ಗದಗ:ಗುಡುಗು-ಸಿಡಿಲು ಬರುವಾಗ ಮರದ ಕೆಳಗೆ ನಿಲ್ಲಬೇಡಿ ಎಂದು ಹಿರಿಯರು ಆಗಾಗ ಎಚ್ಚರಿಸುವುದು ಹೊಸದೇನಲ್ಲ. ಆದರೆ ಅದನ್ನು ಮರೆತೋ ಅಥವಾ ಗೊತ್ತಿಲ್ಲದೆಯೋ ಮರದ ಕೆಳಗೆ ನಿಂತಿದ್ದ ಮೂವರು ಸಿಡಿಲು ಬಡಿದು ಮರಣಕ್ಕೀಡಾಗಿದ್ದಾರೆ. ಈ ಮೂವರು ಮರಣ ಹೊಂದಿರುವುದಲ್ಲದೆ ಇನ್ನಿಬ್ಬರಿಗೆ ಗಾಯಗಳಾಗಿವೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿ ಈ ದುರಂತ ನಡೆದಿದೆ. ಕುಮಾರ್ ಮಾದರ (24), ಶರಣಪ್ಪ‌ ಅಡವಿ (35) ಮತ್ತು ಮಾರುತಿ (48) ಎಂಬವರು ಮೃತಪಟ್ಟಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ರಾಜ್ಯದ ಹಲವೆಡೆ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗುತ್ತಿದ್ದು, ಗದಗದಲ್ಲೂ ಭಾರಿ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ಇವರು ಮರದ ಕೆಳಗೆ ಹೋಗಿ ಆಶ್ರಯ ಪಡೆದಿದ್ದರು. ಆದರೆ ಅದೇ ವೇಳೆಗೆ ಬಂದಪ್ಪಳಿಸಿದ ಸಿಡಿಲಿಗೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
