ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್​ ಕಳೆದ 66 ದಿನಗಳಿಂದ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಪ್ರತಿಯೊಬ್ಬ ಕೈದಿಗೂ ಇರುವಂತ ನಿಯಮಗಳು ಸ್ಯಾಂಡಲ್​ವುಡ್​ ನಟ ದರ್ಶನ್​​ಗೆ ಅನ್ವಯವಾಗುವುದಿಲ್ಲವೇ ಎಂಬುದು ಎಲ್ಲರ ಗುಮಾನಿ ಆಗಿದೆ. ಇದಕ್ಕೆ ಕಾರಣ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವುದು.
ಇದನ್ನು ಓದಿ:ಸಂಸದೆ ಕಂಗನಾ ರಣಾವತ್​ಗೆ ಛೀಮಾರಿ ಹಾಕಿದ ಬಿಜೆಪಿ; ವಿವಾದ ಸೃಷ್ಟಿಸುವ ಹೇಳಿಕೆ ನೀಡದಂತೆ ವಾರ್ನಿಂಗ್
ಕಾನೂನು ಉಲ್ಲಂಘನೆ ಆಗಿದೆ ಎಂಬುದಕ್ಕೆ ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋ ಕಾಲ್​​ ಸಾಕ್ಷಿಯಾಗಿದೆ. ಮೊದಲು ವೈರಲ್​ ಆದ ಫೋಟೋದಲ್ಲಿ ಜೈಲಿನಲ್ಲಿ ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜತೆಗೆ ದರ್ಶನ್ ಒಂದು ಕೈನಲ್ಲಿ ಕಾಫಿ ಮಗ್​​ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್‌ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಬಳಿಕ ಮತ್ತೊಂದು ವಿಡಿಯೋ ಲೀಕ್​ ಆಗಿದೆ. ಅದರಲ್ಲಿ ದರ್ಶನ್​​ ಯಾರೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಿದ್ದಾರೆ.
ಇಂದು (ಆಗಸ್ಟ್​​ 26) ಬೆಳಗ್ಗೆ ಮತ್ತೊಂದು ಫೋಟೊ ಲೀಕ್​ ಆಗಿದ್ದು ಅದರಲ್ಲಿ ಬೆಡ್​​ ಮೇಲೆ ಕುಳಿತುಕೊಂಡಿರುವ ದರ್ಶನ ಅವರ ಕೈಯಲ್ಲಿ ಮೊಬೈಲ್​ ಇದೆ ಎನ್ನಲಾಗಿದೆ. ವೈರಲ್​ ಆಗಿರುವ ಫೋಟೋ ಮತ್ತು ವಿಡಿಯೋದಲ್ಲಿ ವಿಗ್​ ಇಲ್ಲದೆಯೇ ದರ್ಶನ್​​​ ಕಾಣಿಸಿಕೊಂಡಿದ್ದಾರೆ. ಈ ಸಾಮ್ಯತೆಯನ್ನು ಗುರುತಿಸುವುದರಿಂದಲೇ ಆ ವಿಡಿಯೋ ಮತ್ತು ಫೋಟೋ ದರ್ಶನ್​ ಅವರದ್ದೇ ಎಂದು ಹೇಳಲಾಗುತ್ತಿದೆ. ಇದು ದರ್ಶನ್​​ ಅವರ ವಿಚಾರದಲ್ಲಿ ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದು ಪ್ರಶ್ನೆಯಾಗಿದೆ.
ಕಾನೂನು ಉಲ್ಲಂಘನೆ ಆಗಿರುವ ಕಾರಣ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್​ಐಆರ್ ದಾಖಲಾಗಿದೆ. ಈ ಮೂರೂ ಎಫ್​ಐಆರ್​ನಲ್ಲಿಯೂ ದರ್ಶನ್​ ಹೆಸರು ಪ್ರಸ್ತಾಪ ಆಗಿದೆ. ಒಂದು ಸಿಗರೇಟ್​​ ಕೊಟ್ಟಿದ್ದಕ್ಕೆ, ಇನ್ನೊಂದು ವಿಡಿಯೋ ಕಾಲ್​ ಮಾಡಿರುವುದಕ್ಕೆ, ಮತ್ತೊಂದು ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಸಂಬಂಧು ಮೂರು ಎಫ್​ಐಆರ್​ ದಾಖಲಾಗಿದೆ. ಕೊಲೆ ಆರೋಪಿಗಳಾದ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ದರ್ಶನ್ ಆಪ್ತ ನಾಗರಾಜ್ ವಿರುದ್ಧ ಒಂದು ಎಫ್​​ಐಆರ್​ ದಾಖಲಾಗಿದೆ. ಜೈಲು ಅಧೀಕ್ಷಕರ ದೂರು ಆಧರಿಸಿ ಮೂರು ಎಫ್​ಐಆರ್ ದಾಖಲಾಗಿದ್ದು, ಈ ಹೊಸ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ದರ್ಶನ್​ ಆ್ಯಂಡ್​ ಗ್ಯಾಂಗ್​ ಮೇಲಿದೆ. 66 ದಿನಗಳಿಂದ ಜೈಲಿನಲ್ಲಿರುವ ದರ್ಶನ್​ಗೆ ಈ ಹೊಸ ಪ್ರಕರಣದಿಂದ ಜಾಮೀನು ಪಡೆಯುವಲ್ಲಿ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ.
ಮಹಾರಾಷ್ಟ್ರದಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಕುಸಿತ; ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
