ಹಾವೇರಿ :ತರಕಾರಿ ಮಾರಾಟ ಮಾಡಿ ಮಗಳನ್ನು ಸಾಕಿ ವಿದ್ಯಾಭ್ಯಾಸ ನೀಡಿ ಮದುವೆ ಮಾಡಿಕೊಟ್ಟಿದ್ದ ಕುಟುಂಬ ಇದೀಗ ಮಗಳ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದೆ. ಒಂದೇ ಕುಟುಂಬದ ಮೂವರು ಸದಸ್ಯರ ಆತ್ಮಹತ್ಯೆಗೆ ಕಾರಣ ಹೊಸ ಮನೆ, ಮಗಳ ಮದುವೆ ಎನ್ನಲಾಗಿದೆ.
ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಮೃತರು. ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಗಂಡನ ತಂಗಿಯನ್ನೇ ಮದುವೆಯಾದ 2 ಮಕ್ಕಳ ತಾಯಿ!
ಸಾವಿಗೆ ಮೂಲ ಕಾರಣ ಹೊಸ ಮನೆ ಹಾಗೂ ಮಗಳ ಮದುವೆ ಎನ್ನಲಾಗುತ್ತಿದೆ. ವಸತಿ ನಿರ್ಮಾಣಕ್ಕಾಗಿ ಹಾಗೂ ಮುದ್ದಾಗಿ ಬೆಳಿಸಿದ ಮಗಳ ಮದುವೆಗೆಂದು ಸುಮಾರು 25 ಲಕ್ಷ ರೂಪಾಯಿಗೂ ಹೆಚ್ಚು ಹಣ ಸಾಲಮಾಡಿ ತಂದೆ ಹನುಮಂತಗೌಡ ಪಾಟೀಲ್ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದರಂತೆ. ಮನೆ ನಿರ್ಮಾಣಕ್ಕಾಗಿ ಸಾಲ, ಮಗಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವಳ ಮದುವೆಗಾಗಿ ಸಾಲ ಮಾಡಿಕೊಂಡು ಹೈರಾಣಾಗಿದ್ದ ಕುಟುಂಬ ಕಳೆದ ಒಂದು ತಿಂಗಳಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಭಾರಿ ಯತ್ನಿಸಿದ್ದರು ಎನ್ನಲಾಗಿದೆ. ನಿನ್ನೆ ಮಧ್ಯೆ ರಾತ್ರಿ ಸೂಸೈಡ್ ಮಾಡಿಕೊಂಡಿದ್ದ ಅಪ್ಪ – ಅಮ್ಮನನ್ನು ನೋಡಿದ ಮಗಳು ಕೂಡಾ ನನ್ನಿಂದಲೇ ಇದೆಲ್ಲಾ ಆಗಿದೆ ಎಂದು ಮನನೊಂದು ಸಾವಿಗೆ ಶರಣಾಗಿದ್ದಾಳೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ವಿರಾಟ್​​ ಕೊಹ್ಲಿ ಪ್ರತಿಮೆಗೆ ಲಿಪ್​ ಕಿಸ್​​ ಕೊಟ್ಟ ಮಹಿಳಾ ಅಭಿಮಾನಿ!
ಈ ಕುಟುಂಬದ ಸಾವಿಗೆ ಮೂಲ ಕಾರಣ ಸಾಲ. ಹನುಮಂತೆಗೌಡ ಪಿತ್ರಾರ್ಜಿತವಾಗಿ ಬಂದಿದ್ದ ಒಂದು ಏಕರೆ ಜಮಿನನ್ನು ಮಾರಾಟ ಮಾಡಿ ಕೃಷಿ ಜತೆಗೆ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದೊಡ್ಡ ಪ್ರಮಾಣದಲ್ಲಿ ತರಕಾರಿ ವ್ಯಾಪಾರ ಮಾಡಲು ಹೊಸದಾಗಿ ಟಾಟಾ ಎಸಿ ತೊಗೊಂಡಿದ್ದರು. ಆದರೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಹಿನ್ನಲೆ ಕುಟುಂಬಸ್ಥರು ನೇಣಿಗೆ ಶರಣಾಗಿದ್ದಾರೆಂದು ಮೃತರ ಸಂಬಂಧಿಕರು ಹೇಳುತ್ತಿದ್ದಾರೆ.
ಪ್ರತಿಭಟನೆ ನಡುವೆಯೇ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟ ಅನುದಾನಿತ ಶಾಲಾ ಶಿಕ್ಷಕ!



ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × two =
Remember me
