ಸಿ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಆರೋಪದ ಮೇರೆಗೆ ಸಿಐಡಿ ಅಧಿಕಾರಿಗಳು ಮಹಾರಾಷ್ಟ್ರದಲ್ಲಿ ದಿವ್ಯಾ ಜತೆಗೆ ಈತನನ್ನು ಬಂಧಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಕರೊನಾ ಕುರಿತ ಹಣದಲ್ಲೂ ಪಾಲು ಕೇಳಿದ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ; ಅಕೌಂಟೆಂಟ್​ ಕೂಡ ಬಂಧನ..

ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
