ಕಲಬುರಗಿ:ರಸ್ತೆ ಬದಿ ನಿಂತಿದ್ದ ಲಾರಿಯೊಂದು ಮಗುಚಿ ಕಾರಿನ ಮೇಲೆ ಬಿದ್ದು ಒಬ್ಬನನ್ನು ಬಲಿ ಪಡೆದ ಪ್ರಕರಣದ ಬೆನ್ನಿಗೇ ರಸ್ತೆ ಬದಿ ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಕಟ್ಟಿಸಂಗಾವಿ ಗ್ರಾಮದ ಹಸನಾಪುರ‌ ಕ್ರಾಸ್ ಸಮೀಪ ಭೀಮಾ ನದಿ ಬ್ರಿಡ್ಜ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಆಕಾಶ್ ಬಡಿಗೇರ್ (21), ಶಿವು ಮ್ಯಾಗೇರಿ (21) ಮತ್ತು ಲಕ್ಷ್ಮಣ್ ಮಲವಾಡಿ (18) ಸಾವಿಗೀಡಾದವರು. ಈ ಮೂವರು ಎಸ್​.ಎನ್​. ಹಿಪ್ಪರಗಿ ಗ್ರಾಮದವರು.
ಇದನ್ನೂ ಓದಿ:Video | ಚಲಿಸುತ್ತಿದ್ದ ಕಾರಿನ ಮೇಲೇ ಬಿತ್ತು ಬೃಹತ್ ಕೊಂಬೆ; ಬೆಚ್ಚಿ ಬೀಳಿಸುವಂಥ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗಾವಿ ಯಲ್ಲಮ್ಮ ದೇಗುಲದಲ್ಲಿ‌ ಪೂಜೆ ಮುಗಿಸಿಕೊಂಡು ಬಾಡೂಟ ಮಾಡಿಕೊಂಡು ಇವರು ವಾಪಸ್​ ಹೋಗುತ್ತಿದ್ದರು. ಮಾರ್ಗಮಧ್ಯೆ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಮೂವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಲಬುರಗಿ ಸಂಚಾರಿ 1 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೇ ಮಗುಚಿ ಬಿದ್ದ ಲಾರಿ, ಕಾರಲ್ಲಿದ್ದ ವ್ಯಕ್ತಿ ಸಾವು..

ತಂದೆಯನ್ನೇ ಗುಂಡಿಟ್ಟು ಕೊಲ್ಲಿಸಿದ ಮಗಳು; ಅಪ್ಪ ಗಿಫ್ಟ್ ಕೊಟ್ಟಿದ್ದ ವಜ್ರದುಂಗುರವನ್ನೇ ಸುಪಾರಿಯಾಗಿ ನೀಡಿದ್ದಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − sixteen =
Remember me
